ಮಸ್ಕಿ: ತಾಲೂಕಿನ ಹಾಲಪುರ ಗ್ರಾಮದ ಚಂದೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆ ಪ್ರಸಕ್ತ ಸಾಲಿಗೆ ಎಲ್ಲಾ ಖರ್ಚು ವೆಚ್ಚ ತೆಗೆದು 19 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಹಕಾರಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ಸಹಕಾರಿ ಆವರಣದಲ್ಲಿ ಭಾನುವಾರ ವಾರ್ಷಿಕ ಮಾಹಸಭೆ ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರ್ಥಿಕವಾಗಿ ಅಭಿವೃದ್ದಿ ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಕರೊನಾ ಹಿನ್ನಲೆಯಲ್ಲಿ ಅವುಗಳನ್ನು ಸಾಕಾರ ಮಾಡಲು ಸಾಧ್ಯವಾಗಿಲ್ಲ. ಕಷ್ಟ ಕಾಲದಲ್ಲು ಗ್ರಾಹಕರು ಸಹಕಾರಿಗೆ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿ ಸಹಕರಿಸಿದ್ದಾರೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ ಸಹಕಾರಿಯಲ್ಲಿ ಒಟ್ಟು 1895 ಸದಸ್ಯರಿದ್ದು 24.50 ಲಕ್ಷ ಶೇರು ಬಂಡವಾಳ ಹೊಂದಿದೆ. 9.49 ಕೋಟಿ ಠೇವಣಿ ಸಂಗ್ರಹಿಸಿದು,್ದ 9 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಹಕಾರಿ ಉಪಾಧ್ಯಕ್ಷ ಎಂ.ಬಸವರಾಜ, ನಿರ್ದೆಶಕರಾದ ಅಮರಗುಂಡಪ್ಪ ಹಸಮಕಲ್, ವಾಸನಗೌಡ ಮಾಲಿಪಾಟೀಲ, ದೇವರಾಜ ಬಾಗೋಡಿ, ಚಂದ್ರಶೇಖರ ಪಾಟೀಲ್, ಬಸವರಾಜ ಪಾಟೀಲ, ವೀರೇಶ ಲ್ಲಟಗಿ, ವಿ,ರುದ್ರಮೂರ್ತಿ, ಶೇಖರಪ್ಪ ಪಾಟೀಲ, ಬಸವರಾಜ ಹೆಮ್ಮಿಗನೂರು ಸೇರಿದಂತೆ ಇತರರು ಭಾಗವಹಿಸಿದ್ದರು.