ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನ

e- ಸುದ್ದಿ, ಮಸ್ಕಿ

ವೈದ್ಯರು ರೋಗಿಗಳಿಗೆ ಬರೆದುಕೊಡುವ ಚೀಟಿಯನ್ನು ಕನ್ನಡದಲ್ಲಿ ಬರೆದುಕೊಡಬೇಕೆಂದು ತಹಸೀಲ್ದಾರ ಕವಿತಾ ಆರ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಕನ್ನಡ ಜಾಗೃತಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಬಳಕೆ ಸ್ವಲ್ಪ ಕಷ್ಟ ವಾಗಲಿದೆ ಕನ್ನಡ ಭಾಷೆ ಗಟ್ಟಿ ಗೊಳಿಸಲು ಪ್ರತಿಯೊಬ್ಬ ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ ಬರೆದು ಕೊಡುವ ಅಭ್ಯಾಸ ರೂಡಿಸಿ ಕೊಳ್ಳಬೇಕು ಎಂದು ತಹಸೀಲ್ದಾರ್ ಕವಿತಾ ಆರ್. ಹೇಳಿದರು. ನಾನಾ ಇಲಾಖೆಯ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ ವಾಗಬೇಕು. ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಕಷ್ಟ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಬಳಕೆಗೆ ತೊಂದರೆ ಇಲ್ಲ ರೋಗಿಗಳಿಗೆ ಅವರದೇ ಭಾಷೆಯಲ್ಲಿ ತಿಳುವಳಿಕೆ ನೀಡುವುದು ವೈದ್ಯರ ಕರ್ತವ್ಯ ಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಹಾಂತೇಶ ಮಸ್ಕಿ ಮಾತನಾಡಿ ವೈದ್ಯರ ದಿನಾಚರಣೆ ನಿಮಿತ್ತ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಬಗ್ಗೆ ಕ್ರಿಯಾ ಸಮಿತಿ ಅಭಿಯಾನ ಹಮ್ಮಿ ಕೊಂಡಿದೆ ಎಂದು ವಿವರಿಸಿದರು.. ವೈದ್ಯಾಧಿಕಾರಿ ಬಸವಶ್ರೀ, ಡಾ. ಮಲ್ಲಿಕಾರ್ಜುನ ಇತ್ಲಿ, ಡಾ. ಮೌನೇಶ, ಕಸಾಪ ತಾಲೂಕು ಅಧ್ಯಕ್ಷ ಘನ ಮಠದಯ್ಯ ಸಾಲಿಮಠ, ಗುಂಡೂರಾವ್ ದೇಸಾಯಿ, ಪರುಶರಾಮ ಕೋಡ ಗುಂಟಿ ಇದ್ದರು.

Don`t copy text!