ನಿತ್ಯ ನೂತನ

ನಿತ್ಯ ನೂತನ

ಸತ್ಯ ಕ್ರಾಂತಿಯ
ನಡೆದ ನಡಿಗೆ
ನುಡಿವ ನುಡಿಗಳೆ
ವಚನ ತೋರಣ
ಭಾವ ಅನುಭಾವ
ಭವದ ಚೀತ್ಕಳೆ
ಭಕ್ತಿ ಮೂಲಕೆ
ವಚನ ಚೇತನ
ಕಾಲ ಜ್ಞಾನಕೆ
ಜ್ಞಾನ ದೀವಿಗೆಯ
ಬೆಳಕ ನೀಡುವ
ವಚನ ಪ್ರಕಾಶ
ಒಡಲ ಕಡಲ
ದಂಗೆ ದಡಗಳ
ಕೊರೆತವ ತಳ್ಳಿ
ಸಿಪ್ಪಿನಿಂದ ಬಂದ
ಹೊಳೆವ ವಚನ
ಮುತ್ತುಗಳು ಇಂದು
ನಾಳೆ ಎಂದೆಂದಿಗೂ
ಅಂಧಕಾರ ಅಳಿಸಿ
ಜ್ಞಾನ ಸುಧೆಯ…
ಹರಿಸುತಿರುವ…
ವಚನ ಗಂಗೆಯು
ಜಗದ ತಾನು,ಹಿಂಸೆ
ಅಳಿಸಲೆಂದೇ ಎಲ್ಲ
ಸಹಿಸಿ,ದಹಿಸಿ……
ಜಗದೋದ್ಧಾರಕೆ
ಉದ್ಭವಿಸಿ ಬಂದ
ಶರಣ ಗಣಂಗಳಿಗೆ
ನಮೋ ನಮೋ…
ಎನುತಿಹೆನಯ್ಯಾ…

ಲೀಲಾ ಕಲಕೋಟಿ

Don`t copy text!