ನನಗೂ ಬಹುಮಾನ ಬಂದೈತೀ….

ನನಗೂ ಬಹುಮಾನ ಬಂದೈತೀ….

ನನಗೂ ಬಹುಮಾನ ಬಂದೈತೀ
ನನಗೂ ಬಹುಮಾನ ಬಂದೈತೀ…
ತಪ್ಪದೆ ನಾನು ಸಾಲೆಗೆ ಹೋಗಿ
ಟೀಚರ್ ಹೇಳಿದ ಮಾತು ಕೇಳಿ
ಚಂದಾಗಿ ಕಲಿತು ಜಾಣಳಾಗಿ
ನಾನೂ ಟೀಚರ್ ಆಗಾಕೀ…

ಅವ್ವನ ಕೂಡಾ ನಾ ಜಗಳಾಡಿ
ಹಾಕೇನ ಯುನಿಫಾರ್ಮ್ ಕಾಡಿಬೇಡಿ
ಮಳೆಯೊಳಗ ನೀರಾಟ ಆಡಿ
ನಾನರೇ ಮಜಾ ಮಾಡಾಕೀ..

ಭಾಷಣದೊಳಗ ನಾನಽ ಮೊದಲು
ಗಾಯನದೊಳಗ ನಾನಽ ಮೊದಲು
ಪೆನ್ಸಿಲ್ ಪೆಟ್ಟಿಗೆ ಡ್ರಾಯಿಂಗ್ ಪುಸ್ತಕ
ನನಗೂ ಬಹುಮಾನ ಬಂದೈತೀ..

 

ಹಮೀದಾಬೇಗಂ ದೇಸಾಯಿ ಸಂಕೇಶ್ವರ. 

 


ಇಂದಿನ ಸಂಚಿಕೆಯ ಪ್ರಾಯೋಜಕರು SUM ಕಾಲೇಜು ಲಿಂಗಸುಗೂರು

Don`t copy text!