ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂಜಗ್ರತೆ ವಹಿಸಿ- ಶಾಸಕ ಬಸನಗೌಡ ತುರ್ವಿಹಾಳ

e-ಸುದ್ದಿ, ಮಸ್ಕಿ
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಆರೋಗ್ಯ ಮುಖ್ಯವಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕರೊನಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಪರೀಕ್ಷಾ ಸಿದ್ದತೆ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ನಡೆಯುವ ಪರೀಕ್ಷೆಯನ್ನು ಇಡೀ ದೇಶವೇ ನೋಡುತ್ತಿದೆ. ಹಾಗಾಗಿ ಶಿಕ್ಷಕರು ಪರೀಕ್ಷೆ ಕೊಠಡಿಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ವಿದ್ಯಾರ್ಥಿಗಳ ತಾಪಮಾನ ಪರೀಕ್ಷೆ ಮಾಡಿ ಪರೀಕ್ಷೆಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೊವಿಡ್ ಭಯವಿಲ್ಲದೆ ಪರೀಕ್ಷೆ ನಡೆಸುವ ಜವಬ್ದಾರಿ ಶಿಕ್ಷಣ ಇಲಾಖೆಗೆ ಇರುವದರಿಂದ ಪ್ರತಿಯೊಬ್ಬರು ಕಾಳಜಿ ವಹಿಸುವುದು ಕಡ್ಡಾಯವಾಗಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ತಿಳಿಸಿದರು.
ಲಿಂಗಸುಗೂರು ಬಿಇಒ ಹುಬ್ಬಂಣ್ಣ ರಾಠೋಡ ಹಾಗು ಸಿಂಧನೂರು ಬಿಇಒ ಶರಣಪ್ಪ ಮಾತನಾಡಿ ಪರೀಕ್ಷಾ ಸಿದ್ದತೆಗಳ ಕುರಿತು ಮ,ಆಹಿತಿ ನೀಡಿದರು. ಭಾರತ ಸ್ಕೌಟ್ & ಗೈಡ್ ನ ತಾಲೂಕು ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಇತ್ಲಿ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸುವುದಾಗಿ ತಿಳಿಸಿ ಬಿಇಒ ಅವರಿಗೆ ಹಸ್ತಾಂತರಿಸಿದರು.
ಕಂದಾಯ ಇಲಾಖೆಯ ಗ್ರೇಡ್ 2 ತಹಸೀಲ್ದಾರ ಭಟ್, ತಾ.ಪಂ.ವ್ಯವಸ್ಥಾಪಕ ಗಂಗಾಧರ ಬಾಲಕಿಯರ ಪ್ರೌಡ ಶಾಲೆಯ ಮುಖ್ಯಗುರು ಬಸಪ್ಪ ತನಿಖೆದಾರ ಇದ್ದರು.

Don`t copy text!