ಗಜಲ್
ಕನ್ನಡಿಯೊಳಗಿರುವ ನಿನ್ನನ್ನು ಪ್ರೀತಿಸಬಹುದು ಮುದ್ದಿಸಲಾಗದು
ಕನಸುಗಳಲ್ಲಿ ಎಲ್ಲೆ ಮೀರಿ ಆಸ್ವಾದಿಸಬಹುದು ನಿಜದಲ್ಲಾಗದು
ಅವಕಾಶಕ್ಕಾಗಿ ಕಾಯಲಾರೆ ನಾನು ಜೀವನವಿಡೀ ಬೇಕೆನೆಗೆ ನೀನು
ಈ ಜನುಮದಲ್ಲಿ ಮಂಗಳಸೂತ್ರ ಖರೀದಿಸಬಹುದು ಕಟ್ಟಲಾಗದು
ಜನನದಲ್ಲಿ ಏಕೆ ಇಲ್ಲ ಪರಸ್ಪರ ಸಮಾಲೋಚನೆಯ ನಂಟಿನ ಬುತ್ತಿ
ಆಲಿಂಗನದಿ ಕೆಲ ಸಮಯವನ್ನು ಕಳೆಯಬಹುದು ತಡೆಯಲಾಗದು
ಕಳೆಯಲಾಗುತಿಲ್ಲ ದಿನಗಳನು ನಿನ್ನಯ ನೆನಪಿನ ಹೊರತಾಗಿ ಮುದ್ದು
ನಿನ್ನೊಂದಿಗೆ ಕಳೆದ ಕ್ಷಣಗಳನು ಆನಂದಿಸಬಹುದು ಹಿಡಿಯಲಾಗದು
‘ಮಲ್ಲಿ’ಯ ಮಲ್ಲಿಗೆ ಸುಮಲ್ಲಿ ಮುಡಿಗಾಗಿ ಕಾಯುತ ಕನವರಿಸುತಿದೆ
ಮುಂದಿನ ಜನ್ಮದಲ್ಲಿ ಬೆರೆತು ಸಂಧಿಸಬಹುದು ನಿರಾಕರಿಸಲಾಗದುು
-✍️ರತ್ನರಾಯಮಲ್ಲ
———————————————-
ಇಂದಿನ ಸಂಚಿಕೆಯ ಪ್ರಾಯೋಜಕರು SUM ಕಾಲೇಜು ಲಿಂಗಸುಗೂರು
ತುಂಬು ಹೃದಯದ ಧನ್ಯವಾದಗಳು ಸರ್ ಜೀ ss