ಸಜ್ಜಲಗುಡ್ಡದ ಶರಣಮ್ಮ ತಾಯಿ ಮಠದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ

ಸಜ್ಜಲಗುಡ್ಡದ ಶರಣಮ್ಮ ತಾಯಿ ಮಠದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ

e-ಸುದ್ದಿ, ಲಿಂಗಸುಗೂರು

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಕುಡಿಯುವ ನೀರಿನ ಶುದ್ಧಿಕರಣ ಘಟಕವನ್ನು ಸಜ್ಜಲಗುಡ್ಡದಲ್ಲಿ ಉದ್ಘಾಟಿಸಲಾಯಿತು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಲಿಂಗಸೂಗೂರು ತಾಲೂಕಿನ ಸಜ್ಜಲಗುಡ್ಡದ ಶರಣಮ್ಮನವರ ಮಾತೆಯ ಮಠದಲ್ಲಿ ಕುಡಿಯುವ ನೀರಿನ ಶುದ್ಧಿಕರಣ ಘಟಕ ಸ್ಥಾಪನೆ ಮಾಡಿ ಉದ್ಘಾಟಿಸಲಾಯಿತು.

ಮಠಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲ ವಾಗುವಂತೆ ಸಂಘದ ವತಿಯಿಂದ ಉಚಿತವಾಗಿ ಘಟಕ ಸ್ಥಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಠದ ಮುಖ್ಯಸ್ಥರಾದ ಪರಮ ಪೂಜ್ಯ ದೊಡ್ಡಬಸವಚಾರ್ಯರ ಸ್ವಾಮಿಗಳು, ವಿಕಾಸ ಅಕಾಡೆಮಿ ತಾಲೂಕು ಸಂಚಾಲಕರಾದ ಶ್ರೀ ಗವಿಸಿದ್ದಪ್ಪ ಸಾಹುಕಾರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ತಾಲೂಕು ಸಂಯೋಜಕರಾದ ಮಂಜುನಾಥ ಬ್ಯಾಗವಾಟ, ರಮೇಶ ಹೆಳವರ ಮಾವಿನಬಾವಿ, ವೀರೇಶ ಅಂಗಡಿ,ನಾಗರಾಜ ಗುರಿಕಾರ,ಸುನಿಲ್ ಮುದುಗಲ್ ಸೇರಿದಂತೆ ಮಠದ ಹಲವಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ‌

Don`t copy text!