e-ಸುದ್ದಿ, ಮಸ್ಕಿ
ತಾಲೂಕಿನ ಉದ್ಬಾಳ ಗ್ರಾಪಂ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ 1 ರಲ್ಲಿ ಶುಕ್ರವಾರ ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದರಿಂದ ಕೆಲ-ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಜರುಗಿದೆ.
ಕಡಬೂರು ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದÀ ಕೊಠಡಿಯಲ್ಲಿ ಅಂಗನವಾಡಿ ಸಿಬ್ಬಂದಿಗಳು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಬಂದು ತಮ್ಮ ಕಾರ್ಯಗಳನ್ನು ಮಾಡುತ್ತಿದ್ದಾಗ ಕೊಠಡಿಯಲ್ಲಿ ಮಕ್ಕಳು ಹಾಗೂ ಗರ್ಬಿüಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿಗಳನ್ನು ಶೇಖರಿಸಿಟ್ಟಿದ್ದ ಸ್ಥಳದಲ್ಲಿ ಹಾವು ಪ್ರತ್ಯಕ್ಷವಾಗಿದೆ ಇದನ್ನು ಕಂಡ ಅಲ್ಲಿನ ಸಿಬ್ಬಂದಿಗಳು ಭಯಬೀತರಾಗಿ ಅಕ್ಕ-ಪಕ್ಕದವನ್ನು ಕರೆದು ಹಾವು ಇದೆ ಎಂದು ಹೇಳಿದ್ದಾರೆ.
ಅಲ್ಲೆ ಇದ್ದ ಸ್ಥಳೀಯರು ಆಹಾರ ಸಾಮಗ್ರಿಗಳ ಮೂಟೆಗಳನ್ನು ತೆಗೆದು ಹಾವನ್ನು ಹೊಡೆದು ಸಾಯಿಸಿದ್ದಾರೆ. ಇದರಿಂದ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟ ಪ್ರಸಂಗ ನಡೆದಿದೆ.
ಒತ್ತಾಯ: ಕಳೆದ ಹಲವು ದಿನಗಳಿಂದ ಅಂಗನಾಡಿ ಸುತ್ತ-ಮುತ್ತ ಬೆಳೆದಿರುವ ಜಾಲಿ ಗಿಡ ಸೇರಿದಂತೆ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಪಂಗೆ ತಿಳಿಸಿದ್ದರು ಸಹ ಸಹ ಸ್ವಚ್ಛಗೊಳಿಸಿಲ್ಲ ಇದರಿಂದ ಹಾವೂ-ಚೇಳುಗಳ ಹಾವಳಿ ಹೆಚ್ಛಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಆಲ್ಲದೇ ಕೂಡಲೇ ಅಂಗನವಾಡಿ ಕೇಂದ್ರದ ಸುತ್ತ-ಮುತ್ತ ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ