ಡಾ. ಗವಿಸ್ವಾಮಿ ಎನ್ ಸುಲೋಚನಾ ಸಾಹಿತ್ಯ ಪ್ರಶಸ್ತಿ ಪ್ರಧಾನ
e-ಸುದ್ದಿ, ಹುವಿನ ಹಡಗಲಿ
ಡಾ.ಗವಿಸ್ವಾಮಿ ಎನ್ ಅವರಿಗೆ ಹೂವಿನ ಹಡಗಲಿಯಲ್ಲಿ ಸುಲೋಚನಾ ಸಾಹಿತ್ಯ ಪ್ರಶಸ್ತಿ ಪ್ರದಾನಮಾಡಲಾಯಿತು.
ನಂಜಪ್ಪ ಗುರುಮಲ್ಲಮ್ಮ ದಂಪತಿಗಳ ಉದರದಲ್ಲಿ ೧೯೮೩ ರಲ್ಲಿ ಚಾಮರಾಜನಗರ ಜಿಲ್ಹೆಯ ಗುಂಡ್ಲುಪೇಟೆ ತಾಲ್ಹೂಕಿನ ವಡ್ಡಗೆರೆಯಲ್ಲಿ ಡಾ. ಗವಿಸ್ಜವಾಮಿ ಜನಿಸಿದ್ದಾರೆ.
ವೃತ್ತಿಯಿಂದ ಪಶು ವೈದ್ಯರು.೨೦೧೬ ರಿಂದ ಸರ್ಕಾರಿ ಸೇವೆಗೆ ಸೇರಿದ್ದಾರೆ. ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಅವರ ಮೊದಲ ಕೃತಿ ಚಕ್ರ, ಅವರ ಈ ಕೃತಿಗೆ ಹೂವಿನಹಡಗಲಿಯ ಟಿ ಎಂ ಆರ್ ಪ್ರಕಾಶನದಿಂದ ಸುಲೋಚನಾ ಸಾಹಿತ್ಯ ಪ್ರಶಸ್ತಿ ಜೊತೆ ರೂ.೫೦೦೦/ ನಗದು, ಫಲಕ ನೀಡಿ ವಿಜಯನಗರ ಜಿಲ್ಹೆಯ ಹೂವಿನಹಡಗಲಿ ತಾಲ್ಹೂಕಿನ ಗವಿಮಠದಲ್ಲಿ ಸನ್ಮಾನಿಸಲಾಯಿತು.
ಇವರ ಕೃತಿಯ ಬಗ್ಗೆ e- ಸುದ್ದಿಯಲ್ಲಿ ಪುಸ್ತಕ ಪರಿಚಯ ಪ್ರಕಟಿಸಲಾಗಿತ್ತು.
ವರದಿ -ಸಾಹಿತ್ಯಪ್ರಿಯ ಶಂಕರ.
೯೮೮೬೫೭೫೪೪೧.