ಗಜಲ್
ಅರಸುತಿವೆ ಕಂಗಳು ನಿನ್ನ ಬಿಡದೆ ಸಖಾ
ಸೋತು ಬಳಲಿದರೂ ಎವೆಮುಚ್ಚದೆ ಸಖಾ…
ಬೆಳದಿಂಗಳಿರುಳೂ ಸುಡುತಿಹುದು ನೋಡು
ತಂಗಾಳಿ ಬಿಸಿಯಾಗಿ ಕಾಡಿದೆ ಸಖಾ..
ಕಾಣುತಿವೆ ತಾರೆಗಳು ಬೆಂಕಿ ಉಂಡೆಗಳಾಗಿ
ತಮ್ಮನ್ನೇ ಸುಟ್ಟುಕೊಳುತಿವೆ ವಿರಹದೆ ಸಖಾ…
ಮನದ ಬೇಗೆಯ ಹೇಗೆ ತಾಳಲಿ ನಾನು..?
ತಣ್ಣೀರ ಕೊಳವೂ ಕುದಿಯುತಿದೆ ಸಖಾ..
ಬೇಗ ಬಳಿಸಾರೆನ್ನ ತಬ್ಬಿಕೋ ಇನಿಯಾ
ಕಣ್ತುಂಬಿಕೊಳುವಳು ‘ ಬೇಗಂ ‘ ಒಲವಿಂದೆ ಸಖಾ..
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ.
ವಾವ್, ಮನದ ಬೇಗೆ ಹೇಗೆಂದರೆ, ತಣ್ಣೀರ ಕೊಳವೂ ಕುದಿಯುವಂತೆ… ಎಂತಹ ಹೋಲಿಕೆ… ಮನಸಿನ ವೇದನೆಗಿಂತ ಹೆಚ್ಚು ಯಾವುದೂ ಇಲ್ಲ.. ಅದನ್ನು ದಹಿಸಲು ಬರಬೇಕಾದ ಇನಿಯನನ್ನು ಸೊಗಸಾಗಿ ಆಮಂತ್ರಿಸಿದ್ದೀರಿ…. ಅಭಿನಂದನೆಗಳು ರಿ
ಸುಂದರ ಭಾವ ಹಮೀದಾ ಮೇಡಂ