ಹಬ್ಬದ ವಾತವರಣದಂತೆ ಕಂಗೊಳಿಸಿದ ಶಾಲೆಗಳು, ಸುಗಮವಾಗಿ ನಡೆದ 10ನೇ ತರಗತಿ ಪರೀಕ್ಷೆ


e-ಸುದ್ದಿ, ಮಸ್ಕಿ
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದ 4 ಪರೀಕ್ಷಾ ಕೇಂದ್ರಗಳಲ್ಲಿ ಹಬ್ಬದ ವಾತವಾರಣ ಸೃಷ್ಟಿಯಾಗಿತ್ತು. ಕಳೆದ ಒಂದು ವರೇ ವರ್ಷದಿಂದ ಶಾಲೆಗಳು ಸ್ಥಬ್ದವಾಗಿದ್ದವು. ಈಗ ಪರೀಕ್ಷೆಯಿಂದ ಮಸ್ಕಿ ಪಟ್ಟಣದ 4 ಪರೀಕ್ಷಾ ಕೇಂದ್ರಗಳಲ್ಲಿ ತಳಿರು ತೊರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಪರಿ ಅದ್ಬುತ್ ವಾಗಿತ್ತು.
ಕಳೆದ ಎರಡು ದಿನಗಳ ಹಿಂದೆಯೇ ಶಾಲೆಗೆ ಸ್ಯಾನಿಟೈಸರ್ ಮಾಡಿಸಲಾಗಿತ್ತು. ಸೋಮವಾರ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಗಿದೆ. ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ತಾಪಮಾನ ಚಕ್ ಮಾಡಿ ಪರೀಕ್ಷಾ ಕೇಂದ್ರ ಕಳಿಸಲಾಯಿತು.
ವಿದ್ಯಾರ್ಥಿಗಳು ಕೂಡ ಬಹುದಿನಗಳ ನಂತರ ಪರೀಕ್ಷಾ ಕೇಂದ್ರದತ್ತ ಉತ್ಸಾಹದಿಂದ ಆಗಮಿಸುತ್ತಿರುವ ದೃಶ್ಯ ಕಂಡುಬಂದಿತು. ಶಾಲೆಯ ಮುಂಬಾಗದಲ್ಲಿ ಟೆಂಗಿನಗರಿ, ಮಾವಿನ ಎಲೆಯ ತೊರಣ ಕಟ್ಟಿದ್ದರು. ಬಲೂನ್ಗಳಿಂದ ಅಲಂಕರಿಸಲಾಗಿತ್ತು.
ಮಸ್ಕಿ ಪಟ್ಟಣದಲ್ಲಿ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆ, ವೀರೇಶ್ವರ ತಾತ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.
ಬಾಲಕಿಯರ ಪ್ರೌಢಶಾಲೆಯಲ್ಲಿ 199 ವಿದ್ಯಾರ್ಥಿಗಳು, ಬಾಲಕರ ಪ್ರೌಢಶಾಲೆಯಲ್ಲಿ 225, ವೀರೇಶ್ವರ ತಾತ ಪ್ರೌಢಶಾಲೆಯಲ್ಲಿ 192, ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯಲ್ಲಿ 191 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 811 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಮಾತ್ರ ಗೈರು ಹಾಜರಾಗಿದ್ದು 807 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.


ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರವನ್ನು ತಳಿರು ತೊರಣದಿಂದ ಅಲಂಕರಿಸಿರುವದು.

 

Don`t copy text!