e-ಸುದ್ದಿ, ಮಸ್ಕಿ
ಪಟ್ಟಣದ ಮಸ್ಕಿ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಜೋತಿ ಚಂದ್ರಮೌಳೇಶ್ವರ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಸುರೇಶ ಕೆಂಬಾವಿಮಠ ತಿಳಿಸಿದ್ದಾರೆ.
ಒಟ್ಟು 30 ವಿದ್ಯಾರ್ಥಿಗಳಿದ್ದು 5 ಅತ್ಯೂತ್ತಮ ಶ್ರೇಣಿ, 17 ಫ್ರಥಮ, 7 ದ್ವೀತಿಯ, 1 ಉತ್ತೀರ್ಣರಾಗಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಡಳಿ ಅಭಿನಂದಿಸಿದೆ.
ವೀರರಾಣಿ ಕಿತ್ತೂರು ಚೆನ್ನಮ್ಮ ಕಾಲೇಜಿನ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 3 ಅತ್ಯೂತ್ತಮ, 21 ಪ್ರಥಮ, 20 ದ್ವೀತಿಯ, 1 ಉತ್ತೀರ್ಣರಾಗಿದ್ದಾರೆ ಎಂದು ಪ್ರಚಾರ್ಯ ಲಕ್ಷ್ಮಣ ಕರ್ಲಿ ತಿಳಿಸಿದ್ದಾರೆ.
ಮಸ್ಕಿಯ ಅಮೃತ ಸಾಗರ ತಂದೆ ಭರತ ಕೊಲ್ಹಾರ, ನವ್ಯಶ್ರೀ, ಅಮೃತಾ ಲಿಂಗಸುಗೂರಿನ ಉಮಾಮಹೇಶ್ವರಿ ಕಾಲೇಜಿನಲ್ಲಿ 3 ವಿದ್ಯಾರ್ಥಿಗಳು 100 ಕ್ಕೆ 100 ವಿಜ್ಞಾನ ವಿಭಾಗದಲ್ಲಿ 100 ಶೇ.ಫಲಿತಾಂಶ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ವಿನಯ ಗಣಚಾರಿ ತಿಳಿಸಿದ್ದಾರೆ.
ಮಸ್ಕಿಯ ರಕ್ಷೀತಾ ಕುಲಕರ್ಣಿ ಸಿಂಧನೂರಿನ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ರಷ್ಟು ಅಂಕಗಳಿಸಿದ್ದಾಳೆ ಎಂದು ತಂದೆ ಹನುಮೇಶ ನಾಯಕ ತಿಳಿಸಿದ್ದಾರೆ.