ಪಾದೋದಕ-ಪ್ರಸಾದ

ಪಾದೋದಕ-ಪ್ರಸಾದ

ಜಂಗಮ ಪಾದದ ಮೇಲೆ
ಸುರಿದ-
ನದಿ-ಬಾವಿ-ಧಾರೆಯ
ನೀರು-ತೀರ್ಥವಲ್ಲ….

ಲಿಂಗಾನುಸಂಧಾನದಿಂದ
ಎಚ್ಚರಗೊಂಡ ಅಂತಃಶಕ್ತಿಯ
ಅರಿವಿನ ಬೆರಗು- ಪಾದೋದಕ
ಅನುಭಾವ ಅಮೃತ- ಪ್ರಸಾದ

ಲೌಕಿಕ ಅಂಗಗುಣ
ಅಹಂಕಾರವಳಿದ ನಿರ್ಭಾವ
ಸಮಚಿತ್ತವೇ- ಪಾದೋದಕ
ಪರಿಪೂರ್ಣತೆ- ಪ್ರಸಾದ

ನಿತ್ಯ ನಡೆಯಿಂದ
ಸತ್ಯ ಕಂಡುಕೊಂಡ ಸದ್ಭಕ್ತನ
ಪರಾತ್ಪರಾನಂದ-ಪಾದೋದಕ
ಪರಿಣಾಮ-ಪ್ರಸಾದ

ಆತ್ಮನದಿ ನಿಧಾನ ಹರಿದು
ಪರಮಾತ್ಮ ಶರಧಿ ಸೇರಿದ
ಸಹಜಭಾವ- ಪಾದೋದಕ
ಸಾರ್ಥಕತೆ- ಪ್ರಸಾದ

ಮೌಢ್ಯದ ಕತ್ತಲು ಕಳೆದ
ಅರಿವಿನ ಬೆಳಕನುಟ್ಟ ಶರಣರು
ಸುರಿದ-
ಥಳ ಥಳ ಹೊಳೆವ ಚಿದ್ರಸ- ಪಾದೋದಕ
ಸಂತೃಪ್ತಭಾವ- ಪ್ರಸಾದ

ಇದಕ್ಕೆಲ್ಲ ಆಧಾರ-ನಿಜ ಅರ್ಥ
ನಮ್ಮ ಅಣ್ಣ ಬಸವಣ್ಣ..!
ಚಿಂತಕ ಮನಸ್ಸುಗಳ
ಜೀವಂತ ಧರ್ಮ ವಿಜ್ಞಾನಿ..!!

-ಪ್ರೊ ಜಯಶ್ರೀ.ಎಸ್. ಭಮಸಾಗರ.
(ಶೆಟ್ಟರ) ಇಳಕಲ್ಲ.

Don`t copy text!