ವಿಠ್ಠಪ್ಪ ಸಾರ್

ವಿಠ್ಠಪ್ಪ ಸಾರ್

ವಿಠ್ಠಪ್ಪ ಸಾರ್ ಗೋರಂಟ್ಲಿ ಸಾರು.
ವಿಠ್ಠಪ್ಪ ಗೋರಂಟ್ಲಿ ಎಲ್ಲಾರ ಸಾರೋ
ಕೊಪ್ಪಳದ ತೇರು.

1-ಯುವಕರಲ್ಲಿ ಯುವಕ ನಮ್ಮ ಸಾರಣ್ಣ ವಿಠ್ಠಪ್ಪ ಸರ್.
ಸಾಹಿತ್ಯ ಕ್ಷೇತ್ರದ ಸಾಮ್ರಾಟ ನೀನು ವಿಠ್ಠಪ್ಪ ಸರ್.
ಮಗ್ಗ ನೆಯ್ಯುವ ಮದುಮಗ ನೀನು ವಿಠ್ಠಪ್ಪ ಸರು.
ನೇಕಾರ ವರ್ಗಕ್ಕೆ ನೀತಿ ಪಾಠಯ್ಯ ವಿಠ್ಠಪ್ಪ ಸರು.( ಪ)

2-ಕಾರ್ಮಿಕ ಲೋಕಕ್ಕೆ ಕಣ್ಣು ನೀನಯ್ಯ ವಿಠ್ಠಪ್ಪ ಸರು.
ದುಡಿಯುವ ಜನಗಳ ಒಡವೆ ನೀನಯ್ಯಾ ವಿಠ್ಠಪ್ಪ ಸರು.
ಶೋಷಿತ ಜನಗಳ ಸೂರು ನೀನಯ್ಯ ವಿಠ್ಠಪ್ಪ ಸರು.
ದಲಿತ ಧಮನಿತರಿಗೆ ದೈರ್ಯ ನೀನಯ್ಯ,ವಿಠ್ಠಪ್ಪ ಸರು.
ದಲಿತ ಬಂಡಾಯದ ಭಂಡಾರ ನೀನು ವಿಠ್ಠಪ್ಪ ಸರು.

3-ವೇದ ಶಾಸ್ತ್ರಗಳು ನಿನ್ನ ಬಗಲಲ್ಲಿ ,
ಜಿಬ್ಬ ದೋತರ ಕೋಟು ನಿನ್ನ ಡ್ರೆಸ್ ಕೋಡು ವಿಠ್ಠಪ್ಪ ಸರು.
ಬಗಲ ಚೀಲದಲ್ಲಿ ಬಳಗಾದ ಗೋಳು ವಿಠ್ಠಪ್ಪ ಸರು.
ಕುಂಟ ನಡಿಗೇಯಲ್ಲಿ ಕುದುರೆಯ ಕುಣಿತ ವಿಠ್ಠಪ್ಪ ಸರು.

4-ಜಾತಿಕೋಮು ಧರ್ಮ ಧಿಕ್ಕರಿಸಿದಾತ ವಿಠ್ಠಪ್ಪ ಸರು.
ಲಿಂಗಬೇಧಕ್ಕೆ ಲಗಾಮು ನೀನು,ವಿಠ್ಠಪ್ಪ ಸರು.
ದಾಸಿ ಪದ್ದತಿಗೆ ರೋಸಿ ಹೋದಾತ ವಿಠ್ಠಪ್ಪ ಸರು.
ಹೆಣ್ಣು ಗಂಡು ಒಂದೆ ಬೇಧ ಇಲ್ಲೆಂದೆ ವಿಠ್ಠಪ್ಪ ಸರು.

5-ನೀ ಬರೆದ ನಾಟಕ ಮಾಡಿದ ಪಾತ್ರ ವಿಠ್ಠಪ್ಪ ಸರು.
ಗೌರಿ ಕಲ್ಬುರ್ಗಿಯ ಗುಣಗಾನ ನೀನು ವಿಠ್ಠಪ್ಪ ಸರು‌.
ಐದು ನಕ್ಷತ್ರಗಳ ನೀಲಿ ಬಾನಯ್ಯ ವಿಠ್ಠಪ್ಪ ಸರು.
ಭಾಗ್ಯನಗರದ ಭಾಗ್ಯವಂತ ನೀನಯ್ಯ ವಿಠ್ಠಪ್ಪ ಸರು.
ನೊಂದ ಜನರೀಗೆಲ್ಲಾ ನಿಂದೆ ಧ್ಯಾನಯ್ಯ ವಿಠ್ಠಪ್ಪ ಸರು.

6-ಲೆಕ್ಕವಿಲ್ಲದಷ್ಟು ಸನ್ಮಾನ ನಿನಗೆ ವಿಠ್ಠಪ್ಪ ಸರು.
ರಾಜಿಯಾಗದ ರಾಜಯೋಗಿ ನೀನಯ್ಯ ವಿಠ್ಠಪ್ಪ ಸರು.
ಸ್ವಾರ್ಥವಿಲ್ಲದ ಸ್ವಾಭಿಮಾನಿ ನೀನಯ್ಯ ವಿಠ್ಠಪ್ಪ ಸರು.
ಸೊಕ್ಕಿದರಿಗೆಲ್ಲ ಚಿಕ್ಕ ಹಾಕಿದಿ ವಿಠ್ಠಪ್ಪ ಸರು.(ಪ)

7-ಸೋಗಿನ ಸರಕಾರ ಸೋಲಬೇಕೆಂದೆ ವಿಠ್ಠಪ್ಪ ಸರು.
ಸಂವಿಧಾನಕ್ಕೆ ನಾವು ಶರಣೆಂದೆ ವಿಠ್ಠಪ್ಪ ಸರು.
ಮಾನವ ಹಕ್ಕಿನ ಮನೆಮಾತು ನೀನೊ ವಿಠ್ಠಪ್ಪ ಸರು.
ಸಾವಿಗೆ ಸರದಾರ ನಮ್ಮ ನೇಕಾರ ವಿಠ್ಠಪ್ಪ ಸರು.
ಹೋಗಿಬನ್ನಿ ಸಾರು ನಿಮಗೆ ನಮಸ್ಕಾರ ವಿಠ್ಠಪ್ಪ ಸರು.

ಜೈಭೀಮ್

– ಸಿ.ದಾನಪ್ಪ ಮಸ್ಕಿ.

Don`t copy text!