ಕೃಷಿ ಚಟುವಟಿಕೆಯ ಸ್ವಾಮೀಜಿ

ಕೃಷಿ ಚಟುವಟಿಕೆಯ ಸ್ವಾಮೀಜಿ

e-ಸುದ್ದಿ, ಹೂವಿನಹಡಗಲಿ

ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಹೆಯ ಹೂವಿನಹಡಗಲಿ ತಾಲ್ಹೂಕಿನ ಉತ್ತಂಗಿ ಎಂಬ ಗ್ರಾಮದಲ್ಲಿ ಶ್ರೀ ಸೋಮಶಂಕರ ಮಹಾಸ್ವಾಮಿಗಳು ಕೃಷಿ ಪ್ರೀಯರು. ರೈತರಂತೆ ಒಕ್ಕಲುತನದಲ್ಲಿ ತೊಡಗಿಸಿಕೊಂಡವರು.
ಈ ಊರಿನಲ್ಲಿ ಸ್ವಾಮೀಜಿಗಳ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ ಮಠದ ಹೊಲದಲ್ಲಿ ಉಚಿತವಾಗಿ ಕೆಲಸ ಮಾಡಿ ಮಠದ ಶ್ರೇಷ್ಠತೆಯನ್ನು ಎತ್ತಿಹಿಡಿದ್ದಾರೆ.
ಇವರ ಕಾರ್ಯವನ್ನು ಮೆಚ್ಚಿ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು ಶಾಖಾ ಗವಿಮಠ ಹೂವಿನಹಡಗಲಿ ಪೂಜ್ಯರು ಹೊಲಕ್ಕೆ ಹೋಗಿ ಗುರು ಪೌರ್ಣಿಮೆಯ ಈ ದಿನ ಶ್ರೀಗಳನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು. ಭಕ್ತರನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಮಠದ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಾಹಿತ್ಯಪ್ರಿಯ ಶಂಕರ ಜಿ ಬೆಟಗೇರಿ.

Don`t copy text!