ಲಿಂಗಸುಗೂರು:112 ವಾಹನದ ಸೌಲಭ್ಯ ಪಡೆದುಕೊಳ್ಳಿ ರಂಗಪ್ಪ
e-ಸುದ್ದಿ, ಲಿಂಗಸುಗೂರು
ಗ್ರಾಮೀಣ ಭಾಗದ ಪ್ರದೇಶದಲ್ಲಿ ಅಪರಾಧ, ದುರಂತ, ಅವಘಡ, ವಿಪತ್ತು ಸೇರಿದಂತೆ ಇನ್ನಿತರ ಸಮಸ್ಯೆಯಲ್ಲಿ ಸಿಲುಕಿದವರು ಯಾವುದೇ ಅಹಿತರ ಘಟನೆಗಳು ನಡೆದರೆ ಅಥವಾ ಯಾವುದೇ ಸಮಸ್ಯೆಯಾದರೆ 112 ವಾಹನ ಕರೆ ಮಾಡಿದರೆ ಪೊಲೀಸರು ತಕ್ಷಣ ಸಮಸ್ಯೆ ಇರುವ ಸ್ಥಳಕ್ಕೆ ಧಾವಿಸುತ್ತೆವೆ ಈ ವಾಹನದ ದುರುಪಯೋಗ ಮಾಡಿಕೊಳ್ಳದೆ ಸಾರ್ವಜನಿಕರು 112 ವಾಹನದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮುಖ್ಯ ಪೊಲೀಸ್ ಪೇದೆ ರಂಗಪ್ಪ ಹೇಳಿದರು.
ಮಸ್ಕಿ ಸಿಪಿಐ ದೀಪಕ್ ಬೂಸರಡ್ಡಿ ಹಾಗೂ ಮುದಗಲ್ ಪಿ.ಎಸ್.ಐ ಡಾಕೇಶ ರವರ ನಿರ್ದೇಶನದ ಮೇರೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದಲ್ಲಿ 112 ವಾಹನದ ಕುರಿತು ಸಾರ್ಜನಿಕರಿಗೆ ಜಾಗೃತಿ ಮೂಡಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಇದೆ ವೇಳೆ ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜನ ಸೇರಿದಂತೆ ಹೂನೂರು ಗ್ರಾಮದ ಗ್ರಾಮಸ್ಥರು ಇದ್ದರು.