ಅಂಕುಶದೊಡ್ಡಿ ಗ್ರಾಮದ ನ್ಯಾಯ ಬೆಲೆ ಅಂಗಡಿ ಲೈಸನ್ಸ್

e-ಸುದ್ದಿ, ಮಸ್ಕಿ
ಸರ್ಕಾರದಿಂದ ವಿತರಣೆ ಮಾಡಲು ಬಂದಿರುವ ರೇಷನ್ ಅನ್ನು ಪಡಿತರದಾರರಿಗೆ ನಿಗದಿತ ಅವಧಿಯಯಲ್ಲಿ ವಿತರಣೆ ಮಾಡದೇ ಜನರಿಗೆ ಸತಾಯಿಸುತ್ತಿದ್ದಾರೆ ಎಂದು ಅಂಕುಶದೊಡ್ಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಅಂಕುಶದೊಡ್ಡಿ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿ ಲೈಸನ್ಸ್ ರದ್ದು ಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಗ್ರಾಪಂ ಸಿಬ್ಬಂದಿ ಬಲವೇಂದ್ರ ಅವರಿಗೆ ಮನವಿ ಪತ್ರಸಲ್ಲಿಸಿ ಒತ್ತಾಯಿಸಿದರು.
ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ಕಾರದಿಂದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡದಾರರಿಗೆ ಪ್ರತಿ ತಿಂಗಳು ವಿತರಿಸಲು ಪಡಿತರ ಧಾನ್ಯಗಳು ಸರಬರಾಜು ಮಾಡಲಾಗುತ್ತದೆ. ಆದರೆ ನ್ಯಾಯಬೆಲೆ ಅಂಗಡಿ ಪರವಾನಿಗೆದಾರರು ಮಾತ್ರ ನಿಗದಿತ ಸಮಯಕ್ಕೆ ಸರಿಯಾಗಿ ವಿತರಿಸದೇ ವಿಳಂಭ ಮಾಡುತ್ತಿದ್ದಾರೆ ಇದರಿಂದ ಪಡಿತರದಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಅವರ ಲೈಸನ್ಸ್ ರದ್ದುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಬಸವಂತರಾಯ ಗದ್ದಿ, ಶರಣಬಸವ, ರೇಣುಕಮ್ಮ, ಅಯ್ಯಪ್ಪ, ಪರಶುರಾಮ ಸೇರಿದಂತೆ ಇತರರು ಇದ್ದರು.

Don`t copy text!