,ವೀರ ಸೈನಿಕ
ಗ್ರೆನೇಡ್ ವೀರ ಯೋಗೇಂದ್ರಸಿಂಗ್
ಪಾಕಿಗಳಿಗೆ ಚಳ್ಳೇಹಣ್ಣು ತಿನಿಸಿ
ಮಾರಣ ಹೋಮವನ್ನೇ ಮಾಡಿದ್ದ
ಎದೆಯೊಳಗೆ ದ್ವಾದಶ
ಗುಂಡು ಹೊಕ್ಕಿದ್ದರೂ
ಹದಿನೇಳು ವೈರಿಗಳನು
ಹೊಡೆದು ಉರುಳಿಸಿದ್ದ
ಗಂಡೆದೆಯ ಗುಂಡಿಗೆ ಭಂಟ
ಭಾರತಾಂಬೆಯ ಮೆಚ್ಚಿನ ಪುತ್ರ
ನಿಮಗೆ ಕಾರ್ಗಿಲ್ ವಿಜಯದ ನೆನಪಿಗೆ
ಜಯದಹಾರ ಅರ್ಪಿಸುವೆವು
–ಸಾಹಿತ್ಯಪ್ರಿಯ ಶಂಕರ.