ಒಮ್ಮೆ
———–
ಮುಕ್ತ ಒಮ್ಮೆ
ಮುಗ್ದ ಇನ್ನೊಮ್ಮೆ
ಮೌನ ಒಮ್ಮೆ
ಮಾತು ಇನ್ನೊಮ್ಮೆ
ಭಾವ ಭಾಷೆ
ಗೆಳತಿ ನೀನು
ನನ್ನ ಬಾಳಿನ
ಒಡತಿ
ನಿತ್ಯ ನಿನ್ನ
ನೆನಪು
ಕ್ಷಣ ಕ್ಷಣದ
ಒಣಪು
ಹೊರಗೆ ಮಳೆ
ಒಳಗೆ ಚಿಗುರು
ಪಕ್ಷಿ ಗೂಡು
ಕಟ್ಟಿತು
ಮಳೆ ಹಸಿರು
ಮೋಡ ಮುಸುಕಿದೆ
ನೀನು ನನ್ನ
ಬಾಳ ಬಟ್ಟೆ
ಹದಗೊಂಡ
ಹೃದಯ ನೆಲ
ಕನಸು ಕಾವ
ಬಿತ್ತಿದೆ
ನನ್ನ ಮನಕೆ
ಆಪ್ತವಾದೆ
ನಿನ್ನ ಅರಿವ
ನನ್ನ ಯತ್ನ
ಶಬ್ದ ಸಂಭ್ರಮ
ಕಾವ್ಯದಿ
ಅರಳಿ ನಿಂತಿದೆ
ಸ್ನೇಹ ಪರಿಮಳ.
ಬಾರೆ ಗೆಳತಿ
ಹೆಜ್ಜೆ ಹಾಕು
ದೂರ ಪಯಣದ
ದಾರಿಗೆ
-ಡಾ ಶಶಿಕಾಂತ ಪಟ್ಟಣ ಪುಣೆ
ಸೊಗಸಾದ ರಚನೆ ಸರ್… ಆಗಾಗ ಈ ಒಮ್ಮೆ ಒಮ್ಮೊಮ್ಮೆ ಮತ್ತೊಮ್ಮೆ ಮರುಕಳಿಸುತ್ತಿದ್ದರೆ… ಗೆಳತಿ ಬಗೆಗೆ ಆಗುವುದು ಹೆಮ್ಮೆ…
ಪ್ರೀತಿಯ ಮಳೆ ಸುರಿಸುವುದು .. ಮನುಸು ಒಮ್ಮೆ