e-ಸುದ್ದಿ, ಮಸ್ಕಿ
ಶಾಸಕ ಬಸನಗೌಡ ತುರ್ವಿಹಾಳ ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಬ್ರಿಡ್ಜ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದರು.
ಪಟ್ಟಣದ ತಹಸೀಲ್ ಕಚೇರಿಯ ಹತ್ತಿರದ ಪರಾಪೂರು ರಸ್ತೆಗೆ 98 ಲಕ್ಷರೂ. ಡಾಂಬರಿಕರಣ ಮಾಡಲು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಮಾಗಾರಿ ಮಾಡಬೇಕು ಎಂದು ಸೂಚಿಸಿದರು.
ಮಸ್ಕಿ ಹತ್ತಿರದ ಚಿಕ್ಕಕಡಬೂರು ಗ್ರಾಮದ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೇ ನೀಡಿದರು. ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ 30 ಲಕ್ಷ ರೂ ಬಿಡುಗಡೆಯಾಗಿದ್ದು ಸೇತುವೆ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ತಿಳಿಸಿದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಕೆಪಿಸಿಸಿ ಸದಸ್ಯ ಕೆ.ಕರಿಯಪ್ಪ, ಮುಖಂಡ ಸಿದ್ದನಗೌಡ ಮಾಟೂರು, ಮಲ್ಲಯ್ಯ ಬಳ್ಳಾ, ಮಾಹಾಂತೇಶ ಜಾಲವಾಡಗಿ, ಅಮರೇಗೌಡ ಕಡಬೂರು, ಮಲ್ಲಿಕಾರ್ಜುನ ಗ್ರೀನ್ ಸಿಟಿ, ಮಲ್ಲಪ್ಪ ನಾಗರಬೆಂಚಿ, ಮಾಬು ಸಾಬ ಮುದ್ದಾಪುರ, ಕೃಷ್ಣ ಚಿಗರಿ, ಶರಣಪ್ಪ ಎಲಿಗಾರ, ಶಿವು ಬ್ಯಾಳಿ, ಗುತ್ತೆದಾರ ಮಲ್ಲಿಕಾರ್ಜುನ ನಾಗರಬೆಂಚಿ, ವೆಂಕಟೇಶ ನಾಗರಬೆಂಚಿ, ಇಂಜಿನಿಯರ್ ಸಂದೀಪ್ ಇದ್ದರು.