ಮನೆಯಲ್ಲಿದ್ದ ವೃದ್ಧರನ್ನು ಯಾಮಾರಿಸಿ ಚಿನ್ನಕದ್ದ ಕಳ್ಳರು


e-ಸುದ್ದಿ, ಮಸ್ಕಿ
ಚಿನ್ನದ ವಸ್ತುಗಳನ್ನು ಪಾಲಿಷ್ ಮಾಡಿ ಕೊಡುವುದಾಗಿ ನಂಬಿಸಿ ಹಾಡ ಹಗಲೇ ಚಿನ್ನದ ಆಭರಣಗಳೊಂದಿಗೆ ಪರಾರಿಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಪಟ್ಟಣದ ಬಳಗಾನೂರು ರಸ್ತೆ ಸಮೀಪ ಇರುವ ನಿವೃತ್ತ ಶಿಕ್ಷಕ ಯಲ್ಲಪ್ಪ ಜಾಲಿಹಾಳ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಬೈಕ್ ಮೇಲೆ ಬಂದ ಯುವಕರಿಬ್ಬರು ತಾವು ಚಿನ್ನದ ಆಭರಣಗಳಿಗೆ ಪಾಲೀಷ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾರೆ.
ಮಾಂಗಲ್ಯ ಸರ್, ಕೈಬಳೆ, ಚೈನ್ ಸೇರಿದಂತೆ ಒಟ್ಟು 12 ತೊಲಿ ಬಂಗಾರ ಕಳ್ಳತನವಾಗಿದೆ. ಆಭರಣಗಳಿಗೆ ಪಾಲಿಷ ಮಾಡುವುದಾಗಿ ಹೇಳಿದ ಯುವಕರು ಕುಕ್ಕರ್‍ನಲ್ಲಿ ಆಭರಣ ಹಾಕಿಸಿದ್ದಾರೆ. ತಾವು ತಂದಿದ್ದ ಪುಡಿ ಹಾಕಿ ಇನ್ನಷ್ಟು ನೀರು ಬೇಕು ಕೊಡಿ ಎಂದು ನೀರು ತರಲು ಹೋದಾಗ ಆಭರಣವನ್ನು ದೋಚಿದ್ದಾರೆ.
ಇದರಿಂದ ಗಾಬರಿಯಾದ ಯಲ್ಲಪ್ಪ ಜಾಲಿಹಾಳ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ಸ್‍ಪೆಕ್ಟರ್ ಭೀಮದಾಸ್ ತನಿಖೆ ಕೈಗೊಂಡಿದ್ದಾರೆ.
ಆತಂಕ ಃ ಪಟ್ಟಣದಲ್ಲಿ ಹಾಡು ಹಗಲೇ ಮನೆಗಳಿಗೆ ಹೋದ ವಂಚಕರು ವಂಚಿಸಿ ಆಭರಣ ಕಳುವು ಮಾಡುತ್ತಿರುವದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಪೊಲೀಸರು ವಂಚಕರನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Don`t copy text!