ಕಾರ್ಮುಗಿಲು

ಕರ್ಮುಗಿಲು

ಸಂಜೆಯ ವೇಳೆಗೆ ಮೋಡ ಕವಿದಿತ್ತು
ಕಾರ್ಮುಗಿಲು ದಟ್ಟವಾಗಿಯೇ ಇತ್ತು
ಸೂರ್ಯನ ಛಾಯಾ ಕಮ್ಮಿ ಆಯ್ತು
ಬಿರುಗಾಳಿ ಬೆಳಕು ಕಂಡಲ್ಲಿ ಆವರಿಸಿತ್ತು

ಹೊಸ ಎಲೆಗಳು ಹಳೆಮರದ ಹಸಿರು
ಅಬ್ಬಾ !!ಸುಂದರ ದೃಶ್ಯ ನೋಡಲು
ಮಿಂಚು ಗುಡುಗು ಕೇಳಿ ಬಂದಿತ್ತು
ಪುಟ್ಟ ಮಗು ತೊಟ್ಟಿಲಲ್ಲಿ ಅಳತೊಡಗಿತು

ದೇವರ ನೆನೆದು ಅಮ್ಮ ಬಂದಳು
ಕಾಲಗೆಜ್ಜೆ ನಾದಕ್ಕೆ ಮಗು ನಗತೊಡಗಿತು
ಓಡಿ ಹೋಗಿ ಬಾಗಿಲು ಮುಚ್ಚಿದಳು
ಮಮತೆಯ ಕಂದನ ತಾಯಿ ಅಪ್ಪಿದಳು


ಶ್ರೀಮತಿ ಕವಿತಾ ಮಳಗಿ

Don`t copy text!