ಸರ್ವಶೂನ್ಯ ನಿರಾಲಂಬಸ್ಥಲ ನಿರಂಜನಲಿಂಗ

ಸರ್ವಶೂನ್ಯ ನಿರಾಲಂಬಸ್ಥಲ ನಿರಂಜನಲಿಂಗ

 

ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಆತ್ಮರೆಂಬ ಅಷ್ಟತನು ಮೂರ್ತಿ ಸ್ವರೂಪಗೊಳ್ಳದಂದು, ನಾನು ನೀನೆಂಬ ಭ್ರಾಂತಿ ಸೂತಕ ಪುಟ್ಟದಂದು, ನಾಮ ರೂಪು ಕ್ರಿಯೆಗಳೇನೂ ಇಲ್ಲದಂದು ಸರ್ವ ಶೂನ್ಯ ನಿರಾಲಂಬನಾಗಿರ್ದೆಯಲ್ಲಾ ನೀನು ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ.

ತೋರುವ ಪಂಚ ಭೂತಗಳಾದ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ ಮತ್ತು ಆತ್ಮರೆಂಬ ಅಷ್ಟ ತನು‌ಮೂರ್ತಿಗಳು ಇನ್ನೂ ಸ್ವರೂಪಗೊಂಡು ಉದಯವಾಗದ ಮೊದಲು ಮತ್ತು ನಾನು ನೀನೆಂಬ ಭಿನ್ನ ಭಾವ ಭ್ರಾಂತಿಯ ಭ್ರಮೆಯ ದೋಷ ಇನ್ನೂ ಜನಿಸದ ಮೊದಲು , ಸಮಸ್ತ ಸೃಷ್ಟಿ ರಚನೆಗೊಂಡು ವಿವಿಧ ನಾಮ ರೂಪುಗಳು ಮತ್ತು ನಾನ ರೀತಿಯ ಕ್ರಿಯಾಕರ್ಮಗಳೇನೇನೂ ಇಲ್ಲದ ಮೊದಲ ಸ್ಥತಿಯಲ್ಲಿ ಹೇ ನಿತ್ಯ ನಿಜಲಿಂಗವೇ, ನೀನು ಅನ್ಯವನ್ನವಲಂಬಿಸದೆ ಸ್ವತಂತ್ರವಾಗಿ ಸರ್ವಶೂನ್ಯ ನಿರಾಲಂಬನಾಗಿ ನಿನ್ನ ಸಹಜ ಸ್ಥಲದಲ್ಲಿ ಅಂದು ನೀನಿದ್ದಿಯೆಂಬುದೀ ವಚನ ತತ್ವಾನುಭವ.

 


ಶ್ರೀ ಸಿದ್ಧರಾಮೇಶ್ವರ ಶರಣರು ಬೆಲ್ದಾಳ

Don`t copy text!