ಸರಕಾರಿ ಶಾಲೆ ಹಸಿರು ಶಾಲೆ ಮಾಡುವ ಗುರಿ

ಸರಕಾರಿ ಶಾಲೆ ಹಸಿರು ಶಾಲೆ  ಮಾಡುವ ಗುರಿ

e-ಸುದ್ದಿ ಸಿಂಧನೂರು


ವನಸಿರಿ ಫೌಂಡೇಶನ್ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುನ್ನಟಿಗಿ ಕ್ಯಾಂಪ್
ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಹಸಿರು ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾಯಚೂರು ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳನ್ನು ಹಸಿರು ಶಾಲೆಗಳನ್ನಾಗಿ ಮಾಡುವುದೇ ವನಸಿರಿ ತಂಡದ ಗುರಿಯಾಗಿದ್ದು ಈಗಾಗಲೇ ಹಲವಾರು ಶಾಲೆಗಳಲ್ಲಿ ಗಿಡ ನೆಡುವ ಮೂಲಕ ಹಸಿರು ಶಾಲೆಯನ್ನಾಗಿಸಿದ್ದೇವೆ ಎಂದು ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ತಿಳಿಸಿದರು.
2017 ರಿಂದ ಈ ಕಾರ್ಯ ಮಾಡುತ್ತ ಬಂದಿದ್ದು ಈ ವರ್ಷ ಹಸಿರು ಶಾಲೆ ಮಾಡುವುದು ಗುರಿಯಾಗಿದೆ ಎಂದರು.

ಈರಪ್ಪ sdmc ಅಧ್ಯಕ್ಷ. ರೇಷ್ಮಾ ಬೇಗಮ್. ಗ್ರಾಮ ಪಂಚಾಯತ್ ಸದಸ್ಯ ಕಾಂತರಾಜ್. ಮಾನಪ್ಪ. ಶ್ರೀ ಶಂಕರದೇವರು ಹಿರೇಮಠ್. ಶಂಕರಗೌಡ ಎಲೇಕೂಡ್ಲಿಗಿ ವನಸಿರಿ ಫೌಂಡೇಶನ್ ರಾಜ್ಯ ಗೌರವ ಅಧ್ಯಕ್ಷ. ರಮೇಶ್ ಕುನ್ನಟಗಿ. ಬುದೇಶ್ ಮರಾಠಿ.ದೇವು. ದುರ್ಗೇಶ್ ಡಿಎಸ್ಪಿ. ಆಸಿಫ್. ಅಮರೇಶ್ ಸಾಸಲಮರಿ. ಗೋಪಾಲಕೃಷ್ಣ. ಬಸವರಾಜ್ ಸಾಲಗುಂದ ಭಾಗವಹಿಸಿದ್ದರು.

Don`t copy text!