ಜೀವ-ಭಾವ
ಕರೆಯುತ್ತಿರುವೆ ಬಂದುಬಿಡು ಓ ನನ್ನ ಒಲವೇ
ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ
ಎದಿರುನೋಡುತ್ತಿಹೆನು ನೀ ಬರುವುದನ್ನೇ
ಕಾಯಿಸದೆ-ನೋಯಿಸದೆ ಬಂದುಬಿಡು ಬೇಗನೆ
ಮೊಗ್ಗುಗಳೂ ಅರಳದೆ ಕಾದಿಹವು ನಿನಗಾಗಿ
ತಡಮಾಡದೆ ದಯಮಾಡಿಸು ನನ್ನೊಲವೇ
ಮರುಗಿರುವೆ-ಕೊರಗಿರುವೆ ನಿನಗಾಗಿ ನಾನು
ಚಂದಿರನೂ ಕೇಳಿಹನು ‘ಎಲ್ಲಿ ನೀನು’ ಎಂದು
ಉತ್ತರಿಸಬೇಕಿದೆ ನಾನಿಗ
ದೂರದ ಆ ತೀರಕ್ಕೆ ಕರೆದೊಯ್ದ ಮೋಹ ಯಾವುದೋ
ಮರಳಿ ಬಂದುಬಿಡು ನೆರಳಾಗಿ ಕಾಯುವೆನು
ಭುವಿಯ ಕರೆಗೆ ಭಾರಲಿಲ್ಲವೇ ಆ ರ‍್ಷಿಣಿ
ಕಾದ ಶಬರಿಗಾಗಿ ಕೊನೆಗೂ ಬರಲಿಲ್ಲವೇ ರಾಮ??
–ಅನಘ aka ಸೌಮ್ಯರಾಮಕೃಷ್ಣ