ಗೆಳೆತನ
ಆಸರೆಯಾಗುವರು
ಹೆಗಲಿಗೆ ಹೆಗಲ ಕೊಟ್ಟು
ನಿರಾಸೆ ಮಾಡದಿರು ಅವರನ್ನು
ದೂರವಿಟ್ಟು
ಸುಖ ದುಃಖಗಳೆರಡು ಉಂಟು
ಸ್ನೇಹದಲ್ಲಿ
ಬಹು ಮುಖ್ಯವಿದು
ಜೀವನದಲ್ಲಿ
ಬುನಾದಿ ಇದಕೆ
ನಿಸ್ವಾರ್ಥ
ಪಾರದರ್ಶಕತೆಯೇ
ಇದರ ಬ್ರಹ್ಮಾಸ್ತ್ರ
ಸುಖದಲ್ಲಿ ಎಲ್ಲರೂ
ಆತ್ಮೀಯರೇ
ಕಷ್ಟಕ್ಕಗುವುದು ಮಾತ್ರ
ಸ್ನೇಹಿತರೆ
ಮರೆತರೂ ಚಪ್ಪಾಳೆ
ತಟ್ಟಿದ ಕೈಗಳನ್ನು
ಮರೆಯದಿರು ಕಣ್ಣಿರೋರೆಸಿದ
ಬೆರಳನ್ನು……
– ಡಾ. ನಂದಾ ಬೆಂಗಳೂರು