ಸ್ನೇಹ- ಸಂಬಂಧ
ಬದುಕೆನ್ನುವುದು ಸಂಬಂಧಗಳ ಸರಮಾಲೆ.ಮನುಷ್ಯನ ಬದುಕು ನಿಂತಿರುವುದೇ ಸ್ನೇಹ ಸಂಬಂಧಗಳ ಭದ್ರವಾದ ಅಡಿಪಾಯದ ಮೇಲೆ.ಸಂಬಂಧಗಳ ಸರಮಾಲೆಯಲ್ಲಿ ಗಂಡ-ಹೆಂಡತಿ,ಅಪ್ಪ-ಮಗ, ಅಣ್ಣ-ತಂಗಿ,ಬಂಧು-ಮಿತ್ರರು ಹೀಗೆ ಸಂಬಂಧಗಳು ಜೀವನದುದ್ದಕ್ಕೂ ಜೊತೆಯಾಗುತ್ತವೆ.ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ನಾವು ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ?ಎನ್ನುವುದೇ ಜೀವನ.ಎಲ್ಲ ಸಮಸ್ಯೆಗಳಿಗೂ ಉತ್ತರವನ್ನು ನಾವು ಸಂಬಂಧಗಳಲ್ಲಿಯೇ ಕೊಂಡುಕೊಳ್ಳಬೇಕು. ಸಂಬಂಧಗಳಿಂದ, ಸಮಾಜದಿಂದ ದೂರ ಹೋದರೆ ಪರಿಹಾರ ದೊರಕಲಾರದು. ಅನೇಕ ಭಿನ್ನತೆಗಳ ಮಧ್ಯೆಯೂ ಪ್ರಕೃತಿಯೊಂದಿಗೆ, ಸಮಾಜದೊಂದಿಗೆ ಸ್ನೇಹ, ಪ್ರೀತಿ ತುಂಬಿದ ಅವಿನಾಭಾವ ಸಂಬಂಧ ಇರಿಸಿಕೊಳ್ಳಬೇಕು.
ಸಂಬಂಧ, ಸಹಬಾಳ್ವೆ ಸಮಾಜ ನಮಗೆ ನೀಡಿರುವ ಕೊಡುಗೆಗಳು. ಆದರೆ ಸ್ನೇಹವನ್ನು ನಾವೇ ಸಂಪಾದಿಸಬೇಕು.ಸ್ನೇಹ ಸಂಬಂಧಗಳ ನಡುವೆ ಯಾವುದೇ ರೀತಿಯ ಒತ್ತಡಗಳಿರಬಾರದು. ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಾಗ,ಪರಸ್ಪರ ತಪ್ಪುಗಳು,ಭಿನ್ನತೆಗಳು ಮೂಡಿ ಸ್ನೇಹ ಕುರಿತು ಇರುವ ಪರಂಪರಾಗತ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ.ಸ್ನೇಹ ವ್ಯಕ್ತಿಗತವಾಗಬಾರದು. ಸ್ನೇಹದ ಪರಿಧಿಯನ್ನು ದಾಟಬಾರದು.ಸ್ನೇಹ ಪರಸ್ಪರರ ಪ್ರೀತಿ,ನಂಬಿಕೆಗಳ ಮೇಲೆ ಸ್ವಾರ್ಥರಹಿತ ಸ್ಥಿತಿಯಲ್ಲಿ ಸುರಕ್ಷಿತವಾಗಿರುತ್ತದೆ. ಮಾನವೀಯತೆಯ ನೆಲೆಯಲ್ಲಿ ಹುಟ್ಟಿದ ಸ್ನೇಹ ಸ್ವಾರ್ಥದ ಸೋಂಕಿರಬಾರದು.ಸ್ವಾರ್ಥ,ಸ್ವಲಾಭ, ಸ್ವಪ್ರತಿಷ್ಠೆಗಳು ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.ಅದೆಷ್ಟೋ ವರ್ಷಗಳ ಸ್ನೇಹಿತರು,ಆತ್ಮೀಯರಾದವರು ಕೆಲ ಸಂದರ್ಭಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.ಭಿನ್ನಾಭಿಪ್ರಾಯಗಳು ಬಂದಾಗ ಯಾವುದೇ ಅನುಮಾನಗಳಿಲ್ಲದೆ ಪರಸ್ಪರ ಶಾಂತ ಮನಸ್ಸಿನಿಂದ ಕುಳಿತು ಮಾತನಾಡಬೇಕು. ತಪ್ಪು ಕಲ್ಪನೆಗಳಿಂದ ಹೊರಬಂದು ಕಳೆದುಹೋದ ಮಧುರ ಕ್ಷಣಗಳನ್ನು ಜ್ಞಾಪಿಸಿಕೊಂಡು ಮನಸ್ಸನ್ನು ಸಾಂತ್ವನಗೊಳಿಸಿಕೊಳ್ಳಬೇಕು.ಉದ್ವೇಗದಿಂದ ಸಮಸ್ಯೆಗಳು ಮತ್ತಷ್ಟು ಗೋಜಲಾಗುತ್ತವೆ. ಆ ಉದ್ವೇಗ ದೈಹಿಕ ಮತ್ತು ಮಾನಸಿಕವಾಗಿ ಅಪಾಯಕಾರಿ. ಕೆಲವು ಸನ್ನಿವೇಶ, ಸಂದರ್ಭಗಳಲ್ಲಿ ಸಣ್ಣ ಪುಟ್ಟ ಗಾಳಿಸುದ್ದಿಗಳು ಎಂಥವರನ್ನೂ ಅಲುಗಾಡಿಸುತ್ತವೆ. ಸಂಶಯ,ಅಪನಂಬಿಕೆಗಳು ಸ್ನೇಹದಲ್ಲಿ ಬಿರುಕನ್ನುಂಟುಮಾಡುತ್ತವೆ. ಹಾಗೆ ನೋಡಿದರೆ ಈ ಸ್ನೇಹ ಸಂಬಂಧಕ್ಕೆ ಸ್ವಂತ ನೆಲೆ ಎಂಬುದಿರುವುದಿಲ್ಲ. ಈ ಸಂಬಂಧ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯ ಭಾವನೆಗಳ ಮೇಲೆ ನಿಂತಿರುತ್ತದೆ.ಈ ಸ್ನೇಹ ಸಂಬಂಧಗಳು ನೋಡುವವರ, ಪರಿಭಾವಿಸುವವರ ಮನಸ್ಸಿನಲ್ಲಿ ಸಂದರ್ಭಕ್ಕೆ ತಕ್ಕಂತೆ ರೂಪುಗೊಳ್ಳುತ್ತವೆ.
ಪ್ರತಿಯೊಬ್ಬರ ಬದುಕಿನಲ್ಲೂ ಕಾಲೆಳೆಯುವವರು ಇದ್ದೇ ಇರುತ್ತಾರೆ.ಇಂಥವರು ಕೆಲವೊಮ್ಮೆ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ತನ್ನನ್ನು ತಾನು ವಿಪರೀತ ಹೊಗಳಿಕೊಳ್ಳುವ, ಸಮರ್ಥಿಸಿಕೊಳ್ಳುವ ವ್ಯಕ್ತಿಯನ್ನು ಯಾರೂ ಪ್ರೀತಿಸಲಾರರು.ನಾವು ನಮ್ಮನ್ನು ತುಂಬಾ ಇಷ್ಟಪಡುವ ವ್ಯಕ್ತಿಗಳ ಜೊತೆಗಿರುವಾಗ ಯಾವುದೇ ಮುಜುಗರ ಅನ್ನಿಸುವುದಿಲ್ಲ.ಸ್ವಲ್ಪ ಎಚ್ಚರದಿಂದಿದ್ದರೆ, ಹೊಂದಾಣಿಕೆ ಮಾಡಿಕೊಂಡರೆ ಬದುಕು ಸುಂದರ.
ಒಟ್ಟಾರೆ ಸ್ನೇಹ-ಸಂಬಂಧ ಎಂದರೆ ಮನುಷ್ಯರ ನಡುವಿನ ನವಿರಾದ ಭಾವನೆಗಳು. ಅನ್ಯೋನ್ಯತೆ ನಡೆ-ನುಡಿಗಳಲ್ಲಿನ ನಯ- ವಿನಯಗಳ ಸೊಬಗು,ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ಗುಣ ಸ್ವಭಾವಗಳ ಸಮ್ಮಿಶ್ರ ಕಾಂತಿಯ ಸೊಗಸು ಎನ್ನಬಹುದು. ಸ್ನೇಹ ಸಂಬಂಧಗಳು ಉಳಿಯಲು ಸಮೀಪದಲ್ಲಿದ್ದು ಸತ್ಯ ತಿಳಿದಾಗ ಮನಸ್ಸು ಕೆಡಿಸಿಕೊಳ್ಳಬಾರದು. ಗೆಳೆಯರ ಯಶಸ್ಸನ್ನು ಕಂಡು ನಗುವಿನ ಹೂವು ಅರಳಬೇಕು.
–ಶ್ರೀಮತಿ ರೇಖಾ ಪಾಟೀಲ, ರಾಯಚೂರು
Happy friendship day to you all. Sending love and best wishes to you on this friendship day. Love you all.
https://srikrishnaastrologer.com/best-astrologer-in-bangalore/