ವ್ಯಸನ ಮುಕ್ತದಿನ ; ಲಿಂ.ಡಾ.ಮಹಾಂತಪ್ಪನವರ ಚರಣಕೆ ಭಕ್ತಿಯ ನಮನ

ವ್ಯಸನ ಮುಕ್ತದಿನ ; ಲಿಂ.ಡಾ.ಮಹಾಂತಪ್ಪನವರ ಚರಣಕೆ ಭಕ್ತಿಯ ನಮನ

ಇಂದು ಅಗಷ್ಟ 1 ಬಸವತತ್ವದ ದಂಡನಾಯಕರು, ಬಸವ ಚಿತ್ಕಳೆಯ ಸ್ವರೂಪರಾದ ಮಹಾಂತ ಜೋಳಿಗೆಯ ಹರಿಕಾರರೂ ಆದ ಮಹಾನ್ ಕ್ರಾಂತಿ ಪುರುಷ ಪರಮ ಪೂಜ್ಯ ಡಾ|| ಮಹಾಂತಪ್ಪಗಳಂತಹ ಅನುಪಮ ದಿವ್ಯ ಚೇತನ ಜನಿಸಿದ ಪುಣ್ಯ ದಿನ. ಈ ದಿನವನ್ನು ರಾಜ್ಯದಾದ್ಯಂತ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತೆವೆ. ಎಷ್ಟೊ ಸಂಸಾರಗಳನ್ನು ದುಷ್ಚಟಗಳಿಂದ ದೂರಮಾಡಿ ಆ ಕುಟುಂಬಗಳನ್ನು ಕಾಪಾಡಿದ ಕೀರ್ತಿ ನಮ್ಮ ಪೂಜ್ಯರಿಗೆ ಸಲ್ಲಬೇಕು.
ನಮ್ಮ ಪೂಜ್ಯರು ಅಷ್ಟಾವರಣಗಳನ್ನು ಆಚರಿಸಿ, ಷಟ್ಸ್ಥಲವನ್ನು ಸಾಧಿಸಿದ ಪಂಚಾಚಾರ ಪಾಲಿಪವರೇಣ್ಯರು,

1 ) ಲಿಂಗ ಮಧ್ಯೆ ಜಗತ್ ಸರ್ವಂ ಎನ್ನುವಂತೆ ಲಿಂಗಾಂಗ ಸಾಮರಸ್ಯವನ್ನು ಮೈಗುಡಿಸಿಕೊಂಡು ಪ್ರತಿಯೊಬ್ಬರನ್ನು ಲಿಂಗಧಾರಿಗಳನ್ನಾಗಿ ಮಾಡಿದ ಲಿಂಗಾಚಾರಿಗಳು.

2) ಸದುವಿನಯವೆ ಸದಾಶಿವನ ಒಲುಮೆಯಯ್ಯಾ ಎನ್ನುವಂತೆ ಸತ್ಯ ಶುಧ್ದ ಕಾಯಕದ ಮೂಲಕ ಗುರು ಲಿಂಗ ಜಂಗಮ ಸೇವೆಗೈದ ಸದಾಚಾರಿಗಳು. ನಮ್ಮ ಪೂಜ್ಯರು.

3 ) ಇವನಾರವ ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎನ್ನುವಂತೆ ಯಾರಲ್ಲೂ ಕುಲವನರಸದೆ ಬಂದ ಭಕ್ತರಲ್ಲಿಯೆ ಶರಣರನ್ನು ಕಂಡ ಶಿವಾಚಾರಿ ನಮ್ಮ ಪೂಜ್ಯರು

4 ) ಸರಳ ಸುಂದರ ಬದುಕಿಗೆ ಬೆಳಕಾದ ಬಸವ ತತ್ವವನ್ನು ಹೆಮ್ಮರವಾಗಿ ಬೆಳೆಯಲು ಮತ್ತು ಅದರ ಪಾಲಣೆ ಪೋಷಣೆ ಜೋತೆಗೆ ಅದರ ರಕ್ಷಣೆಗೆ ನಿಂತ ವೀರ ಗಣಾಚಾರಿಗಳು ನಮ್ಮ ಪೂಜ್ಯರು

5)  ಬೀಗಿ ಬೇಳೆದ ಬಾಳೆಯ ಗೊನೆ ಬಾಗಿದಂತೆ ಬಾಗಿದ್ದರೆ ಬೇಡಿದ್ದನ್ನಿವ ನಮ್ಮ ಕೂಡಲಸಂಗಮ ದೇವಾ ಎನ್ನುವಂತೆ ಬಸವ ತತ್ವವನ್ನೆ ಉಸಿರಾಗಿಸಿಕೊಂಡು ಬಸವ ತತ್ವಕ್ಕೆ ತಲೆಬಾಗಿ ನಡೆದ ಬೃತ್ಯಾಚಾರಿಗಳು.ನಮ್ಮ ಪೂಜ್ಯರು.

ಇಂತಹ ವೈಜ್ಞಾನಿಕ ವೈಚಾರಿಕ ಪ್ರಜ್ಞೆಯುಳ್ಳ ಅರಿವು ಆಚಾರ ಅನುಭಾವವುಳ್ಳ ಗುರು ಮತ್ತೆಲ್ಲಿ ಸಿಗುವರು. ಇಂತಹ ಪೂಜ್ಯರ ಜೋತೆಗೆ ಬದುಕಿದ್ದವು ಎನ್ನುವುದೆ ನಮಗೊಂದು ಹೆಮ್ಮೆ. ಇಂತಹ ಪೂಜ್ಯರ ಪಾದಕ್ಕೆ ಕೋಟಿ ಕೋಟಿ ಶರಣು.

ಸವಿತಾ ಮಾಟೂರು ಇಲಕಲ್ಲ

Don`t copy text!