ಕದಿಯಬಹುದು
ಕದಿಯಬಹುದು
ಭಾಷೆ ಪದಗಳ
ಕದಿಯಲಾಗದು
ಭಾವವ
ನಿದ್ದೆ ಹಸಿವು
ಕದಿಯಬಹುದು
ಕದಿಯಲಾಗದು
ಕನಸುಗಳ
ಚಿನ್ನ ಹೊನ್ನ
ಕದಿಯಬಹುದು
ಕದಿಯಲಾಗದು
ಸ್ನೇಹ ಪ್ರೀತಿ
ಕದಿಯಬಹುದು
ಗ್ರಂಥ ಪುಸ್ತಕ
ಕದಿಯಲಾಗದು
ಜ್ಞಾನವ
ಕದಿಯಬಹುದು
ಹೃದಯ ಮನಸ್ಸು
ಕದಿಯಲಾಗದು
ಒಲವ ಬದುಕು
ತನುವು ಬೆತ್ತಲೆ
ಮನವು ಚಿತ್ಕಳೆ
ಪ್ರಾಣ ಜ್ಯೋತಿ
ಮಹಾಕಳೆ
ಕದಿಯಬಹುದು
ವಸ್ತು ಒಡವೆ
ಕದಿಯಲಾಗದು
ಮೌಲ್ಯ ನೀತಿ
–ಡಾ ಶಶಿಕಾಂತ ಪಟ್ಟಣ