ಬಯಲ ಬೆಳಕು ಲೋಕಾರ್ಪಣೆ

ಬಯಲ ಬೆಳಕು ಲೋಕಾರ್ಪಣೆ

e-ಸುದ್ದಿ , ಬೈಲಹೊಂಗಲ

ಶರಣ ಚಿಂತಕಿ ಪ್ರೇಮಕ್ಕೆ ಅಂಗಡಿ ಅವರ ಬಯಲ ಬೆಳಕು ಕೃತಿಯಲ್ಲಿ ಇಪ್ಪತ್ತೇಳು ವೈಚಾರಿಕ, ಸಂಶೋಧನಾತ್ಮಕ ಲೇಖನಗಳಿವೆ .
ಶರಣರ ಸಂಸ್ಕೃತಿ ಸಾಹಿತ್ಯ, ಧರ್ಮದ ತಾತ್ವಿಕ ಮತ್ತು ಸಾತ್ವಿಕ ವಿಶ್ಲೇಷಣೆ ಇದೆ. ಶರಣರು ಮುಟ್ಟಿ ಮೆಟ್ಟಿ ಪಾವನಗೊಳಿಸಿದ ಬೆಳಗಾವಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿಯ ಶರಣ ಸ್ಮಾರಕಗಳಿಗೆ ಲೇಖಕಿಯವರು ಭೇಟಿ ನೀಡಿ ಅವುಗಳ ಐತಿಹಾಸಿಕ ಸಾಂಸ್ಕೃತಿಕ ಪಾರಮ್ಯ ವನ್ನು ಇಲ್ಲಿಯ ಲೇಖನ ಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಅನೇಕ ಶರಣರ ವಚನಗಳಲ್ಲಿ ಅವಿರತ ನೀತಿ ಸಂದೇಶ ಗಳ ವಿಶ್ಲೇಷಣೆ ಸೊಗಸಾಗಿ ಅಭಿವ್ಯಕ್ತಿ ಗೊಂಡಿದೆ .

ಶರಣರು ತಾವು ರೂಪಿಸಿದ ತತ್ವಗಳನ್ನು ಅನುಷ್ಟಾನಗೊಳಿಸಿದ ರೀತಿಯನ್ನು ಸಾಮಾನ್ಯರಿಗೆ ಸುಲಭವಾಗಿ ಅರ್ಥ ವಾಗುವಂತೆ ಲೇಖಕಿ ಪ್ರಸ್ತಾಪಿಸಿದ್ದಾರೆ ಎಂದು ಕೃತಿ ಪರಿಚಯಿಸಿದ ಬೈಲ್ ಹೊಂಗಳದ ಸ್ನಾತ ಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕರಾದ ಡಾ ಫಕ್ಕಿರಣಾಯಿಕ ಗದ್ದಿಗೌಡರ ಅವರು ಅಭಿಪ್ರಾಯ ಪಟ್ಟರು.

ಸಾನಿಧ್ಯ ವಹಿಸಿದ್ದ ಮುರಗೊಡದ ಶ್ರೀ.ಮ ನಿ. ಪ್ರ. ಸ್ವ. ನೀಲಕಂಠ ಮಹಾಸ್ವಾಮಿಗಳು ಶರಣೆ ಪ್ರೇಮಕ್ಕೆ ಅಂಗಡಿ ಅವರು ಭಕ್ತಿ ವಂತೆ. ಗುರು ಲಿಂಗ ಜಂಗಮದಲ್ಲಿ ಅಪಾರ ಗೌರವ ವನ್ನಿಟ್ಟವರು. ಅವರ ಮೌಲಿಕ ಕೃತಿಯು ಶರಣರ ಜೀವನ ಸಾಧನೆ ಯನ್ನೂ ಪರಿಚಯಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲೆ ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಕ್ಷೆ ಶ್ರೀಮತಿ ಮಂಗಲಾ ಮೇಟಗುಡ್ ಅವರು ಪ್ರೆಮಕ್ಕ ಅಂಗಡಿ ಅವರು ಜಿಲ್ಲೆಯ ದೊಡ್ಡ ಆಸ್ತಿ. ಒಳ್ಳೆಯ ಪ್ರವಚನ ಕಾರ್ತಿಯರಾಗಿ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ನೀಡುತ್ತಿರುವ ಕೊಡುಗೆ ಅಭಿನಂದನಾರ್ಹ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬೆಳಗಾವಿ ಜಿಲ್ಲೆಯ ಲೇಖಕಿ ಯರ ಸಂಘದ ಅಧ್ಯಕ್ಷೆ ಡಾ ಹೇಮಾ ಸೋನೊಳ್ಳಿ ಅವರು  ಇಲ್ಲಿಯವರೆಗೆ ಪ್ರವಚನ ಕಾರ್ತಿಯಾಗಿ ಖ್ಯಾತ ರಾಗಿದ್ದ ಪ್ರೇಮಕ್ಕೆ ಅವರು ತಾವು ಬೇರೆ ಬೇರೆ ಕಡೆಗೆ ಶರಣರ ವಚ ನ ಸಾಹಿತ್ಯದ ಕುರಿತು ನೀಡಿದ ಪ್ರವಚನಗಳ ಸಾರವನ್ನು ಲೇಖನಗಳ ರೂಪದಲ್ಲಿ ಸಂಕಲಿಸಿಕೊಟ್ಟು ಉಪಕರಿಸಿದ್ದಾರೆ ಇದು ಮುಂದಿನ ಜನಾಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು.

ಲೇಖಕಿ,ಸಮಾಜ ಸೇವಾಕರ್ತೆ ಜ್ಯೋತಿ ಬಾದಾಮಿ ಅವರು ಮಾತನಾಡಿ ಪ್ರೇಮಕ್ಕನವರು ಸಂಘ ಜೀವಿ ಅನೇಕ ಸಂಘ ಸಂಸ್ಥೆ ಕಟ್ಟಿ ಧಾರ್ಮಿಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದರು
ಕೃತಿ ಬಿಡುಗಡೆ ಮಾಡಿದ ಸಾಹಿತಿ ದಾ ಗುರುದೇವಿ ಹುಲೆ ಪ್ಪನವರು ಮಾತನಾಡಿ ಪ್ರೇಮಕ್ಕಅವರು ನಡೆ ನುಡಿ ಒಂದಾದ ಶರಣ ಜೀವಿ, ಕರ್ನಾಟಕ ದ ಎಲ್ಲ ಮಠ ಮಾನ್ಯ ಗಳ ಧಾರ್ಮಿಕ ಕಾರ್ಯ ಕ್ರಮ ಗಳಲ್ಲಿ ಧರ್ಮ, ದರ್ಶನ ಕುರಿತು ಉಪ ನ್ಯಾಸನೀಡಿದವರು.

ಶರಣ ಧರ್ಮ ಪ್ರಚಾರಕ್ಕೆ ತಮ್ಮನ್ನು ಅರ್ಪಿಸಿಕೊಂಡವರು ಇಂದಿನ, ಮುಂದಿನ ಜನಾಂಗಕ್ಕೆ ವಚನ ಕಾರರ ವೈಚಾರಿಕ ವೈಜ್ಞಾನಿಕ ವಿಚಾರ ಗಳ ನ್ನು ತಲುಪಿಸಲು ರಚಿಸಿರುವ ಈ ಗ್ರಂಥವು ಅಧ್ಯಯನ ಯೋಗ್ಯ ವಾಗಿದೆ ಎಂದರು.
ಪುಂಡಲಿಕ್ ಕಡಕೋಳ, ದುಂಡಯ್ಯ ಕುಲಕರ್ಣಿ, ಎ ಎಸ್ ಐ ಅಶೋಕ ಸಾಲಿ, ಮಹಾದೇವ ಕರಡಿಗುದ್ದಿ ಪ್ರಕಾಶ್ ಅರಳಿಕಟ್ಟಿ ಚೆನ್ನಪ್ಪ ನರಸನ್ನವರ್ ಶಿವಾನಂದ ಅರಭಾವಿ, ಚಂದ್ರಣ್ಣ ಕೊಪ್ಪದ, ನಾಗನಗೌಡ ಪಾಟೀಲ,ಅಣ್ಣಪ್ಪ ಜುಲ್ಪಿ ಭಾರತಿ ಕತ್ತಿ ಶೆಟ್ಟಿ ಮೀನಾಕ್ಷಿ ಸೂಡಿ, ಅಮಜವ್ವ ಭೋವಿ ಸೊನಕ್ಕ ವಾಲಿ, ಮಡಿವಾಳಪ್ಪ ಸಂಗೊಳ್ಳಿ ಉಮೇಶ ನಾಯ್ಕರ, ಬಸವಂತಪ್ಪ ತೋರಣಗಟ್ಟಿ, ಮುಕ್ತಾಯಕ್ಕ ಮಹಾಂತೇಶ್ ಅಕ್ಕಿ  ಹಾಗೂ ಅಜಗಣ್ಣ ಬಳಗ ಪತ್ರಿ ಬಸವನಗರ ನಾಗರಿಕರು ಉಪಸ್ಥಿತರಿದ್ದರು

ಶ್ರೀಶೈಲ ಗದಗ ಪ್ರಾರ್ಥಿಸಿದರು ಗೌರಾದೇವಿ ತಾಳಿಕೋಟಿ ಮಠ ಸ್ವಾಗತಿಸಿದರು ಅನ್ನಪೂರ್ಣ ಕನೋಜ್ ವಂದಿಸಿದರು ಕುಸುಮಾ ಗದಗ ನಿರೂಪಿಸಿದರು

ಪರಮಪೂಜ್ಯ ನೀಲಕಂಠ ಮಹಾಸ್ವಾಮಿಗಳವರಿಂದ ಪತ್ರಿಬಸವೇಶ್ವರ ಅನುಭವ ಮಂಟಪದ ಮಹಾದಾಸೋಹಿ ನೀಲಮ್ಮ ಪ್ರಸಾದ ನಿಲಯ ಉದ್ಘಾಟನೆಗೊಂಡಿತು

 

 

Don`t copy text!