ಪೋಲಿಸರ ಮಿಂಚಿನ ಕಾರ್ಯಾಚರಣೆ ಕಳ್ಳರ ಸೇರೆ
e-ಲಿಂಗಸುಗೂರು
ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣದ ಗೋದಾಮಿನ ಶೇಟ್ರಸ್ ಮುರಿದು 42 ಚೀಲ ತೊಗರಿಯನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆ ಕಲಬುರ್ಗಿಗೆ ತೋಗರಿಯನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಲಿಂಗಸುಗೂರು ಸ್ಥಳೀಯ ಪೊಲೀಸ್ ತಂಡದೊಂದಿಗೆ ಯರಡೋಣ ಕ್ರಾಸ್ ಹತ್ತಿರ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಒಂದು ಟಾಟಾ ಎಸ್ ವಾಹನ ಹಾಗೂ ಕಳ್ಳತನವಾಗಿದ್ದ 2.ಲಕ್ಷ 08ಸಾವಿರದ. 200 ರೂ ಮೌಲ್ಯದ ರೂ ತೊಗರಿ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಬ್ಬಿಣದ ರಾಡನ್ನು ಹಾಗೂ ದುರುಗಪ್ಪ ಹೊಳೆಯಪ್ಪ, ಬೀರಪ್ಪ ಅಮರಪ್ಪ, ಭೀಮಣ್ಣ ,ಅಮರೇಶ ,ಎಂಬ ಕಳ್ಳ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ತಂಡದ ಕಾರ್ಯಾಚರಣಗೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ,
ಇದೆ ಸಂದರ್ಭದಲ್ಲಿ ಡಿವೈಎಸ್ಪಿ ಎಸ್, ಎಸ್, ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ, ಪಿ.ಎಸ್.ಐ ಪ್ರಕಾಶ ಡಂಬಳ, ಸಿಬ್ಬಂದಿ ಈರಣ್ಣ, ನಾಗರಾಜ, ಚನ್ನಬಸವ, ಶರಣಬಸವರೆಡ್ಡಿ, ಮಾರುತಿ, ಚನ್ನದಾಸರ, ಶ್ರೀಕಾಂತ, ನಾಗಾರ್ಜುನ, ಅಜೀಮ ಪಾಷಾ ಇದ್ದರು.
,