ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
e-ಸುದ್ದಿ, ಲಿಂಗಸುಗುರು
ಮುಂಬರುವ ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ತಾಲೂಕಿನ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸ್ಪರ್ಧಾ ಆಕಾಂಕ್ಷಿಗಳು , ಮುಖಂಡರು,ಕಾರ್ಯಕರ್ತರ ಪೂರ್ವಭಾವಿ ಸಭೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿರುವ ಶಾಸಕ ಡಿ.ಎಸ್.ಹೂಲಗೆರಿ ನಿವಾಸದಲ್ಲಿ ಜರಗಿತು,
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಡಿ.ಎಸ್.ಹುಲಗೇರಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು ಸೇರಿದಂತೆ ಇತರರು ಮಾತನಾಡಿದರು .
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ ನಾಯಕ, ಲಿಂಗಸುಗೂರು ಶಾಸಕರಾದ ಡಿ.ಎಸ್. ಹೂಲಗೇರಿ, ರಾಯಚೂರು ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ ಸದಸ್ಯ ಎನ್.ಎಸ್.ಬೋಸುರಾಜ ಮಾಜಿ ಶಾಸಕ ಹಂಪನ ಗೌಡ ಬಾದರ್ಲಿ ಹಾಗೂ ವಸಂತ ಕುಮಾರ ಶರಣಪ್ಪ ಮಟ್ಟೂರು ಭೂಪನಗೌಡ ಪಾಟೀಲ್ ಕಡಕಲ್, ಶರಣಪ್ಪ ಮೇಟಿ .ಪಾಮಯ್ಯ ಮುರಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ,ಹಿರಿಯ ಮುಖಂಡರು ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.