ನಡುಗಡ್ಡೆ ಪ್ರದೇಶಗಳ ಸಂತ್ರಸ್ತರ ಶಾಶ್ವತ ಪರಿಹಾರಕ್ಕೆ ಆಗ್ರಹ

ನಡುಗಡ್ಡೆ ಪ್ರದೇಶಗಳ ಸಂತ್ರಸ್ತರ ಶಾಶ್ವತ ಪರಿಹಾರಕ್ಕೆ ಆಗ್ರಹ

e-ಸುದ್ದಿ,   ಲಿಂಗಸುಗೂರು

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಡುಗಡ್ಡೆ ಪ್ರದೇಶಗಳ ಸಂತ್ರಸ್ತರನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕ ಪಂಚಾಯತ ತ್ರೈಮಾಸಿಕ ಕೆ,ಡಿ. ಬಿ, ಪ್ರಗತಿ ಪರಿಶೀಲನಾ ಸಭೆಯ ವೇಳೆ ಸಭಾಂಗಣದ ಹೊರಗಡೆ ಪ್ರತಿಭಟನೆ ಮಾಡಿದರು.
ಸರ್ವೇ ನಂಬರ 19ರಲ್ಲಿರುವ 25 ಎಕರೆ ಭೂಮಿಯನ್ನು ತಹಶೀಲ್ದಾರ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಉಳಿದ ಸಂತ್ರಸ್ತ ಕುಟುoಬಗಳಿಗೆ ಹಕ್ಕು ಪತ್ರ ನೀಡಬೇಕು ವಾಸಕ್ಕೆ ಯೋಗ್ಯ ಭೂಮಿಯನ್ನು ನೀಡಬೇಕು ನಡುಗಡ್ಡೆ ಸಂತ್ರಸ್ತ ಒಟ್ಟು 66 ಎಕರೆ ಸಾಗುವಳಿ ಭೂಮಿಯನ್ನು ಸರಕಾರ ಖರೀದಿ ಮಾಡಬೇಕು ಎಲ್ಲಾ ಪರ್ಯಾಯ ಭೂಮಿ ನೀಡಬೇಕು, ಸೇತುವೆ ನಿರ್ಮಾಣಕ್ಕೆ ಮಂಜೂರಾದ 4 ಕೋಟಿ ರೂ ಭ್ರಷ್ಟಾಚಾರವನ್ನು ತನಿಖೆ ಮಾಡಿ ತಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು ದಲಿತ,ರೈತ, ಕೂಲಿ ಕಾರ್ಮಿಕ, ಬಗ್ಗೆ ಕಾಳಜಿ ಇಲ್ಲದ ತಹಶೀಲ್ದಾರ ಚಾಮರಾಜ ಪಾಟೀಲ್ ರವರನ್ನು ವರ್ಗಾವಣೆ ಮಾಡಬೇಕು ಎಂದು ಸ್ಥಳದಲ್ಲಿ ಒತ್ತಾಯ ಮಾಡಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ವೆಂಕಟಾಪುರು, ತಾಲೂಕ ಸಂಚಾಲಕ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಮಹಾದೇವಪ್ಪ ಪರಾಂಪುರು, ಶಿವಪ್ಪ ಯರಜಂತಿ, ಲಕ್ಕಪ್ಪ ನಾಗರಹಾಳ, ನಾಗರಾಜ ಯರಡೋಣ, ಮುತ್ತಪ್ಪ ಗುರುಗುಂಟಾ, ಸೇರಿದಂತೆ ಮುಂತಾದವರು ಇದ್ದರು.

Don`t copy text!