ತಬ್ಬಿಕೊಂಡಿವೆ ಮರಗಳು

 

ತಬ್ಬಿಕೊಂಡಿವೆ ಮರಗಳು

ತಬ್ಬಿಕೊಂಡಿವೆ ಮರಗಳು
ಒಂದನ್ನೊಂದು
ರೆಂಬೆ – ಕೊಂಬೆ ಚಾಚಿ
ಬೇಡಿಕೊಳ್ಳುತ್ತಿವೆ ರಕ್ಷಣೆಯ
ಮಾನವನನ್ನು
ಅಂಗಲಾಚಿ
ಕಾಡಿದೆ ಅವುಗಳಿಗೆ
ಅಗಲಿಕೆಯ ಭಯ
ನೊಂದಿವೆ ಅರಿತು
ತಮ್ಮಯ ಸ್ಥಿತಿಯ
ಸತ್ತುಹೋಯಿತೇ ನಮ್ಮಲ್ಲಿಯ
ಮಾನವೀಯತೆ
ಮರೆತು ಹೋಯಿತೇ
ಹಸಿರೇ ಉಸಿರೆಂಬ
ಸತ್ಯತೆ……

ಡಾ. ನಂದಾ

Don`t copy text!