ಅನು
(ಕತೆ)
ಟೇಕ್ ಪೊಸಿಷನ್ ಫಿಕ್ಸ್ ದಿ ಟಾರ್ಗೆಟ್ ಅಂಡ್ ಲುಕ್ ಸ್ಟ್ರೇಟ್, ಎಂದು ಜೋರು ದನಿಯಲ್ಲಿ ಕಮಾಂಡರ್ ಆದೇಶ ನೀಡುತ್ತಿದ್ದರು. 3-4 ಭಾರಿ ಆದೇಶ ಕೊಟ್ಟರು ತನ್ನದೇ ಲೋಕದಲ್ಲಿ ಕಳೆದು ಹೋಗಿದ್ದವಳನ್ನು ನೋಡಿ ಥಟಕ್ಕನೆ ಬಂದು ಗಾಬರಿ ಪಡಿಸಿದ ಅರ್ಜುನ್. ಎಲ್ಲಿದೆ ನಿನ್ನ ಗಮನ ಮೇಡಂ ಎಂದು ಮುಗುಳ್ನಗೆ ಬೀರುತ್ತಾ, ಎತ್ತಲೋ ನೋಡಿಕೊಂಡು ಕಾಲರ್ ಸರಿಪಡಿಸಿಕೊಳ್ಳುತಿದ್ದ ಅರ್ಜುನ್ ಕಡೆ ಗಾಬರಿ ಇಂದ ನೋಡಿದಳು ಅನು. ಕಮಾಂಡರ್ ಎಂದು ಚಿಕ್ಕದನಿಯಲ್ಲಿ ಅನು ಪಿಸುಗುಟ್ಟಿದ್ದನ್ನು ಕೇಳಿ, ನಸುನಗುವಿನಿಂದ ನಿಮ್ ಕಮಾಂಡರ್ ಬ್ರೇಕ್ ಗೆ ಹೋಗಿದ್ದಾರೆ ಬನ್ನಿ ಎನ್ನುತ್ತಾ ಮುಂದೆ ಸಾಗುತ್ತಿದ್ದ ಅರ್ಜುನ್, ಮತೊಮ್ಮೆ ಹಿಂದೆ ತಿರುಗಿ ಅಲ್ಲೇ ನಿಂತಿದ್ದ ಅನುನ ದಿಟ್ಟಿಸಿ ನೋಡಿ ಅಯ್ಯೋ ಬನ್ನಿ ನಿಮ್ಮನ್ನೇ ಕರೆದಿದ್ದು ಎಂದ. ಭಾರವಾದ ಹೆಜ್ಜೆ ಹಿಡುತ್ತಾ ಅನು ನಡೆದಳು.
ಗನ್ ಟ್ರಿಗರ್ ಚೆಕ್ ಮಾಡಲು ಬರದೇ ಒದ್ದಾಡುತ್ತಿದ್ದಾ ಅನು ಮುಖ ನೋಡಿ ಕಮಾಂಡರ್ ಕೇಳಿದರು, MBA ಗ್ರ್ಯಾಜುಯೆಟ್ಪ್ & ಗೋಲ್ಡ್ ಮೆಡಲಿಸ್ಟ್ ಅಲ್ವಾ ಎಂದು ವ್ಯಂಗ್ಯಾ ಮಾಡುತ್ತಾ, ಅವಳ ಕೈ ಇಂದ ಗನ್ ಕಸಿದುಕೊಂಡ ಕಮಾಂಡರ್ನನ್ನೇ ಕೋಪದಿಂದ ನೋಡಿದ ಅನು ಮುಖ ನೋಡಿ ಅರ್ಜುನ್ ನಗುತಿದ್ದ. MBA ಅಲ್ಲಿ ಈ ಸಿಲೋಬಸ್ ಇರ್ಲಿಲ್ಲ ಎಂದು ಮನಸಲ್ಲೇ ಅಂದುಕೊಂಡು ಅನು ಅಲ್ಲಿಂದ ನಡೆದಳು.
ಮುಂದಿನ ತಿಂಗಳು ವಾರ್ ಕಾಲ್ ಮಾಡೋ ಸಾಧ್ಯತೆ ಇದೆ ಬನ್ನಿ ಟ್ರೈನ್ನಿಂಗ್ ಇದೆ ಎಂದು ಕಮಾಂಡರ್ ನ ಸಂದೇಶವಿತ್ತು. ಎಲ್ಲರು ಒಂದೆಡೆ ಸೇರಿದ್ದರು. ಏನೋ ಕಳೆದುಕೊಂಡಂತೆ ಇದ್ದ ಅನು ಬಳಿ ಬಂದ ಕಮಾಂಡರ್, ಇಲ್ಲಿ ಬಂದಿರುವುದು ಯುದ್ಧ ಮಾಡ್ಲಿಕ್ಕೆ, ಮಾಡೆಲಿಂಗ್ ಗೆ ಅಲ್ಲ, ರಾತ್ರಿ ವೇಳೆಯ ಶಶಿಯಂತೆ ಇರುವುದಲ್ಲ ಸುಡುವ ಸೂರ್ಯನಾಗಿರಬೇಕು. ಪೆನ್ ಇರುವ ಕೈಯಲ್ಲಿ ಗನ್ ಇದೆ ಏನ್ ನಿನ್ ಕಥೆ ಎಂದ ಕಮಾಂಡರ್ನನನ್ನೇ ದಿಟ್ಟಿಸಿ ನೋಡಿದಳು, ಅವಳ ಕಣ್ಣಲ್ಲಿ ಅಸಹಾಯತೆ-ನಿರಾಸೆ ತುಂಬಿರುವುದನ್ನೇ ಅರ್ಜುನ್ ಗಮನಿಸಿದ.
ಏನು ಇಲ್ಲ ಎನ್ನುವಂತೆ ನಕ್ಕವಳ ಮುಖದಲ್ಲಿ ಎಲ್ಲಾ ಇದೆ ಎಂದು ಎದ್ದು ಕಾಣುತಿತ್ತು.
ನನ್ನೆಲ್ಲಾ ನೋವನ್ನು ಪಕ್ಕಕ್ಕಿಟ್ಟು ನಾನ್ ಬಂದಿರೋ ಕೆಲ್ಸುದ್ ಮೇಲೆ ಗಮನ ಕೊಡ್ಬೇಕು, ಹೊಸ ಜೀವನದ ಆಸೆ ಹೊತ್ತು ಬಂದಿದ್ದೀನೀ ಇಲ್ಲಿಗೆ. ಇಲ್ಲೂ ನನಗೆ ನಿರಾಸೆ ಆಗೋದ್ ಬೇಡ ಎಂದು ಟ್ರೈನ್ನಿಂಗ್ ಅಲ್ಲಿ ತೊಡಗಿದಳು. ಬಂದ ಮೊದಲ ದಿನದ ಅನುಗೂ ಈಗಿನ ಅನುಗೂ ತುಂಬಾ ಬದಲಾವಣೆಯಾಗಿತ್ತು. ಅವಳ ಪ್ರೇರಕಮಾತು, ನಾಯಕತ್ವ ಗುಣ ಹಾಗೂ ಸ್ವಯಂಪ್ರೇರಿತ ಕೆಲಸ ನೋಡಿ ಎಲ್ಲರಿಗು ಅಚ್ಚರಿಯಾಗಿತ್ತು.
ವಾರ್ ಕಾಲ್ ಮಾಡ್ಲಿಕ್ಕೆ ಕೇವಲ ಒಂದು ಸೂರ್ಯೋದಯ ಮಾತ್ರ ಇತು. ಎಲ್ಲರಿಗೂ Do or Die situation ಎಂದರೆ ತಪ್ಪಾಗಲಾರದು.
ಸೂರ್ಯ ಹುಟ್ಟುವುದನ್ನೇ ಕಾಯುತ್ತಾ ನಿಂತ್ತಂತ್ತಿದ್ದಳು ಅನು. ಅವಳ ಬಳಿಗೆ ಬಂದ ಅರ್ಜುನ್ನನ್ನು ನೋಡಿಯೂ ನೋಡದೆ ನಿಂತಳು. ಇದನ್ನರಿತ ಅರ್ಜುನ್ ನಿಟ್ಟುಸಿರು ಬಿಡುತ್ತಾ ಕೇಳಿದ ಮತ್ತೆ ಅದೇ ಪ್ರಶ್ನೆ ಏನೇ ನಿನ್ ಕಥೆ? ಎಷ್ಟೊತ್ತಾದರೂ ಉತ್ತರ ಕೊಡದ ಅನುನ ನೋಡಿ ಬೇಸರದಿಂದ ಹೊರಟ. ಅನು ಮಾತು ಶುರು ಮಾಡಿದಳು. ಅವನು ಅವಳ ಹಿಂದೆಯೇ ಬೆನ್ನು ಮಾಡಿ ಒಂದು ಕಡ್ಡಿಗೆ ಹೊರಗಿ ತನ್ನ ಅಂಗೈ ಅನ್ನೇ ನೋಡುತ್ತಾ ನಿಂತ.
ಅಪ್ಪ ಅಮ್ಮನ ಮುದ್ದಿನ ಒಬ್ಬಳೇ ಮಗಳು ನಾನು, ಇಬ್ಬರು ಅಣ್ಣಂದಿರ ಪ್ರೀತಿಯ ತಂಗಿ ನಾನು. ಮನೆಯಲ್ಲಿ ಎಷ್ಟೇ ಅನುಕೂಲ ಇದ್ದರು, ಹೊರಗಿನ ಪ್ರಪಂಚ ಹೇಗಿದೆ, ಕಷ್ಟ ಅಂದರೇನು ಅಂತ ನನ್ನ ಮೊದಲನೇ ಅಣ್ಣ ವೇಣು ನನಗೆ ತಿಳಿಸಿದ್ಧ. BE ಕಾಲೇಜ್ ಒಂದರಲ್ಲಿ lecturer ಆಗಿದ್ದ. ಮನೆಯ ಒಳಗೂ-ಹೊರಗೂ ಬರಿ ಬೋಧನೆಯೇ ಎಂದು ನಕ್ಕಳು. ಅಣ್ಣ ಅನ್ನೋದ್ಕಿಂತ ಒಬ್ಬ ಒಳ್ಳೆ ಬೆಸ್ಟ್ ಫ್ರೆಂಡ್ ಥರ ಇದ್ದ ನನ್ನ ಎರಡನೇ ಅಣ್ಣ ಸೂರ್ಯ. ಹೆಸರಿಗಷ್ಟೇ ಸೂರ್ಯ ಆದರೆ ಸದಾ ತಂಪಾಗಿರೋ ಚಂದ್ರ ಆಗಿದ್ದ. ನಾನು ಆ ಮನೆಯಲ್ಲಿ ಲೇಡಿ ಬಾಂಡ್ ಎಂದರೆ ತಪ್ಪಾಗಲ್ಲ ಏಕೆಂದರೆ ನಂಗೆ 12 ವರ್ಷ ಇರೋವಾಗ್ಲೇ ಕರಾಟೆ ಪಟು ಆಗಿದ್ದೆ. ಸಂಗೀತ, ಡಾನ್ಸ್, ಸ್ಪೋರ್ಟ್ಸ್ ಎಷ್ಟೋ ಸಲ ಮನೆಲ್ ಗೊತಿಲ್ದೆ ಬೈಕ್ ರೇಸ್ ಗೆ ಸಹ ಹೋಗಿರೋದ್ ಇದೆ. ಅಣ್ಣ ಸದಾ ತಲೇಲಿ ಒಳ್ಳೆ ವಿಷಯ, ಅನ್ಯಾಯದ ವಿರುದ್ಧ ನಿಲ್ಲೋದು ಇನ್ನೊಬ್ಬರಿಗೆ ಸಹಾಯ ಮಾಡೋದ್ ಇದೆ ತುಂಬಿದ್ದ. ನನ್ ತಂಗಿಗೆ ಎಲ್ಲ ವಿಷಯದ ಜ್ಞಾನ ಇರಬೇಕು ಅನ್ನೋದ್ ಅವನಾಸೆ. ಮನೆಗೆ ಸಿಲಿಂಡರ್, ದಿನಸಿ, ತರಕಾರಿ, ಅಪ್ಪ ಅಮ್ಮ ಗೆ ಮೆಡಿಸಿನ್ಸ್ ಏನೇ ಬೇಕು ಅಂದ್ರು ಎಲ್ರು ತಗೊಳ್ತಾ ಇದ್ದಿದ್ದೇ ನನ್ ಹೆಸರು. ನಾನು, ಸೂರ್ಯ ಮತ್ತೆ ವೇಣು ಒಂದೇ ಕಾಲೇಜ್. ನಾವ್ ಸ್ಟೂಡೆಂಟ್ಸ್ ವೇಣು lecturer, ಸೂರ್ಯ ಮೆಡಿಕಲ್ ಸ್ಟೂಡೆಂಟ್. ವಿದ್ಯೆ ಬಿಟ್ರೆ ನಮಗೆ ಅಂತ ಬೇರೆ ಆಸ್ತಿ ಇಲ್ಲ ಅಂತ ಮನೆಲ್ ಹೇಳಿದ್ರು. ಅಪ್ಪ ಎಷ್ಟೇ ಆಸ್ತಿ ಮಾಡಿದ್ದರೂ ಅದು ನಂದಲ್ಲ ಅನ್ನೋ ಭಾವನೆ ಇತ್ತು. PUC , ಡಿಗ್ರಿ ಮತ್ತೆ ಮಾಸ್ಟರ್ಸ್ ಅಲ್ಲಿ ನಾನೇ ಟಾಪರ್ ಆಗಿದ್ದೆ. PUC ಇಂದಾನೆ part time ಕೆಲಸ ಮಾಡ್ತಾ ಇದ್ದೆ. ಬರೋ ದುಡ್ಡಲ್ಲಿ ಒಂದ್ ಅನಾಥಾಶ್ರಮಕ್ಕೆ ಸಹಾಯ ಮಾಡ್ತಾ ಇದ್ದೆ. ಹೀಗೆ ಸರಾಗವಾಗಿ ಇದ್ದ ನನ್ನ ಜೀವನದಲ್ಲಿ ಬಂದವನೇ ಪ್ರಜ್ವಲ್. ನಂಗೆ ಲವ್ ಎಲ್ಲಾಆಗೋ ಸೀನೇ ಇಲ್ಲ ಎಂದು ಬೀಗುತಿದ್ದ ನನ್ನ ಭಾವನೆ ಹುಸಿಯಾಗಿತ್ತು.
ಹೌದು ಪ್ರಜ್ವಲ್, ಅವ್ನು ಸೂರ್ಯನ childhood friend ಅಂದ್ರೆ ತಪ್ಪಾಗಲ್ಲ. ನಾನು, ಸೂರ್ಯ, ಪ್ರಜ್ವಲ್ ಮತ್ತೆ ಅವನ ತಂಗಿ ವರ್ಷ ಎಲ್ಲಾ ಒಟ್ಟಿಗೆ ಬೆಳೆದಿದ್ದೋ. ಒಂತರ ಫ್ಯಾಮಿಲಿ ಫ್ರೆಂಡ್ಸ್. ಪ್ರಜ್ವಲ್ ತಂದೆ ಪೊಲೀಸ್ ಡಿಪಾರ್ಟ್ಮೆಂಟ್ ಅಲ್ಲಿ ಇದ್ರೂ ಅವ್ರ್ಗೆ ಡೆಲ್ಲಿ ಅಲ್ಲಿ ಕೆಲಸ ಇರೋದ್ರಿಂದ ಎಲ್ಲರೂ ಅಲ್ಲೇ ವಾಸವಾಗಿದ್ಧರು. ಹೀಗಿರುವಾಗ ಒಂದಿನ ಕಾಲೇಜ್ ಕಾರಿಡಾರ್ ಅಲ್ಲಿ ಸಡನ್ ಆಗಿ ಪ್ರಜ್ವಲ್ ನ ನೋಡ್ದೆ ಖುಷಿ, ಶಾಕ್ ಎಲ್ಲಾ ಒಟ್ಟೊಟ್ಟಿಗೆ. ನಾನಿನ್ನು ಅವ್ನಿಗೆ ನನ್ ಪ್ರೀತಿನ ಹೇಳಿರ್ಲಿಲ್ಲಾ. ಅವನೇನಾ ಅಂತಾ ಮುಂದೆ ಮುಂದೆ ಹೋದೆ ಗೋಡೆ ಹಿಂದೆ ಇದ್ದ ವರ್ಷ ಸೂರ್ಯ ನ ನೋಡ್ದೆ. ಸೂರ್ಯ ನನ್ ಕಡೆ ನೋಡಿ ನಗುತ್ತಾ ಕೇಳಿದ ಯಾರು ಅಂತ ನೆನಪಿದ್ದಾರಾ ಅಂತ. ನಾನು ಹೌದು-ಇಲ್ಲ ಎನ್ನುವಂತೆ ಅವರೆಡೆಗೆ ನೋಡುತ್ತಾ ಹಾಗೆ ನಿಂತೆ. ಪ್ರಜ್ವಲ್ ಅಂಡ್ ವರ್ಷ ಕಣೆ, ರಾಘವ್ ಅಂಕಲ್ ಮಕ್ಕಳು. You know what, ಅಂಕಲ್ ಗೆ Bangalore ಗೆ ಟ್ರಾನ್ಸ್ಫರ್ ಆಗಿದೆ ಕಣೆ ಎಂದು ತುಂಬ ಖುಷಿ ಇಂದ ಹೇಳ್ದ, ಅವ್ನ ಮುಖದಲ್ಲಿ ತುಂಬ ಖುಷಿ ನೋಡಿ ಕೇಳ್ದೆ ಏನ್ matter brother ಅಂತ ಅದ್ಕೆ ವರ್ಷ ಹೇಳುದ್ಲು ಅದು ಅನು ಏನಿಲ್ಲಾ ತುಂಬಾ ವರ್ಷ ಆದ್ಮೇಲೆ ನೋಡಿದ್ excitement ಅಷ್ಟೇ ಅಂತ ಸೂರ್ಯ ಕಡೆ ನೋಡಿದ ವರ್ಷ ಕಣ್ಣಲ್ಲಿ ಹಾಗೂ ಅವಳನ್ನೇ ದಿಟ್ಟಿಸಿ ನೋಡುತಿದ್ದ ನನ್ನಣ್ಣನ ಮುಖದಲ್ಲಿ ಪ್ರೀತಿ ಕಾಣುತಿತ್ತು. ನಾನು ಸರಿ ಎನ್ನುವಂತೆ ಪ್ರಜ್ವಲ್ ಮುಖ ನೋಡುತ್ತಿರುವಾಗಲೇ ಪ್ರಜ್ವಲ್ ಕೇಳಿದ, ಏನ್ ಕಾಲೇಜ್ ಫುಲ್ ನಿಂದೆ ಹವಾ ಅಂತೆ ಎನ್ನುತ್ತಾ ನೋಟೀಸ್ ಬೋರ್ಡ್ ನೋಡಿ ಕೇಳ್ದ ಓಹ್ಹ್ ನೋಟೀಸ್ ಬೋರ್ಡ್ ಸಹ ಬಿಟ್ಟಿಲ್ವಾ ಇಲ್ಲೂ ಇದ್ದಿಯಾ ಯಾರ್ನಾದ್ರು ಹೊಡೆದ್ಯ ಏನು ಎನ್ನುವಂತೆ ನನ್ನ ಮುಖ ನೋಡಿದ ಹಾಗೇನ್ ಇಲ್ಲ ಎನ್ನುವಂತೆ ನಕ್ಕು ಸುಮ್ಮನಾದೆ. Last Sem ಟಾಪರ್ ಆಗಿದ್ದೆ ಅದ್ಕೆ ನೋಟೀಸ್ ಬೋರ್ಡ್ ಅಲ್ಲಿ ಫೋಟೋ ಇತ್ತು. ಸೂರ್ಯ ಎಲ್ಲರನ್ನು ಮನೆಗೆ ಕರೆದ ಒಟ್ಟಿಗೆ ಮನೆ ತಲುಪಿದೆವು. ಆ ದಿನ ಒಳ್ಳೆ ನಿದ್ದೆ ಬಂತು ಅಂದ್ರೆ ಸುಳ್ಳು ಹೇಳಿದಂತೆ.
15 ವರ್ಷದ ಪ್ರೀತಿ. ಯಾರಲ್ಲೂ ಹೇಳದೆ ಮನಸ್ಸಲ್ಲೇ ಬಚ್ಚಿಟ್ಟುಕೊಂಡಿದ್ದೆ. ಆದರೂ ಹುಡುಗಿಯರು ಎಲ್ಲಾನು ಒಬ್ಬರಲ್ಲ ಒಬ್ರತ್ರ ಹೇಳ್ಕೊಂಡೆ ಹೇಳ್ಕೊಳ್ತಾರೆ ಅದೇ ರೀತಿ ನನಗು ಒಬ್ಬಳು best friend ಇದ್ಲು. ಅವಳೇ ದೀಪ Medical ಮಾಡ್ತಾ ಇದ್ಲು. ನಮ್ಮ ಗುಂಪಿನಲ್ಲಿ ಅವಳು ಒಬ್ಬಳಾಗಿದ್ದಳು, ಈ ಪ್ರೀತಿ ವಿಷ್ಯ ಅವಳಿಗೂ ಗೊತ್ತಿತ್ತು. ನನ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡವರಲ್ಲಿ ಇವಳು ಒಬ್ಬಳು.
ಹೀಗೆ ದಿನ ಕಳೆದವು, ಅಣ್ಣ ಮೆಡಿಕಲ್ ಪ್ರಾಕ್ಟಿಸ್ಗೆ ಅಂತ ಒಂದು ಹಾಸ್ಪಿಟಲ್ ಸೇರಿದ. ವರ್ಷ BE ಮುಗ್ಸಿ MNC ಕಂಪನಿ ಅಲ್ಲಿ ಕೆಲ್ಸಕ್ಕೆ ಸೇರಿದ್ದಳು. ಪ್ರಜ್ವಲ್ Canada ಅಲ್ಲಿ MS ಮುಗ್ಸಿ Bangalore ಅಲ್ಲಿ ಒಂದ್ ಕಂಪನಿ ಅಲ್ಲಿ MD ಆಗಿದ್ದ. ನನಗೆ ಪೊಲೀಸ್ ಡಿಪಾರ್ಟ್ಮೆಂಟ್ ಅಥವಾ ಆರ್ಮಿ ಸೇರೋ ಕನಸ್ಸು. ಎರಡಕ್ಕೂ ಅಪ್ಲೈ ಮಾಡಿ, ಫಿಸಿಕಲ್ ಟೆಸ್ಟ್ ಕ್ಲಿಯರ್ ಮಾಡಿ written ಎಕ್ಸಾಮ್ ಬರೆದು ರಿಸಲ್ಟ್ ಗೆ ಕಾಯ್ತ ಇದ್ದೆ.
ಎಷ್ಟ್ ದಿನ ಅಂತ ಸುಮ್ನೆ ಇರೋದು ಮನಸಲ್ಲಿ ಇರೋದ್ನ ಹೇಳ್ಬೇಕ್ ಅಂತ ಧೈರ್ಯ ಮಾಡಿ ಪ್ರಜ್ವಲ್ ನ ಮೀಟ್ ಮಾಡ್ದೆ. ಸದಾ ಹಸನ್ಮುಖಿಯಾಗಿರ್ತಿದ್ದ, ಅವ್ನ ಮುಖದಲ್ಲಿ ಸದಾ ಮಂದಹಾಸ ಕೋಪ ಅನ್ನೋದೇ ಕಡಿಮೆ. ತುಂಬಾ ಸರಳ ಜೀವಿ ಆಗಿದ್ದ. ತಾನಾಯ್ತು ತನ್ನ ಕೆಲಸ ಅಯ್ತು ಅಷ್ಟೇ ಬೇರೆಯವರ ಬಗ್ಗೆ ತಲೆ ಕೆಡುಸ್ಕೊಳ್ತಾ ಇರಲಿಲ್ಲ. ಕಾಲೇಜ್ ಕಾರಿಡಾರ್ ಅಲ್ಲಿ ಎದುರು ಬಂದರೆ ನನ್ನೊಳಗಾಗೋ ತಳಮಳ, ನನ್ನ ನೋಡಿ ನಕ್ಕಾಗ ಏನು ಅನ್ನುವಂತೆ ಅವನ ಮುಖ ನೋಡಿ ಕೂದಲು ಸರಿ ಮಾಡಿಕೊಳ್ಳುತಿದ್ದ ಪರಿ. ಮನೆಗೆ ಬಂದಾಗ ಅವನ ನೋಡಲು – ಮಾತಾಡಲು ತವಕದಿಂದ ಕಾದಿರುತ್ತಿದ್ದೆ. ಹಬ್ಬ-ಹರಿದಿನಗಳಲ್ಲಿ ಅವನ ಬರುವಿಕೆಗಾಗೇ ಕಾದಿರುತಿದ್ದೆ. Friends ಗುಂಪಿನಲ್ಲಿ ನನ್ನ ಗಮನ ಎಲ್ಲಾ ಅವನ ಕಡೆಯೇ ಇರುತಿತ್ತು. ಹುಡುಗರಂತೆ ನಾನು ಬುಲೆಟ್ ಹೊಡಿಸುವಾಗ, ಪ್ರಜ್ವಲ್ ನನ್ನ ನೋಡಿದನ ಅಂತ ದೀಪ ಬಳಿ ಕೇಳಿದರೆ ಅವಳು ನಕ್ಕು ಸುಮ್ಮನಾಗುತತ್ತಿದ್ದಳು. ಎಷ್ಟೊಂದು ಕನಸು ಎಷ್ಟೊಂದು ಆಸೆ ಹೀಗೆ ಹಿಂದಿನದ್ದನ್ನೆಲ್ಲಾ ನೆನೆಯುತ್ತಾ ಪಾರ್ಕಿನಲ್ಲಿ ಒಂದು ಕಲ್ಲಿಗೆ ಒರಗಿ ನಗುತಿದ್ದ ನನ್ನ ಎಚ್ಚರಿಸಿದ್ದು ಪ್ರಜ್ವಲ್ ಬಂದು ನನ್ನ ಭುಜ ತಟ್ಟಿ ಎಲ್ಲಿ ಕಳೆದು ಹೋಗಿದ್ದೀರಾ ಅಂದಾಗ.
ಒಹ್ ಸಾರೀ ನೀವ್ ಬಂದಿದ್ ಗೊತಾಗ್ಲಿಲ್ಲ ಅಂದೇ, ಹೇಗ್ ಗೊತ್ತಾಗುತ್ತೆ ಹಗಲುಗನಸ್ಸು ಕಾಣುತ್ತಾ ಇದ್ಧರೆ ಅಂತ ತನ್ನ ಪ್ಯಾಂಟ್ pockets ಅಲ್ಲಿ ಕೈ ಇಟ್ಟುಕೊಂಡು ಪಾರ್ಕ್ ನ ಸುತ್ತಲೂ ನೋಡಿ nice place ಅಂದ ನಾನು ಥ್ಯಾಂಕ್ಸ್ ಅಂದೇ, ಅವನು ವಾಟ್ ಅಂದ, ನಾನು shall we sit ಅಂದೇ sure ಅನ್ನುತಾ ಅಲ್ಲೇ ಬೆಂಚಿನ ಮೇಲೆ ಕುಳಿತ ನನ್ನ ತಲೆಯಲ್ಲಿ ನೂರಾರು ಪ್ರಶ್ನೆ ಹೇಗೆ ಹೇಳುವುದು, ಒಪ್ತಾನ ಬೈತಾನ, friendship ಬ್ರೇಕ್ ಆಗುತ್ತಾ, ನಮ್ ಮನೇಲಿ ಅವ್ರ ಮನೇಲಿ ಜಗಳ ಆಗುತ್ತಾ, ಅಣ್ಣ ಓಡುದ್ರೆ ಯಪ್ಪಾ ಏನೇನೋ ಆಲೋಚನೆಗಳು ಬಂದು ಹೊದೋ. ಕೈ ಅಲ್ಲಿ ಇದ್ದ ಸ್ಕೂಟಿ ಕೀನ ಗೊಂದಲದಲ್ಲಿ ಉಜ್ಜುತ್ತಾ ಇದ್ದೆ. ಥಟ್ಟನೆ ಏನ್ ಅನು ನೈಟ್ ಇಂದ whats app ಅಲ್ಲಿ online ಇಲ್ಲ ಅಂದ, ನಾನು ಮನಸ್ಸಲ್ಲೇ ಈ situation ಹೇಗ್ ಎದರಿಸುವುದು ಅಂತ prepare ಆಗ್ತಾ ಇದ್ದೆ ಅಂದೇ, ಏನಾದ್ರು ಅಂದ್ಯ ಅಂತ ನಗುತ್ತಾ ನನ್ನೆಡೆ ನೋಡಿದ ನಾನು ಹೌದು ಎನ್ನುವಂತೆ ಫೋನ್ ಲಾಕ್ ಓಪನ್ ಮಾಡಿ whats app ಓಪನ್ ಮಾಡತೊಡಗಿದೆ ಅವನು ಎದ್ದು ಹಾಗೆ ನಗುತ್ತಾ ನಿಂತ. ನಾನು ಆತುರದಲ್ಲಿ whats app ಓಪನ್ ಮಾಡಿದಾಗ ಪ್ರಜ್ವಲ್ ಒಂದ್ ಮೆಸೇಜ್ ಮಾಡಿದ್ದ “ಇವತ್ತು ನನ್ನ ಜೀವನದ ತುಂಬಾ ಅತ್ಯುತ್ತಮ ದಿನ ಅನ್ಸುತ್ತೆ ಅನು, ಯಾರಿಗೋಸ್ಕರ ಇಷ್ಟು ದಿನ ಈ ಹೃದಯ ಮಿಡಿತ ಇತ್ತೋ, ಯಾರ್ ಮಾತ್ ಕೇಳ್ಬೇಕು ಅಂತ ಕಾಯ್ತ ಇದ್ನೋ, ಎಷ್ಟೇ ದೂರದಲ್ಲಿ ನಾನಿದ್ದರೂ, ಅವ್ಳು ಇಲ್ಲಿ ಹೇಗಿದ್ದಾಳೆ ಅಂತ ತಿಳ್ಕೊಳ್ತಾ ಇದ್ದೆ. ಹೌದು ಈಗ್ಲೂ ಅವ್ಳು ಹಾಗೆ ಇದ್ದಾಳೆ. ಅದೇ ಅನು. ಸ್ವಲ್ಪಾನು ಬದ್ಲಾಗಿಲ್ಲ. ನನ್ ಮುಂದೆ ಬರೋಕ್ ಇಷ್ಟ ಆದ್ರೆ ಭಯ. ಎಲ್ಲಾ ಹೇಳ್ಬೇಕ್ ಅಂತ ಅನ್ಕೊಂಡು ಬರ್ತಾಳೆ ಆದ್ರೆ ಏನು ಹೇಳ್ದೆ ಹೋಗ್ಬಿಡ್ತಾಳೆ. study, sports and dance ಎಲ್ಲದ್ರಲ್ಲೂ first ಆದ್ರೆ ನನ್ ಮುಂದೆ ಬಂದು ನಿಂತ್ರೆ full zero. ಅವಳ ಪ್ರಕಾರ 15 ವರ್ಷದ ಪ್ರೀತಿ ನನ್ ಪ್ರಕಾರ 20 ವರ್ಷದ ಪ್ರೀತಿ. ನೀನೆ ಹೇಳು ಯಾರ್ ಪ್ರೀತಿ ಮೊದಲು? ಗೊತ್ತಿಲ್ಲ ಹೇಗ್ ಇರುತ್ತೋ ನನ್ ಮುಂದಿನ ಜೀವನ ಅವಳ ಜೊತೆ. ಎಲ್ಲದಕ್ಕೂ ನಾನ್ ಸಿದ್ದ. ಹೇಳು ಅನು ಅವ್ಳು ನಂಗೆ ಸಿಕ್ತಳಾ”?. ಈ ಪ್ರಶ್ನೆ ಜೊತೆ ಒಂದ್ ಸ್ಮೈಲ್ ಇತ್ತು. ಅವನ ಮುಖ ನೋಡೋ ಧೈರ್ಯ ಇರ್ಲಿಲ್ಲ. ಏನ್ ನಡೀತಾ ಇದೆ ಗೊತ್ತಾಗ್ತಿರ್ಲಿಲ್ಲ. ನಿಜಾನಾ ಅಂತ ಎದ್ದು ನಿಂತು ಅವನೆಡೆಗೆ ನೋಡಿದೆ, ಹೌದು ನಿಜ ಅಂತ ಅವನು ನನ್ನೆಡೆಗೆ ನೋಡಿ ನಗುತ್ತಾ ನಿಂತ. ಏನು ಮಾತಾಡಲಿಲ್ಲ ಆದರೂ ಎಲ್ಲಾ ಭಾವನೆ ವಿನಿಮಯ ಆಗಿತ್ತು. ಇದೇನಾ ಪ್ರೀತಿ ಅಂದ್ರೆ. ದೇವ್ರೇ ನಿನಗೆ ನನ್ ಇಂದ ಒಂದು ಅಭಿನಂದನೆ ಎನ್ನುತ್ತಾ ಒಟ್ಟಿಗೆ ಸಾಗಿದೆವು.
ನನ್ ಫೋನ್ ರಿಂಗ್ ಆಗತೊಡಗಿತು, ಪಿಕ್ ಮಾಡಿ ಮಾತಾಡಿದೆ, is everything fine ಅಂದ ಪ್ರಜ್ವಲ್, ಒನ್ ಗುಡ್ ನ್ಯೂಸ್ ಅಂದೇ, ಅವನು ನಗುತ್ತಾ ಹೇಳಿ ಅಂದ, Army ಎಕ್ಸಾಮ್ ಕ್ಲಿಯರ್ ಆಗಿದೆ, 6 months training ಇದೆ ಅಟೆಂಡ್ ಮಾಡೋಕೆ ಡೆಲ್ಲಿ ಗೆ ಹೋಗ್ಬೇಕ್ ಅಂದೇ. I am really proud of you. ತುಂಬಾ ಖುಷಿ ಆಗ್ತಿದೆ ಹೋಗ್ಬಾ ನಾನ್ ಕಾಯ್ತ ಇರ್ತಿನಿ, ನೀನ್ Army ಅಲ್ಲಿದ್ರು ಸಹ ನಾನ್ ಇಲ್ಲೇ ನಿನ್ ನೆನಪಲ್ಲೇ ಇರ್ತಿನಿ ಅಂದ. ಈ ದಿನ ನನ್ ದಿನಚರಿ ಅಲ್ಲಿ ತುಂಬಾ ಮಹತ್ವ ಪಡೆದಿತ್ತು. ಖುಷಿಯಿಂದ ಮನೆ ಕಡೆ ಸಾಗಿದೆವು.
ಭಾರವಾದ ಮನಸ್ಸಿನಿಂದ ಅಪ್ಪ-ಅಮ್ಮ, ಅಣ್ಣ ನನ್ನ ಕಳಿಸಿ ಕೊಟ್ಟರು. ಒಂದು ಕಡೆ ಮನೆ ಬಿಟ್ಟು ಹೋಗೋ ದುಃಖ ಇನ್ನೊಂದು ಕಡೆ ದೇಶ ಕಾಯೋ ಕನಸ್ಸು. ಪ್ರಜ್ವಲ್ ಅಂಡ್ ಸೂರ್ಯ ನನ್ನ ಡ್ರಾಪ್ ಮಾಡಿ ಹೋದ್ರು. ಟ್ರೈನ್ನಿಂಗ್ ಪಿರಿಯಡ್ ಅಲ್ಲಿ ಇದ್ದ ನಮಗೆ ಮನೆ ಸಂಪರ್ಕ ತುಂಬಾ ಕಡಿಮೆ ಇತ್ತು. ವಾರಕ್ಕೆ ಒಂದು ದಿನ ಎಲ್ಲರ ಜೊತೆ ಮಾತು. ನನ್ನ ಮತ್ತೆ ಪ್ರಜ್ವಲ್ ಸಂಭಾಷಣೆ ಸದಾ ಮೌನದಲ್ಲೇ ಸಾಗುತ್ತಿತ್ತು. ಬಾಯಿ ಬಿಟ್ಟು ಹೇಳದೆ ಹೋದರು ಎಲ್ಲಾ ಅರ್ಥವಾಗುತ್ತಿತ್ತು. ಹೀಗೆ 6 months ಟ್ರೇನಿಂಗ ಮುಗಿಸಿ ಮನೆ ಕಡೆ ಹೊರಟೆ. ನನ್ನ ಕರ್ಕೊಂಡ್ ಹೋಗೋಕೆ ಯಾರ್ ಬರಬಹುದು ಮೊದ್ಲು ಯಾರನ್ನ ನೋಡ್ತಿನಿ ಪ್ರಜ್ಜು ಬರ್ತಾನೆ ಅಲ್ವಾ ಅಂತ ಕನಸ್ಸು ಕಾಣುತ್ತಾ ಇದ್ದ ನನ್ನ ಎಚ್ಚರಗೊಳಿಸಿದ್ದು ರೈಲ್ವೆ ಸ್ಟೇಷನ್ ನ ಗದ್ದಲ. ಹೌದು Bangalore ತಲುಪಿದ್ದೆ. ಸುತ್ತ ನೋಡಿದ ನನಗೆ ಮೊದಲು ಕಾಣಿಸಿದ್ದು ದೀಪ. ಒಟ್ಟಿಗೆ ಮನೆಗೆ ತಲುಪಿದೆವು. ಅದಾಗಲೇ ಸರಿ ರಾತ್ರಿ ಆಗಿತ್ತು. ಮನೇಲೆಲ್ಲಾ ಕಾಯ್ತಾ ಇದ್ದರು. ಮಾತು-ಕಥೆ ಹರಟೆ ರಾತ್ರಿ ಎನ್ನದೆ ಸಾಗಿ ಬೆಳಗಾಗುವುದನ್ನೇ ಕಾಯುತ್ತ ಮಲಗಿದೆ.
4 ಗಂಟೆಗೆ ಎದ್ದು ಅಭ್ಯಾಸವಾಗಿ ಬೇಗ ಎದ್ದು ವಾಕಿಂಗ್ ಜಾಗಿಂಗ್ ಮುಗ್ಸಿ ಮನೆಗೆ ಬಂದೆ, ಹಾಲು ಕುಡಿದು ಸ್ನಾನ ಮಾಡಿ ಮನೇಲಿ ಯಾರಿಗೂ ಹೇಳದೆ ಹೊರಗೆ ಹೊರಟೆ. ನನ್ನ ಗಾಡಿ ಬಂದು ನಿಂತ್ತಿದ್ದು ಹೌದು ಪ್ರಜ್ವಲ್ ಮನೆ ಮುಂದೆ ಬಾಗಿಲು ತೆರದೆ ಇತ್ತು. ಯಾರು ಕಾಣಲಿಲ್ಲ, ಸೀದಾ ಮೆಟ್ಟಿಲ್ಲು ಹತ್ತಿ ಅವನ ರೂಮ್ ಕಡೆ ಹೊರಟೆ, ಗಾಜಿನ ಕೆಟಕಿ ಕಡೆ ಮುಖ ಮಾಡಿ ಕಾಫಿ ಕಪ್ ಹಿಡಿದು ನಿಂತಿದ್ದ, ನನ್ನ ನೋಡಿ ಎಂದಿನಂತೆ ನಸುನಕ್ಕ ಆದರೂ ಏನೋ ಸರಿ ಇಲ್ಲ ಎನ್ನುವತೆ ಭಾಸವಾದರೂ ಹಾಗೆ ಕಡೆಗಣಿಸಿ ಹೇಗಿದ್ಯಾ ಎಂದು ಕೇಳುತ್ತಿದ್ದಂತೆ ದೀಪ ಅಲ್ಲಿಗೆ ಬಂದಳು. ನಾನ್ ಓಹ್ ದೀಪ ಎಂದು ಮುಖ ನೋಡುತ್ತಿದ್ದಂತೆ ಪ್ರಜ್ವಲ್ ದೀಪನ ಕೇಳಿದ, ಯಾರಿದು ಎಂದು ನನ್ನ ಕಡೆ ಬೆರಳು ಮಾಡಿ. ಏನು ಅರ್ಥ ಆಗದೆ ಅವನನ್ನೇ ನೋಡಿ ಕೇಳಿದೆ ತಮಾಷೆ ಮಾಡ್ತಿದ್ಯ ಅಂತ ಅವನು what ಎಂದು ಮುಖ ಸುಕ್ಕಲು ಮಾಡಿಕೊಂಡು ನನ್ನ ನೋಡಿದ, ಆ ನೋಟಕ್ಕೆ ನಾನಲ್ಲೇ ಕುಸಿದಿದ್ದೆ. ದೀಪ ಪ್ರಜ್ವಲ್ ಗೆ ತಿಂಡಿ ಮಾಡೊಗು ಎಂದು ಹೇಳಿ ಕೆಳಗಡೆ ಕಳಿಸಿ ರೂಮ್ ಬಾಗಿಲು ಹಾಕಿದಳು. ನನ್ನೆಡೆ ನೋಡಿ ನನ್ನ ಭುಜ ಹಿಡಿದು ಹೇಳಿದಳು ಸಾರೀ ಕಣೆ, ನೀನ್ ಟ್ರೈನ್ನಿಂಗ್ ಗೆ ಹೋದ್ಮೇಲೆ ಪೇಪರ್ ಅಲ್ಲಿ ಒಂದ್ ಆಡ್ ಬಂದಿತ್ತು ಬೈಕ್ ರೇಸ್ ಬಗ್ಗೆ, ನಿಂಗೆ ಇಷ್ಟ ಅಲ್ವಾ ರೇಸಿಂಗ್ ಅಂದ್ರೆ ಅಂತ ನನ್ ಮುಖ ನೋಡಿದಳು ಹೌದು ಅನ್ನುವಂತೆ ನಾನು ನೆಲ ನೋಡಿದೆ. ಆ ರೇಸಿಂಗ್ ಅಲ್ಲಿ ನಿಂಗೆ surprise ಕೊಡ್ಬೇಕ್ ಅಂತ ಪ್ರಜ್ವಲ್ participate ಮಾಡ್ದ but bad luck, he met with an accident, ಆ ಆಕ್ಸಿಡೆಂಟ್ ಇಂದಾಗಿ ತಲೆಗೆ injury ಆಗಿ he lost memory of few things ಅದ್ರಲ್ಲಿ ನಿನ್ ನೆನಪು ಸಹ ಒಂದು. ಅವ್ನು 3 months ಕೋಮಾ ಅಲ್ಲೇ ಇದ್ದ ಎಂದು ಮಾತು ಮುಗಿಸಿ ಅಲ್ಲಿಂದ ಹೊರಟಳು. ತಾನು ನಿಂತ್ತಿದ್ದ ನೆಲವೇ ಕುಸಿದಂತಾಗಿತ್ತು. ತನ್ನಲ್ಲಿನ ನೋವಿಗೆ ಕಣ್ಣೀರು ಹೆಪ್ಪುಗಟ್ಟಿತ್ತು. ಹೃದಯ ಹಿಂಡಿದಂತಾಗಿ ಪ್ರಾಣವೇ ಹೋದಂತ್ತಿತ್ತು. 20 ವರ್ಷದ ಪ್ರೀತಿ ಇಷ್ಟೇನಾ ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತೆ.
ಅಲ್ಲಿಂದ ಪ್ರಜ್ವಲ್ ಟ್ರೀಟ್ಮೆಂಟ್ ತಗೊಂಡ ಹಾಸ್ಪಿಟಲ್ ಗೆ ಹೊರಟೆ. ಅಲ್ಲಿ ಆರ್ಮಿ influence ಇಂದ information collect ಮಾಡಿದೆ. ಪ್ರಜ್ವಲ್ ನ ಟ್ರೀಟ್ ಮಾಡಿದ ಡಾಕ್ಟರ್ ಹೆಸರು ಸರ್ಚ್ ಮಾಡಿದಾಗ ಸಿಕ್ಕಿದ್ದು it was ಡಾಕ್ಟರ್ ದೀಪ. ಹೌದು ಅದೇ ದೀಪ ನನ್ ಬೆಸ್ಟ್ ಫ್ರೆಂಡ್. ದೀಪ ಕ್ಯಾಬಿನ್ ಗೆ ಹೊರಟ ನನಗೆ ಎದುರಾಗಿದ್ದು ನರ್ಸ್ ಲಕ್ಷ್ಮಿ, ತುಂಬಾ ಪರಿಚಿತೆ ಅಂತ ಕಂಡರೂ ಯಾರು ಅಂತ ಗೊತ್ತಾಗದೆ ನಾನು ಮುಂದೆ ಸಾಗುತ್ತಿದ್ದೆ, ಲಕ್ಷ್ಮಿ ಕೇಳಿದಳು ಹೇಗಿದ್ದೀಯ ಅಕ್ಕ ಎಂದು ಆಮ್ ಫೈನ್ ಎಂದು ಹೊರಟೆ, ನನ್ನ ಕೈ ಹಿಡಿದು ಲಕ್ಷ್ಮಿ ಟೆರೇಸ್ ಕಡೆ ನಡೆದಳು, ಅಕ್ಕ ನಂಗೆ ನಿಮ್ ಪ್ರೀತಿ ವಿಷ್ಯ ಗೊತ್ತಿತ್ತು, ಪ್ರಜ್ವಲ್ಅಣ್ಣಗೆ ಆಕ್ಸಿಡೆಂಟ್ ಆಗಿದ್ ನಿಜ, ಆದರೆ ನಿಮ್ ನೆನಪು ಸಂಪೂರ್ಣವಾಗಿ ಹೋಗಿರ್ಲಿಲ್ಲ ಎಂದ ಲಕ್ಷ್ಮಿ ಕಡೆ ಏನ್ ಹೇಳ್ತಾ ಇದ್ದೀಯ ಅಂತ ನೋಡಿದೆ. ಹೌದಕ್ಕ ದೀಪ ಮೇಡಂ ಅವ್ರ ದೂರಾಸೆಗೆ, ಪ್ರಜ್ವಲ್ ಅಣ್ಣನ ಮನಸ್ಸಿನಲ್ಲಿದ್ದ ಅನು ಜಾಗಕ್ಕೆ ದೀಪ ಅನ್ನೋ ಹೆಸರಿಟ್ಟರು, ನಾನೇ ಅವ್ರ್ನ ಇಷ್ಟ ಪಡ್ತಾ ಇದ್ದಿದ್ದು ಅನ್ನೋ ಕಥೆ ಕಟ್ಟಿದ್ದರು. ಇನ್ನು treatment ಅಲ್ಲಿದ್ದ ಪ್ರಜ್ವಲ್ ಅಣ್ಣಾಗೆ ಇದೆ ನಿಜ ಅಂತ ಅನ್ಕೊಂಡ್ರು. ನಿಮ್ ಪ್ರೀತಿ ವಿಷ್ಯ ಮನೆಲ್ ಗೊತಿಲ್ದೆ ಇರೋದೇ ದೀಪ ಮೇಡಂಗೆ advantage ಅಯ್ತು ಎಂದಳು. ಅಕ್ಕ ಇದೆ ಸತ್ಯ ನಾನ್ ಹೇಳ್ದೆ ಅಂತ ಯಾರಿಗೂ ಹೇಳ್ಬೇಡಿ ಅಂತ ಹೇಳಿ ಲಕ್ಷ್ಮಿ ಅಲ್ಲಿಂದ ಹೊರಟಳು. ನಾನು ಯಾವುದನ್ನೂ ನಂಬಲು ಆಗದೆ ಅಲ್ಲೇ ಕುಸಿದೆ. ಅಲ್ಲಿಂದ ಸೀದಾ ದೀಪ ಮನೆಗೆ ಹೋದೆ ಅವಳ ರೂಮ್ಗೆ ಯಾರಿಗೂ ತಿಳಿಯದಂತೆ ಹೋಗಿ ಅವಳ Laptop and dairy ತೆಗೆದು ನೋಡಿದೆ, ಹೌದು ಲಕ್ಷ್ಮಿ ಹೇಳಿದ್ದು ನಿಜ ಆಗಿತ್ತು. ದೀಪ ಪ್ರಜ್ವಲ್ ನ ಪ್ರೀತಿ ಮಾಡ್ತಾ ಇದ್ಲು. ಪ್ರಜ್ವಲ್ ಗೆ accident ಆಗಿದ್ದೆ ದೀಪ ಪಾಲಿಗೆ ಒಂದ್ advantage ಆಗಿತ್ತು. ಮಾಸಿ ಹೋಗಿದ್ದ ಅನು ಹೆಸರು ಪ್ರಜ್ವಲ್ ಜೀವನದಲ್ಲಿ ದೀಪ ಅಂತ ಬದ್ಲಾಗಿತ್ತು, ಆದ್ರೆ ಪ್ರೀತಿ? ಬೇಡ ಇದ್ಯಾವುದರ ಮದ್ಯೆ ನಾನ್ ಇರಲ್ಲ ನಂಗೆ ಪ್ರಜ್ವಲ್ ಖುಷಿ ಮುಖ್ಯ, ನಾನ್ ಇಲ್ದೆ ಇರೋ ಅವನ ಜಗತ್ತು ಮೊದಲಿನಂತೆ ಚೆನ್ನಾಗಿದೆ., ನಾನ್ ಅವ್ನ disturb ಮಾಡಲ್ಲ. ಅವ್ನು ಖುಷಿಯಾಗಿರ್ಲಿ. ನಾನೇ ಹೋಗ್ತೀನಿ ಎಂದು ಮನೆಗೆ ಹೊರಟೆ. Army ಆಫೀಸ್ ಇಂದ ಕಾಲ್ ಬಂದಿದೆ ಹೊರಡ್ಬೇಕ್ ಸಾರೀ ಎಂದು ಅವಸರವಾಗೇ ಅಪ್ಪ ಅಮ್ಮನಿಗೆ ನಮಸ್ಕರಿಸಿ ಅಣ್ಣಂದಿರ ಆಶೀರ್ವಾದ ಪಡೆದು, ಭಾರವಾದ ಮನಸ್ಸಿನಿಂದ ಹೊರಡುವಾಗ ಪ್ರಜ್ವಲ್ ಎದುರಾದ, ಓಹ್ಹ್ ಸಾರೀ ನೀವ್ ಸೂರ್ಯ ತಂಗಿ ಅಂತ ನಂಗೆ ಗೊತಿರ್ಲಿಲ್ಲ, ನೀವ್ ಆರ್ಮಿ ಅಲ್ಲಿದ್ದಿರಾ ಅಂತ ದೀಪ ಹೇಳುದ್ಲು, I am really proud of you. ತುಂಬಾ ಖುಷಿ ಆಗ್ತಿದೆ ಎಂದ ಪ್ರಜ್ವಲ್ ಮುಖನೆ ದಿಟ್ಟಿಸಿ ನೋಡಿ ಈಗ ಇದು ಬೇಕಾ ಎನ್ನುವಂತೆ ತನ್ನ ಬ್ಯಾಗ್ ಸೂಟ್ಕೇಸ್ ರೆಡಿ ಮಾಡ್ಕೊಂಡೆ. Have a safe journey ಎಂದು ನಗುತ್ತಾ ಪ್ರಜ್ವಲ್ ಹೇಳಿದ್ದಾಗ ದೀಪ ಏನು ಗೊತಿಲ್ಲದವಳಂತೆ ಪ್ರಜ್ವಲ್ ಕೈ ಹಿಡಿದು ಒಳ ನಡೆದಳು. ಖುಷಿಯಾಗಿರು ಪ್ರಜ್ವಲ್ ನಿನ್ನ ಬಿಟ್ಟು ನನ್ನ ಜೀವನದಲ್ಲಿ ಬೇರೆ ಯಾರಿಗೂ ಜಾಗವಿಲ್ಲ ಎನ್ನುವಂತೆ, ನಿಟ್ಟುಸಿರು ಬಿಡುತ್ತ ಮನೆಯಿಂದ ಹೊರನಡೆದೆ..
ವಾರ್ ಫೀಲ್ಡ್ ಇಂದ ಬಂದ ಜೋರಾದ ಸದ್ದುಅರ್ಜುನ್ ನ ಎಚ್ಚರ ಗೊಳಿಸಿತು. ಅನು ನಗುತ್ತಾ ಹೇಳಿದಳು ಯಾಗಲು ನನ್ ಕಥೆ ಕೇಳ್ತಾ ಇದ್ದಲ್ವಾ ಇದೆ ನನ್ ಕಥೆ ಎಂದು ನಕ್ಕು ಅಲ್ಲಿಂದ ಹೊರನಡೆದವಳನ್ನೇ ದಿಟ್ಟಿಸಿ ಕಂಬನಿ ತುಂಬಿದ ಕಂಗಳಿಂದ ನೋಡುತ ನಿಂತ…
—
-ಅನಘ aka ಸೌಮ್ಯ ರಾಮಕೃಷ್ಣ