ಗಜಲ್
ಉರಿ-ಚಳಿಯಿಂದ ದೂರವೇ ಇದ್ದೆ, ನಿನ್ನ ಬಗ್ಗೆ ಚಿಂತಸಲೆ ಇಲ್ಲ
ನೀನು ಆಡಾಡುತ ಬಿದ್ದು ಯೋಚಿಸಲು ಕಾಲವ ನೀಡಲೆ ಇಲ್ಲ
ಮಗಳ ಹೆರಿಗೆಯಲ್ಲಿ ಅನ್ನವ ಮರೆತು ಮದಿರೆಯ ದಾಸನಾದೆ
ಕೈ ತುತ್ತು ಮಾಡಿ ತಿನ್ನಿಸುವ ಭಾಗ್ಯವು ನನಗೆ ಕರುಣಿಸಲೆ ಇಲ್ಲ
ಮನೆತುಂಬ ಜನ ಸೇರಿದರು ಅರಿಯಲಿಲ್ಲ ನಿನ್ನ ಸಂಕಟವನ್ನು
ಯಾವ ಆಸ್ಪತ್ರೆಯ ಔಷಧಿಯೂ ಜೀವವನ್ನು ಉಳಿಸಲೆ ಇಲ್ಲ
ದವಾಖಾನೆಯ ದಂಡೆಲ್ಲ ಸೇರಿ ಆಟವಾಡಿದರು ನಿನ್ನೊಂದಿಗೆ
ಬಿಳಿ ಅಂಗಿಯ ವೈದ್ಯರು ಯಾರೂ ನಿನ್ನನ್ನು ಕಾಪಾಡಲೆ ಇಲ್ಲ
ನನಗೆ ಮಸಣದ ಹತ್ತಿರ ಪಾರಿವಾಳದ ರಕ್ತ ಕಂಡಿತು ಬಾಬಾ
ನಿನ್ನಯ ಜೀವ ಹೋದದ್ದು ಪಾಪಿ ‘ಮಲ್ಲಿ‘ಗೆ ತಿಳಿಯಲೆ ಇಲ್ಲ
✍️ರತ್ನರಾಯಮಲ್ಲ