ಪ್ರೇಮ-
ಇದು ಹೃದಯಗಳ ವಿಷಯ – 1
ಪ್ರೇಮ ಎಂದರೇನು?
ಪ್ರತಿಯೊಬ್ಬ ವ್ಯಕ್ತಿಯೂ ಪ್ರೇಮಕ್ಕೆ ತನ್ನದೇ ಆದ ಬೇರೆ ಬೇರೆ ವ್ಯಾಖ್ಯಾನಗಳನ್ನು ನೀಡ್ತಾನೆ, ಕೆಲವರ ಪ್ರಕಾರ ಪ್ರೇಮ ಅಂದ್ರೆ ತಾವು ಇಷ್ಟ ಪಟ್ಟವರ ಜೊತೆಗಿರೋದೇ ಅಂತಾರೆ, ಮತ್ತೆ ಕೆಲವರು ಹೇಳ್ತಾರೆ ತಾವು ಇಷ್ಟ ಪಡುವವರನ್ನು ಬಿಟ್ಟಿರೊಕೆ ಆಗ್ದೆ ಇರೋದಂತೆ, ಇನ್ನೂ ಕೆಲವರ ಪ್ರಕಾರ ತಾವು ಇಷ್ಟ ಪಟ್ಟವರ ಜೊತೆ ಮಾತಾಡೋದು, ಕಾಳಜಿ ವಹಿಸೋದು ಮತ್ತು ಅವರನ್ನು ಮಿಸ್ ಮಾಡ್ಕೊಳ್ಳೋದನ್ನೇ ಪ್ರೇಮ ಎನ್ನುತ್ತಾರೆ.
ಆದ್ರೇ ವಾಸ್ತವದಲ್ಲಿ ಇವೆಲ್ಲವುಗಳು ಪ್ರೇಮವೇ ಅಲ್ಲ.
ನೀವು ಮೊದಲ ಬಾರಿಗೆ ಒಬ್ಬ ವ್ಯಕ್ತಿಯನ್ನು ಕಂಡಾಕ್ಷಣ ವಾವ್ ಎನಿಸಿದರೆ ನೀವು ಅವರನ್ನು ಕೇವಲ ಇಷ್ಟ ಪಡುತ್ತೀರಿ ಎಂದರ್ಥ ಯಾಕಂದ್ರೆ ನೀವು ನೋಡಿದ ವ್ಯಕ್ತಿ ತುಂಬಾ ಆಕರ್ಷಕರಾಗಿದ್ದು ನೋಡಲು ಸುಂದರವಾಗಿಯೇ ಇರಬಹುದು, ಇಲ್ಲದಿದ್ದರೆ ನಿಮ್ಮಲ್ಲಿ ವಾವ್ ಇನ್ನುವ ಉಧ್ಗಾರ ಬರಲು ಸಾಧ್ಯವೇ ಇಲ್ಲ ಮತ್ತೇ ಅವರು ಸುಂದರವಾಗಿಯೇ ಇರದಿದ್ದರೆ ನೀವು ಖಂಡಿತವಾಗಿ ಅವರನ್ನು ಕಡೆಗಣಿಸಬಹುದಾಗಿತ್ತು.
ನಾವು ಇನ್ನೊಬ್ಬರ ಸೌಂದರ್ಯಕ್ಕೆ ಮರುಳಾಗೋದು ಪ್ರೇಮವಲ್ಲ, ಅದು ಕೇವಲ ತಾತ್ಕಾಲಿಕವಾದ ಆಕರ್ಷಣೆಯೆಷ್ಟೆ.
ಯಾಕಂದ್ರೇ ನೀವು ಯಾರಿಗಾದರೂ ಅಷ್ಟೇ ಯಾಕೆ ಸುಂದರವಾಗಿರುವ ಪ್ರತಿಯೊಬ್ಬರಿಗೂ ಆಕರ್ಷಿತರಾಗಬಹುದು ಆದ್ರೇ ನೀವು ಪ್ರೇಮಿಸುವುದಿಲ್ಲ.
ಇನ್ನೂ ಕೆಲವರು ಹೇಗಂದ್ರೆ ವಾವ್ ಅವಳ\ಅವನ ನೋಟಕ್ಕೆ, ಮೈಮಾಟಕ್ಕೆ ಕಳ್ದೋದೆ love at first sight ಅಂತ, ಮೊದಲ ನೋಟದಲ್ಲೇ ನಂಗೆ ಪ್ರೇಮ ಶುರುವಾಗಿದೆ ಅನ್ನುತ್ತಾರೆ. ನಿಜ ಏನಂದ್ರೇ ಪ್ರೇಮವನ್ನು, ಪ್ರೇಮಿಸಲು ಆರಂಭಿಸಲು ಸಾಧ್ಯವೇ ಇಲ್ಲ, ಯಾಕಂದ್ರೇ ಪ್ರೇಮದ ಭಾವನೆ ತಾನಾಗಿಯೇ ನಮ್ಮನ್ನು ಮೈಮರೆಸಿ ಅಂತರಾತ್ಮದಲ್ಲಿ ಉದ್ಭವಿಸಿ ನಿಧಾನವಾಗಿ ಅರಿವಿಲ್ಲದಂತೆ ನಮ್ಮಲ್ಲೇ ಬಲಗೊಳುತ್ತಾ ಬೆಳೆಯುತ್ತದೆ.
ಇನ್ನೊಬ್ಬರನ್ನು ನಮ್ಮೊಂದಿಗಿರುಂತೆ ಒತ್ತಾಯಿಸುವುದು ಪ್ರೇಮವಲ್ಲ ಮತ್ತು ಅವರನ್ನು ಬಲವಂತವಾಗಿ ಪಡೆಯುವುದೂ ಪ್ರೇಮವಲ್ಲ, ಯಾಕೆಂದರೆ ಈ ಸಮಯದಲ್ಲಿ ನೀವು ತುಂಬಾ ಸ್ವಾರ್ಥಿಗಳಾಗಿ ಆ ವ್ಯಕ್ತಿಯ ಬಗ್ಗೆ ಅವರ ಭಾವನೆಗಳ ಬಗ್ಗೆ ಯೋಚಿಸದೇ ಕೇವಲ ನಿಮ್ಮ ಬಗ್ಗೆಯೇ ಯೋಚಿಸುತ್ತೀರಿ ಹಾಗಾಗಿ ಇದು ಕೂಡ ಪ್ರೇಮವಲ್ಲ.
ಹಾಗಾದ್ರೆ ನಿಜವಾಗಿಯೂ ಪ್ರೇಮ ಅಂದ್ರೇನು?
ಆಕರ್ಷಣೆ? ಅಲ್ಲ. ಅಂಟಿಕೊಂಡಿರೋದು? ಅಲ್ಲ.
ಇದ್ಯಾವು ಪ್ರೇಮವೇ ಅಲ್ಲ,
ಪ್ರೇಮ ಅಂದ್ರೆ- ನೀವು ಯಾವ ವ್ಯಕ್ತಿಯೊಂದಿಗೆ ನಿಮ್ಮ ಪರಿಪೂರ್ಣತೆಯನ್ನು ಕಾಣುತ್ತೀರೋ ಮತ್ತು ಆ ವ್ಯಕ್ತಿಯು ನಿಮಗೆ ಬೇರೇ ಅಂದೆನಿಸುವ ಭಾವನೆಯೇ ಬರುವುದಿಲ್ಲ, ಯಾಕಂದ್ರೆ ಅವರು ನಿಮ್ಮದೇ ಒಂದು ಭಾಗವಾಗಿರ್ತಾರೆ, ಆ ವ್ಯಕ್ತಿಯಲ್ಲಿ ನಿಮ್ಮನ್ನೇ ನೀವು ಕಂಡುಕೊಳ್ತಿರಿ, ಅವರೇ ನೀವು ನೀವೇ ಅವರೇ ಅನ್ನುವಂತಾಗ್ತಿರಿ.
ಪ್ರೇಮ ಅನ್ನೋದು ಜಗತ್ತಿನ ಒಂದು ಸುಂದರ ಭಾವನೆ. ಆದ್ರೆ ಅದ್ಕೆ ಒಂದೊಂದೇ ವ್ಯಾಖ್ಯಾನ ನೀಡೋಕೆ ಹಾತೊರೆಯುತ್ತಾರೆ ಆದ್ರೆ ವಾಸ್ತವವಾಗಿ ಪ್ರೇಮಕ್ಕೆ ಯಾವ್ದೇ ಒಂದು ನಿರ್ದಿಷ್ಟ ಹೇಳಿಕೆಯಿಲ್ಲ ಯಾಕಂದ್ರೆ ಪ್ರೇಮ ನಿರ್ದಿಷ್ಟವಾದ ಉದ್ದೇಶ ಪೂರ್ವಕವಾದುದಲ್ಲ.
ಪ್ರೇಮ ಅಂದ್ರೆ ಮೊದಲು ನಿಮಗಾಗುವ ಭಾವನೆ ಆಮೇಲೆ ಬೇರೆಯವರಿಗಾಗುವ ಅದ್ಭುತವಾದ ಭಾವನೆ.
ಅಂತಹ ಪ್ರೇಮದಲ್ಲಿ ಆ ವ್ಯಕ್ತಿಯೇ ನಿಮ್ಮ ಆತ್ಮದ ಶಾಂತಿಯಾಗಿರ್ತಾರೆ.
ಇನ್ನೊಬ್ಬರ ಜೊತೆಗಿರುವುದೇ ಪ್ರೇಮವಲ್ಲ, ಬದಲಾಗಿ ಅವರ ಸಂತೋಷವನ್ನು ಬಯಸುವುದೇ ಪ್ರೇಮ, ಅವರ ಸದೃಢತೆಯನ್ನು ಬಯಸುವುದೇ ಪ್ರೇಮ, ಅವರಿಗಾಗಿ ಅವರ ಒಳಿತಿಗಾಗಿ ಪ್ರಾರ್ಥಿಸುವುದು, ಪೂಜಿಸುವುದೇ ಪ್ರೇಮ, ಅವರ ಯಶಸ್ಸನ್ನು ಬಯಸೋದೇ ಪ್ರೇಮ, ಅವರು ನಿಮ್ಮೊಂದಿಗಿರಲಿ ಇಲ್ದೇ ಇರಲಿ ಅವರೇ ನಿಮ್ಮ ನಿಲ್ದಾಣವಾಗಿಬಿಡುತ್ತಾರೆ. ಅಂತವರಲ್ಲಿ ನೀವು ಯಾವುದೇ ಬದಲಾವಣೆ ಬಯಸದೇ ಅವರನ್ನು ಅವರಿದ್ದಂತೆ, ಅವರ ಜೀವನವನ್ನು ಗೌರವಿಸಿ ಸ್ವೀಕರಿಸುವುದೇ ನಿಜವಾದ ಪ್ರೇಮ.
ಅವರ ಏಳಿಗಾಗಿ ಬೆಂಬಲಿಸಿ, ಅದೂ ಸಾಧ್ಯವಾಗದಿದ್ದರೂ ಅವರು ತಮ್ಮ ಜೀವನದಲ್ಲಿ ಯಶಸ್ಸು ಕಾಣುವುದನ್ನು ಕಂಡು ಖುಷಿ ಪಡ್ತಿರಲ್ಲ ಅದು ಪ್ರೇಮ.
ನಾವು ಕೇವಲ ತಾತ್ಕಾಲಿಕವಾದ ಭಾವನೆಗಳಿಗೆ ಪ್ರೇಮ ಎಂದು ಹೆಸರಿಡುವುದುರ ಮೂಲಕ ಪ್ರೇಮವನ್ನು ಅಪಮೌಲ್ಯಗೊಳಿಸುತ್ತೇವೆ ಇದು ಈಗಿನ ಟ್ರೆಂಡ್ ಅಂದ್ರೂ ತಪ್ಪಿಲ್ಲ.
ಜನರು ಈಗಿನ ದಿನಗಳಲ್ಲಿ ಇನ್ನೊಬ್ಬರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದನ್ನೇ ಗೀಳಾಗಿ ಮಾಡಿಕೊಂಡರೆ ಇನ್ನೂ ಕೆಲವೊಮ್ಮೆ ವಿಧಿಯೇ ಪ್ರೇಮ ಪಕ್ಷಿಗಳ ಬಾಳಿನಲ್ಲಿ ಆಟವಾಡಿಬಿಡುತ್ತದೆ.
ಆದ್ರೆ ಇದು ಜೀವನ, ಎಷ್ಟೋ ಜೀವಗಳು ನಮ್ಮ ಹಾದೀಲಿ ಜೊತೆಯಾಗಿ ಕೊನೆಗೆ ಜೀವನದ ಒಂದು ತುದಿಯಲ್ಲಿ ನಮ್ಮನ್ನು ತೊರೆಯುವ ಮೂಲಕ ಕೆಲವೊಂದಿಷ್ಟು ಸಿಹಿ-ಕಹಿ ನೆನಪುಗಳನ್ನು ಮಾತ್ರ ಬಿಟ್ಟೊಗ್ತಾರೆ.
ಇದರಿಂದ ಕುಗ್ಗದಿರಿ, ಜೀವನದ ಗುರಿಗಳನ್ನು ತಲುಪಲು ಯಶಸ್ವಿಯಾಗಿ ಪ್ರಯತ್ನಿಸಿ.
ನೀವು ಪ್ರೇಮಿಸುವವರನ್ನು ಸ್ವತಂತ್ರವಾಗಿರಲು ಬಿಟ್ಟುಬಿಡಿ,
ಯಾಕಂದ್ರೆ ಪ್ರೇಮ ಬಂಧನವಲ್ಲ ಅದು ಸಂಪೂರ್ಣವಾದ ಸ್ವತಂತ್ರ.
ನಿಮ್ಮ ಪ್ರೇಮ ನಿಜವಾಗಿ ಪರಿಪೂರ್ಣವಾಗಿದ್ದರೆ ನೀವು ಪ್ರೇಮಿಸುವವರು ಖಂಡಿತವಾಗಿ ಮರಳಿ ನಿಮ್ಮನ್ನು ಸೇರುತ್ತಾರೆ ಮತ್ತು ಸೇರಲೆಂಬುದೇ ಈ ಬರಹದ ಮೂಲಕವೇ ನನ್ನ ಹರಕೆ
–ಮಂಜು ದಿವ್ಯಮೌನಿ