ಕುಮಾರಣ್ಣನ ಸರ್ಕಾರ ಬಿಳಿಸಿದ್ದು ಕಾಂಗ್ರೆಸ್‍ನ ಸಿದ್ಧರಾಮಯ್ಯ- ಕಟೀಲ್

ಮಸ್ಕಿ : ಅನೈತಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಆಡಳಿತ ನಡೆಸಿದ ಕುಮಾರಸ್ವಾಮಿ ತಾಜ್ ಹೋಟೆಲ್‍ನಲ್ಲಿ ಕುಳಿತುಕೊಂಡು ಅಧಿಕಾರ ನಡೆಸಿದರು. ಮೈತ್ರಿ ಸರ್ಕಾರವನ್ನು ಬಿಜೆಪಿ ಬಿಳಿಸಲಿಲ್ಲ. ಕುಮಾರಣ್ಣನ ಸರ್ಕಾರವನ್ನು ಬಿಳಿಸಿದ್ದು ಸಿದ್ದರಾಮಯ್ಯನವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಪಟ್ಟಣದ ಬ್ರಮಾರಂಭ ಕಲ್ಯಾಣ ಮಂಟದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರ ಮೇಲ್ಪಟ್ಟವರ ಹಾಗೂ ಪ್ರಮುಖರ ಸಭೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್‍ನ ಸಿದ್ಧರಾಮಯ್ಯ 5 ವರ್ಷ ನಿದ್ದೆ ಮಾಡುತ್ತಲೆ ಸರ್ಕಾರ ನಡೆಸಿದರು. ಕುಮಾರಸ್ವಾಮಿ ತಾಜ ಹೊಟೆಲ್‍ನಲ್ಲಿ ಅಧಿಕಾರ ನಡೆಸಿ ಶಾಸಕರನ್ನು ಅಗೌರವದಿಂದ ನೋಡಿಕೊಂಡರು ಇದರಿಂದ ಬೇಸತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜಿನಾಮೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು 17 ಜನ ಶಾಸಕರು ರಾಜಿನಾಮೆ ನೀಡಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. 17 ಜನರ ಸಹಕಾರವನ್ನು ಬಿಜೆಪಿ ಮರೆಯುವುದಿಲ್ಲ ಕೊಟ್ಟ ಮಾತಿನಂತೆ ಅವರನ್ನು ಗೌರವದಿಂದ ಕಾಣುತ್ತೇವೆ ಮತ್ತು ಮುಂದಿನ ಉಪಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ಪಕ್ಷದ ಕಾರ್ಯಕರ್ತರ ಮೇಲಿದೆ ಅದಕ್ಕಾಗಿ ಚುನಾವಣೆ ಯಾವಾಗ ಬೇಕಾದರು ಬರಲಿ ಸಿದ್ಧರಾಗಿರಿ ಎಂದು ಕಟೀಲು ತಿಳಿಸಿದರು.
ಜನರ ನೀರೀಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಜನರಿಗೆ ಕಾಮಧೇನು ಇದ್ದಂತೆ. ಜನರಿಗೆ ಅನುಕೂಲವಾಗುವಂತ ಯೋಜನೆಗಳನ್ನು ರೂಪಿಸಿದ್ದಾರೆ. ಮುಂದಿನ 3 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದರು.


ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಬದಿಗೊತ್ತಿ ಬರುವ ಉಪಚುನಾವಣೆಯಲ್ಲಿ ಮತ್ತೆ ಶಾಸಕರನ್ನಾಗಿ ಮಾಡುವ ಮೂಲಕ ಕಾರ್ಯಕರ್ತರು ಅವರಿಗೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
ನಂತರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ 17 ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಯಬೇಕಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಸ್ಪಲ್ಪ ತಡವಾಗಿದ್ದು ಈಗಾಗಲೇ ಪ್ರಕರಣವೂ ಇತ್ಯರ್ತವಾಗಿದೆ. ಇನ್ನು ಒಂದು ತಿಂಗಳ ಒಳಗಾಗಿ ಚುನಾವಣೆ ಎದುರಾಗಬಹುದು ಆದ್ದರಿಂದ ಕಾರ್ಯಕರ್ತರು ಪಕ್ಷವನ್ನು ಬಲಪಡಿಸಿ ಮುಂಬುರುವ ಚುನವಾನೆಯಲ್ಲಿ ನನ್ನನ್ನು ಮತ್ತೋಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಯಚೂರು ಸಂಸದ ರಾಜಾ ಅಮರೇಶ ನಾಯಕ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರ ಅಭ್ಯರ್ಥಿ ಶಶೀಲ್ ನಮೋಶಿ, ಸುರುಪುರ ಶಾಸಕ ರಾಜುಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ರಾಯಚೂರು ಬಿಜೆಪಿ ಜಿಲಾಧ್ಯಕ್ಷ ರಾಮಾನಂದ ಯಾದವ್ ವಹಿಸಿಕೊಂಡಿದ್ದರು. ರಾಯಚೂರು ಶಾಸಕ ಶಿವರಾಜ ಪಾಟೀಲ್, ಮಹಿಳಾ ಅಧ್ಯಕ್ಷೆ ಶಶಿಕಲಾ, ಜಿಪಂ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಮಾಜಿ ಶಾಸಕ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್ ಸೇರಿದಂತೆ ಇನ್ನಿತರರು ಇದ್ದರು.
——————————-

ಮಸ್ಕಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರ ಹಾಗೂ ಪ್ರಮುಖರ ಸಭೆಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ಹಾಗೂ ಅವರ ಬೆಂಬಲಿಗರು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇದರಿಂದ ಕ್ಷೇತ್ರದಲ್ಲಿ ಮೂಲ-ವಲಸಿಗರ ನಡುವೆ ಬಿನ್ನಾಭಿಪ್ರಾಯ ಇದೆ ಎಂಬುದು ಬಟಾಬಯಲಾಯಿತು.

Don`t copy text!