ಖಾಸಗಿ ಶಾಲ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೀಕ್ಷಕರು ಹಾಗೂ ಉಪನ್ಯಾಸಕರಿಗೆ ಕರೋನಾ ಹಿನ್ನಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಸ್ಕಿ ತಾಲೂಕು ಪ್ರಚಾರ್ಯರ ಸಂಘದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲು ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗಚ್ಚಿನಮಠದಲ್ಲಿ ಮಂಗಳವಾರ ಈಶಾನ್ಯ ಶಿಕ್ಷಕರ ಮತ ಪ್ರಚಾರಕ್ಕೆ ಆಗಮಿಸಿದಾಗ ತಾಲೂಕು ಪ್ರಚಾರ್ಯರ ಸಂಘದ ಅಧ್ಯಕ್ಷ ಪಂಪಾಪತಿ ಗುತ್ತೇದಾರ ಮನವಿ ಮಾಡಿದರು. ರಾಮಣ್ಣ ನಾಯಕ, ಲಕ್ಷ್ಮಣ ಕರ್ಲಿ, ಸುರೇಶ್ ಕೆಂಬಾವಿಮಠ ಹಾಗೂ ಇತರರು ಇದ್ದರು.