52 ಕೋಟಿ ವೆಚ್ಚದಲ್ಲಿ ಕಾಲುವೆಗಳ ಆಧುನೀಕರಣ – ಶಾಸಕ ಆರ್. ಬಸನಗೌಡ.

ಮಸ್ಕಿ ಜಲಾಶಯಕ್ಕೆ ಬಾಗಿನ ಸಲ್ಲಿಕೆ
ಮಸ್ಕಿ : ₹ 52 ಕೋಟಿ ವೆಚ್ಚದಲ್ಲಿ ಕಾಲುವೆಗಳ ಆಧುನೀಕರಣ

-e-ಸುದ್ದಿ ಮಸ್ಕಿ

ರೈತ ಜೀವನಾಡಿಯಾದ ಮಸ್ಕಿ ಜಲಾಶಯ ಯೋಜನೆ ವ್ಯಾಪ್ತಿಯ ಎಡ ಹಾಗೂ ಬಲದಂಡೆ ಕಾಲುವೆ ಜೊತೆಗೆ ಎಲ್ಲಾ ವಿತರಣಾ ಕಾಲುವೆಗಳನ್ನು ₹ 52 ಕೋಟಿ ವೆಚ್ಚದಲ್ಲಿ ಆಧುನೀಕರಣ ಗೊಳಿಸಲಾಗುತ್ತಿದೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ತಿಳಿಸಿದರು‌

ತಾಲ್ಲೂಕಿನ ಮಸ್ಕಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ‘ ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಟೆಂಡರ್ ತೆರೆಯಲಾಗಿದ್ದು, ಹಣಕಾಸು ಟೆಂಡರ್ ತೆರೆಯಬೇಕಾಗಿದೆ
ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ‌ ಪೂರ್ಣಗೊಳ್ಳಲಿದ್ದು ಕಾಮಗಾರಿ ಅರಂಭವಾಗಲಿದೆ ಎಂದರು.
ದೇಶದಲ್ಲಿ ಭೀತಿ ಉಂಟು ಮಾಡುತ್ತಿರುವ ಕೊವಿಡ್ ಮೂರನೇ ಅಲೆ ತಪ್ಪಿಸಲು ಸರ್ಕಾರದೊಂದಿಗೆ ಸಹಕರಿಸಬೇಕು,
ಕೊವಿಡ್ ಮೊದಲ ಹಾಗೂ ಎರಡನೇ  ಅಲೆ ಸಾಕಷ್ಟು ನಷ್ಟ ಉಂಟುಮಾಡಿದೆ. ಜನರ ಬದುಕು ಕಷ್ಟಕರವಾಗಿದೆ, ಕೊವಿಡ್ ನಿಯಂತ್ರನಕ್ಕೆ ಮಾಸ್ಕ್ ಬಳಕೆ ಹಾಗೂ ಅಂತರ್ ಕಾಪಾಡಿಕೊಳ್ಳುವುದೊಂದಿಗೆ ಮಾರ್ಗ ಎಂದರು.
ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಮಸ್ಕಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಕ್ಷೇತ್ರದ ಜನರು ನನಗೆ ಸಹಕರಿಸಬೇಕು ಎಂದರು.
ಮಸ್ಕಿ ಜಲಾಶಯ ಭರ್ತಿಯಾಗಿದೆ. ಈ ಭಾಗದ ರೈತರ   ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡುವ ಸಂಬಂಧ ಅಗಸ್ಟ್ 10 ರಂದು ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಅಂದು ನೀರು ಬಿಡುವ ಬಗ್ಗೆ ತಿರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನ ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ. ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಕೆಪಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಮುಖಂಡ ಆರ್. ಸಿದ್ದನಗೌಡ, ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನಭಾವಿ, ಎಚ್, ಬಿ. ಮುರಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಮೈಬುಸಾಬ ಮುದ್ದಾಪೂರ, ಆದನಗೌಡ ದಳಪತಿ, ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಾವುದ್ ಸಾಬ ಸೇರಿದಂತೆ ಇತರರು ಇದ್ದರು.

ವಿವಿಧ ಕಾಮಗಾರಿಗೆ ಭೂಮಿ ಪೂಜೆ
ಮಸ್ಕಿ: ತಾಲ್ಲೂಕಿನ ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ರಸ್ತೆಯ $ 1 ಕೋಟಿ, ಜಕ್ಕೇರಮಡಗದಿಂದ ಮಟ್ಟೂರು ತಾಂಡಾ ರಸ್ತೆ $ 85 ಲಕ್ಷ, ವ್ಯಾಸನಂದಿಹಾಳದಿಂದ ವಾಲ್ಮೀಕಿ ನಗರ ರಸ್ತೆ $ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಡಾಂಬರೀಕರಣಕ್ಕೆ ಶಾಸಕ ಆರ್. ಬಸನಗೌಡ ಭೂಮಿ ಪೂಜೆ ನೆರವೇರಿಸಿದರು.
ಅಂಕುಶದೊಡ್ಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ $ 99 ಲಕ್ಷ ವೆಚ್ಚದ ಶುದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು.
ಅಧಿಕಾರಿಗಳು ಹಾಗೂ ಮುಖಂಡರು ಇದ್ದರು. 

Don`t copy text!