ಮೊಬೈಲ, ಬೈಕ್ ಕಳ್ಳರ ಬಂಧನ ೧೯ಮೊಬೈಲ್, ೨ ಬೈಕ್ ವಶ

ಮೊಬೈಲ, ಬೈಕ್ ಕಳ್ಳರ ಬಂಧನ
೧೯ಮೊಬೈಲ್, ೨ ಬೈಕ್ ವಶ

e-ಸುದ್ದಿ, ಮಸ್ಕಿ

ಪಟ್ಟಣದ ಖಾಸಗಿ ಮೊಬೈಲ ಅಂಗಡಿಯಲ್ಲಿ ಕಳುವಾಗಿದ್ದ ೧೯ ಮೊಬೈಲ್ ಮತ್ತು ೨ ಮೊಟರ್ ಸೈಕಲ್ ಗಳನ್ನು ಸಮೇತ ೪ ಜನ ಕಳ್ಳರನ್ನು ಬಂಧಿಸುವಲ್ಲಿ ಮಸ್ಕಿ ಠಾಣೆಯ ಪೊಲೀಸರು‌ ಯಶಸ್ವಿಯಾಗಿದ್ದಾರೆ ಎಂದು‌ ಲಿಂಗಸುಗೂರು ಉಪ ವಿಭಾಗದ ಡಿವೈಎಸ್ ಪಿ ಎಸ್.ಎಸ್.ಹೂಲ್ಲೂರು ಹೇಳಿದರು.
ಪಟ್ಟಣದ ಸಿಪಿಐ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ವಶಪಡಿಸಿಕೊ‌ಂಡ ಮೊಬೈಲ್ ಹಾಗೂ ಬೈಕ್ ಸಹಿತ ಆರೋಪಿಗಳನ್ನು ಪ್ರದರ್ಶಿಸಿದರು.
೪ ಜನ ಆರೋಪಿಗಳಿಂದ ೩, ೧೬, ೯೪೪ ರೂ, ಮೌಲ್ಯದ ಮೊಬೈಲಗಳು ೯೦ ಸಾವಿರ ಮೌಲ್ಯದ ಎರಡು ಬೈಕ್ ಗಳು ಒಟ್ಟು೪,೦೬,೯೪೪ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರಾದ ವೀರೇಶ ತಂದೆ ನಾಗಪ್ಪ ಗುಂಡಗಿ, ಬಸವರಾಜ ,  ಪ್ರಕಾಶ  ಪುಜಾರಿಪೇಟೆ ಮಸ್ಕಿ , ರಾಜಶೇಖರ  ಸುಂಕನೂರು ಅವರುಗಳನ್ನು ನ್ಯಾಯಾಂಗ ಬಂಧನಕೊಪ್ಪಿಸುವದಾಗಿ ಎಸ್.ಎಸ್.ಹೂಲ್ಲೂರು ತಿಳಿಸಿದರು.
ತಂಡ ರಚನೆ – ಎಸ್.ಪಿ ಪ್ರಕಾಶ ನಿಕ್ಕಂ, ಸಹಾಯಕ ಎಸ್.ಪಿ ಹರಿಬಾಬು, ಡಿವೈಎಸ್ ಪಿ ಎಸ್.ಎಸ್.ಹೂಲ್ಲೂರು ಇವರ ಮಾರ್ಗದರ್ಶನ ದಲ್ಲಿ ಮಸ್ಕಿ ವೃತ್ತ ಸಿಪಿಐ ದೀಪಕ್ ಬೂಸರಡ್ಡಿ ನೇತೃತ್ವದಲ್ಲಿ ಮುದಗಲ್ ಪಿಎಸ್ ಐ ಡಾಕೇಶ, ಮಸ್ಕಿ ಪಿಎಸ್ ಐ -೨ ಭೀಮದಾಸ ಸೇರಿದಂತೆ ಪೊಲೀಸರು ತಂಡ ರಚಿಸಿ ಮೊಬೈಲ್ ಕಳ್ಳರನ್ನು ಪತ್ತೆ ಮಾಡುವಲ್ಲಿ‌ಯಶಸ್ವಿಯಾಗಿದ್ದಾರೆ.

 

Don`t copy text!