ಅಮರೇಶ್ವರ ದೇವಾಲಯದಲ್ಲಿ ಭಕ್ತರ ದಂಡು ಕೆರೊನಾ ನಿಯಮ ಮಾಯಾ
e-ಸುದ್ದಿ, ಲಿಂಗಸುಗುರು
ತಾಲೂಕಿನ ಗುರುಗುಂಟ ಅಮರೇಶ್ವರ ದೇವಸ್ಥಾನದಲ್ಲಿ ಭಾನುವಾರ ದೇವರ ದರ್ಶನಕ್ಕೆ ಜನ ಗುಂಪು ಗುಂಪಾಗಿ ಆಗಮಿಸಿ ಕರೊನ ನಿಯಮ ಪಾಲನೆ ಆಗದೆ ಸಾರ್ವಜನಿಕರಿಗೆ ತೊಂದರೆ ಆದ ಘಟನೆ ಕಂಡುಬಂದಿದೆ.
ನಾಗರ ಅಮವಾಸ್ಯೆ ರವಿವಾರ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಜನ ಆಗಮಿಸಿದ್ದು ಕರೊನಾ ನಿಯಮ ಮರೆತು ಮುಗಿಬಿದ್ದು ಅಮರೇಶ್ವರನ ದರ್ಶನ ಪಡೆಯುತಿದ್ದರು ಆಡಳಿತ ಮಂಡಳಿಮಾತ್ರ ಇದಾವುದು ತನಗೆ ಸಂಬಂಧ ವಿಲ್ಲವೆಂಬಂತೆ ವರ್ತಿಸುವುದು ಕಂಡುಬಂದಿತು.
ರಾಜ್ಯದಲ್ಲಿ ಕರೊನಾ ದಿನೆದಿನೆ
ಹೆಚ್ಚಾಗುವ ಸಾಧ್ಯತೆ ಇದ್ದು ದೇವಸ್ಥಾನ ದರ್ಶನವನ್ನು ಬಂದ್ ಮಾಡಲಾಗಿದೆ ಜಾತ್ರೆಗಳು ಸಹಿತ ರದ್ದುಪಡಿಸಲಾಗುತ್ತಿದೆ ಆದರೆ ತಾಲ್ಲೂಕಿನ ಅಮರೇಶ್ವರ ದೇವಸ್ಥಾನದಲ್ಲಿ ಮಾತ್ರ ಕರೊನಾ ದ ಯಾವುದೇ ನಿಯಮಗಳನ್ನು ಪಾಲಿಸದೆ ಜನತೆ ದಂಡುದಂಡಾಗಿ ಕಂಡುಬಂತು ದೇವರ ದರ್ಶನಕ್ಕಂತು ಎಲ್ಲೆಲ್ಲೂ ನೂಕುನುಗ್ಗಲು ಮಾಸ್ಕ ಹಾಕಿದವರು ಅಪರೂಪವಾಗಿ ಕಂಡರು.
ಭಕ್ತಜನರು ಬೃಹತ್ ಪ್ರಮಾಣದಲ್ಲಿ ದೇವಸ್ಥಾನ ಕ್ಕೆ ಬರುತಿದ್ದರು ಮಾಸ್ಕ ಧರಿಸದಿದ್ದರು ಅವರನ್ನು ನಿಯಂತ್ರಿಸಬೇಕಾದ ಆಡಳಿತ ಮಂಡಳಿ ಮಾತ್ರ ಕಂಡು ಬರಲಿಲ್ಲ.
ನಾಗರ ಅಮವಾಸ್ಯೆ ಮತ್ತು ರವಿವಾರ ದ ಅಮವಾಸ್ಯೆ ದೇವಸ್ಥಾನ ಕ್ಕೆ ಹೆಚ್ಚಿನ ಪ್ರಮಾಣದಲಿ ಜನ ಬರಬಹುದು ಏನಾದರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇನ್ನುವ ಕನಿಷ್ಠ ಕಾಳಜಿಯು ಆಡಳಿತ ಮಂಡಳಿಯಲ್ಲಿ ಇದ್ದಂತೆ ಕಾಣುತ್ತಿಲ್ಲ.
ಅಷ್ಟು ಜನರನ್ನು ನಿಯಂತ್ರಿಸಲು ಕೇವಲ ಒಬ್ಬ ಪೊಲೀಸ್ ಮಾತ್ರ ಕಂಡುಬಂದ ಆತನನ್ನು ತಳ್ಳಿಕೊಂಡು ಜನ ದರ್ಶನಕೆ ಪ್ರವೇಶಪಡೆಯಲು ಮುನ್ನುಗ್ಗುತ್ತಿತ್ತು.
ಶ್ರಾವಣ ಸೋಮವಾರಗಳು ಬರುತಿದ್ದು ಆಗಲು ಸಹ ಹೀಗೆ ಜನರು ಗುಂಪು ಗುಂಪಾಗಿ ಬರುವ ಸಂಭವವಿದ್ದು ದೇವಸ್ಥಾನದ ಆಡಳಿತ ಮಂಡಳಿ ಇನ್ನಾದರು ಎಚ್ಚೆತ್ತುಕೊಂಡು ಜನಸಂದಣಿಯಾಗದಂತೆ ತಡೆದು ಭಕ್ತರಿಗೆ ದರ್ಶನ ಮಾಡಿಸಬಹುದೆ ಅಂತ ಕಾದು ನೋಡ ಬೇಕಾಗಿದೆ