ಮಸ್ಕಿ ಪಟ್ಟಣದಲ್ಲಿ ಕೋವಿಡ್‍ನಿಂದ ಮೃತ ಪಟ್ಟಿದ್ದ ಬಸವರಾಜ್ ಭಜಂತ್ರಿ ಮನೆಗೆ ಶಾಸಕ ಬಸನಗೌಡ ಬೇಟಿ


e-ಸುದ್ದಿ, ಮಸ್ಕಿ
ಇತ್ತಿಚಿಗೆ ಕೋವಿಡ್‍ನಿಂದ ಮೃತ ಪಟ್ಟಿ ಬಸವರಾಜ್ ಅವರ ಮನೆಗೆ ಶಾಸಕ ಬಸನಗೌಡ ಗತುರ್ವಿಹಾಳ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಪಟ್ಟಣದ ಗಾಂಧಿನಗರದ ನಿವಾಸಿ ಬಸವರಾಜ ಭಜಂತ್ರಿ ಕರೊನಾ ಸೋಂಕಿನಿಂದ ಮೃತ ಪಟ್ಟಿದ್ದರು. ಭಾನುವಾರ ಶಾಸಕ ಬಸನಗೌಡ ತುರ್ವಿಹಾಳ ಅವರು ಮೃತರ ಮನೆಗೆ ಬೇಟಿ ನೀಡಿ ಕುಟುಂ¨ದವರಿಗೆ ಸಂತ್ವಾನ ಹೇಳಿ ವ್ಯಯಕ್ತಿಕವಾಗಿ ಧನ ಸಹಾಯ ಮಾಡಿದರು.
ಸರ್ಕಾರದಿಂದ ದೊರೆಯುವ ಕೋವಿಡ್ ಪರಿಹಾರ ದೊರಕಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಮಹಾಂತೇಶ ಜಾಲವಾಡಗಿ, ಸದ್ದಾಂ, ಬಸವರಾಜ ನಾಯಕ, ದುರ್ಗರಾಜ್ ವಟಗಲ್, ವಸಂತ ಸೇರಿದಂತೆ ಇತರರು ಇದ್ದರು.

 

Don`t copy text!