ಶ್ರಾವಣ ಮಾಸ
ತವರೂರ ಪ್ರೀತಿಯ ಹೊತ್ತು
ಆಷಾಢ ಮಾಸದಿ
ಪತಿಯ ಆಯುಷ್ಯ ಬೇಡಿ
ಭೀಮನ ಅಮಾವಾಸ್ಯೆಗೆ
ಗೆದ್ದು ಪತಿಯ ಮನ
ಶೃಂಗಾರದಿ ನಾಚಿಕೆಯ ನಾಜೂಕಿನ
ಮದುವಣಗಿತ್ತಿ ಮನೆ ಹೊಸ್ತಿಲಕೆ
ಬಲಗಾಲಿಟ್ಟು ಶ್ರವಣ ಮಾಸಕೆ
ತುಂತುರು ಹನಿ, ಮುತ್ತು ರತ್ನಗಳಂತೆ
ಹೊಳೆಯುವ ಮಂಜಿನ ಹನಿ
ಹಸಿರಿನಲಿ ಹೊಸತನದಿ ಬಂತು
ಶೃಂಗಾರ ಶ್ರಾವಣ ಮಾಸ
ಶಿವನ ಒಲುಮೆಗೆ ಪಾರ್ವತಿಯ
ವಿಶೇಷಪೂಜೆಯಸೋಮವಾರ
ವರವನು ಬೇಡಿ ಮುತ್ತೈದೆಯರ ಪೂಜೆ
ಮಂಗಳ, ಶುಕ್ರವಾರಗಳ ಶ್ರಾವಣ ಮಾಸ
ದಿನವೂ ಪೂಜೆ, ದೇವಾಲಯಗಳ
ಘಂಟೆಯ ನಾದ, ಭಕ್ತಿನ ಭಕ್ತಿಯ
ಆಲಿಸುವ ಪರಾಕಾಷ್ಠೆ ತಲಪುವ ಮಾಸ
ಶ್ರಾವಣ ಮಾಸ
–ಮಾಜಾನ ಮಸ್ಕಿ