ಫೇತ್ ಜಾರ್ಜ. ಬೇಡ, ಮಹಾತ್ಮಾ ಗಾಂಧೀಜಿ #ಬೇಕು:1942 ರ ಘಟನೆ
ಹೀರೆಬಾಗೇವಾಡಿ ಬೆಳಗಾವಿ ಜೆಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡ ನಗರ. ಹಲವಾರು ಹೋರಾಟಗಾರರಿಗೆ ಜನ್ಮ ನೀಡಿದ ಪೂಣ್ಯಭೂಮಿ.
ಈ ಗ್ರಾಮದಲ್ಲಿ ಸ್ವಾತಂತ್ರ್ಯ_ಹೋರಾಟದ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಬ್ರಿಟಿಷ್ ಸರಕಾರಕ್ಕೆ ಇರಿಸು ಮುರಿಸಾಗುವ ಘಟನೆ ನಡೆದಿತ್ತು.
ಬ್ರೀಟಿಷ ಯುವರಾಜ fifth_George ನ ಭಾವಚಿತ್ರ ಒಡೆದು ಹಾಕುವ ಮೂಲಕ ನಡೆದ ಸನ್ನೀವೇಶವನ್ನು ಸ್ವಾತಂತ್ರ್ಯ ದ ಸವಿಗಳಿಗೆಯಲ್ಲಿ ಮೆಲುಕು ಹಾಕುವ ಯತ್ನ.
ಬೆಳಗಾವಿಯ ಹಿರೇಬಾಗೇವಾಡಿ ಕನ್ನಡ ಶಾಲೆ. ಶಾಲೆಯಲ್ಲಿ ಅಂದಿನ ಸರಕಾರದ ಪರಮೋಚ್ಚ ರಾಜ fifth_george ನ ಪೋಟೋವನ್ನು ಈಶ್ವರ ಕಮ್ಮಾರ, ಮಹಾದೇವ ಕಮ್ಮಾರ ಮಾನಪ್ಪ ಬಡಿಗೇರ ಏಂಬ ೯ವರ್ಷದ ಈ ಮೂವರು ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕಿಡಕಿ ಮುರಿದು ಒಳಹೊಕ್ಕು Fifth_george ಪೋಟೋ ಒಡೆದು ನಾಶಮಾಡಿದರು.
ಸರಕಾರವು ಇವರ ದೇಶ ದ್ರೋಹದ
ಕಟ್ಲೆ ಹಾಕಿತ್ತು. ಕಟ್ಲೆ ನಡೆದ ಕಾಲಕ್ಕೆ ಪೋಟೋ ಏಕೆ ಮುರಿದು ಹಾಕಿದಿರಿ ಏಂದು ಆಗ ಅಧಿಕಾರದಲ್ಲಿದ್ದ
ಹಿರೇಮಠ ಏಂಬ ಕಲೆಕ್ಟರ ಕೇಳಲು ನಮಗೆ fifth george ಬೇಡ, ಮಹಾತ್ಮ ಗಾಂಧೀಜಿ ಬೇಕು . ಆ ಕಾರಣಕ್ಕಾಗಿ ಒಡೆದೆವು ಅಂದರು.
ಹೀರೇಮಠ ಏಂಬ ಕಲೆಕ್ಟರರು ಶಹಾಬಾಶ ಎಂದು ಹುಡುಗರ ಬೆನ್ನ ಮೇಲೆ ಚಪ್ಪರಿಸಿದರು. ಆದರೆ ಈ ಹುಡುಗರಿಗೆ ಬೆದರಿಕೆ ಹಾಕಲು ಕಲೇಕ್ಟರರು ಪಡಿಕಿ ಶಿಕ್ಷೆ ನೀಡುವುದಾಗಿ ಬೇದರಿಕೆ ಹಾಕಿದರು.
ಆಗ ಜಿಲ್ಲಾ ನಾಗರಿಕ ಶಸ್ತ್ರಚಿಕಿತ್ಸ ವೈದ್ಯರು ಇವರು ಬಾಲಕರು. ಇವರಿಗೆ ಶಿಕ್ಷೆ ಕೊಡಲು ಅವಕಾಶ ಇಲ್ಲವೆಂದು ಹೇಳಿದ್ದರಿಂದ ಶಿಕ್ಷೆ ಕೊಡದೆ ಹಾಗೇ ಬಿಟ್ಟರು.
ಇಂತಹ ಅದೇಷ್ಟೊ ಘಟನೆಗಳು ನಮ್ಮಮಧ್ಯ ನಡೆದಿವೆ. ಅವುಗಳನ್ನು 75 ನೇ ಸ್ವಾತಂತ್ರ್ಯದ ಸಂದರ್ಭದಲ್ಲಿ ಮೇಲುಕು ಹಾಕುವ ಮೂಲಕ ಸ್ವಾತಂತ್ರ್ಯ ಮಹತ್ವ, ಅದಕ್ಕೆ ತೆತ್ತ ಬೆಲೆ, ಕಳೆದುಕೊಂಡ ಜೀವಗಳು, ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗಳ ಬಗೆಗೆ ಚಿಂತನೆ ಮಾಡಲು ಸಕಾಲ..
ಈ ಘಟನಾವಳಿಯಲ್ಲಿ ಬಾಗಿಯಾದ ಶ್ರೀಈಶ್ವರ ಕಮ್ಮಾರ ಅವರು ಮುಂದೆ ಕಿತ್ತೂರ ನಾಡಿನ ಸಾರಸ್ವತ ಲೋಕದ ಆಸ್ತಿಯಾಗಿ ಕಾರ್ಯ ನಿರ್ವಹಿಸಿದರು, ಅವರ ಚಿತ್ರವನ್ನು ಅವರ ಮಗ ಮತ್ತು ನನ್ನ ಸ್ನೇಹಿತರು ಆದ ಶ್ರೀವಿಜಯಕುಮಾರ ಕಮ್ಮಾರ ಅವರು ನೀಡಿರುವರು.
ಲೇಖನ:ಮಹೇಶ ನೀಲಕಂಠ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦.