e-ಸುದ್ದಿ, ಮಸ್ಕಿ
ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯ ಪಡೆಯಲು ನಮ್ಮ ದೇಶದ ಹಿರಿಯರ ತ್ಯಾಗ ಬಲಿದಾನ ಕಾರಣವಾಗಿದ್ದು ಅವರನ್ನು ಸದಾ ಸ್ಮರಿಸಬೇಕಾದರೆ ಭವ್ಯ ಭಾರತವನ್ನು ಸ್ವಸ್ಥ ಸಮಾಜದ ಚಿಂತನೆಯಲ್ಲಿ ದೇಶ ಕಟ್ಟಬೇಕಾಗಿದೆ ಎಂದು ತಹಸೀಲ್ದಾರ ಕವಿತಾ ಆರ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 75 ನೇ ಸ್ವಾತಂತ್ರ್ಯ ದಿನ ಆಚರಣೆಯ ಅಂಗವಾಗಿ ಸಾರ್ವಜನಿಕ ಧ್ವಾಜಾರೋಹಣ ನೆರವೇರಿಸಿ ಮಾತನಾಡಿದರು.
ಪರಕೀಯರಿಂದ ಸ್ವಾತಂತ್ರ್ಯ ಪಡೆಯಲು ಅನೇಕ ರೀತಿಯ ಹೋರಾಟದ ಪ್ರತಿಫಲದಿಂದ ದೇಶ ಸ್ವತಂತ್ರವಾಗಿದೆ. ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ದಿ ಸಕಷ್ಟು ಆಗಿದ್ದರು ಇನ್ನೂ ಮಾಡಬೇಕಾದ ಬಹಳ ಕೆಲಸಗಳಿವೆ. ಯುವ ಜನಾಂಗ ಜಾಗೃತರಾಗಬೇಕಾಗಿದೆ ಎಂದರು.
ಇತ್ತೀಚಿಗೆ ಮನುಕುಲ ಕರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಮುಕ್ತಿ ಪಡೆಯಲು ಸರ್ಕಾರದ ಕರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ತಹಸೀಲ್ದಾರ ಕವಿತಾ ಆರ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಸಮಾಜದ ಕಟ್ಟಕಡೆಯ ಮನುಷ್ಯನ ಏಳಿಗೆಯನ್ನು ಮಾಡುವ ಮೂಲಕ ದೇಶಕ್ಕೆ ಸಿಕ್ಕ ಸ್ವಾತಂತ್ರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ತಾ.ಪಂ.ಇಒ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪಿಎಸ್‍ಐ ಸಿದ್ಧರಾಮ, ಜಿ.ಪಂ. ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬ್ಯಾಳಿ, ಮಾಜಿ.ಜಿ.ಪಂ. ಸದಸ್ಯ ಎಚ್.ಬಿ.ಮುರಾರಿ, ಅಂದಾನಪ್ಪ ಗುಂಡಳ್ಳಿ, ಸಿದ್ದಣ್ಣ ಹೂವಿನಬಾವಿ ಇದ್ದರು.