50 ಲಕ್ಷ ರೂ ವೆಚ್ಛದಲ್ಲಿ ಶಾಸಕರ ಭವನ ನಿರ್ಮಾಣ-ಬಸನಗೌಡ ತುರ್ವಿಹಾಳ


e-ಸುದ್ದಿ, ಮಸ್ಕಿ
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ನೂತನ ಶಾಸಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ತಹಸೀಲ್ದಾರ ಕಚೇರಿಗೆ ಹೊಂದಿಕೊಂಡಂತೆ ಪುರಸಭೆಯ ಸಿಎ ಸೈಟ್ ನಲ್ಲಿ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಬಾಲಕರ ವಸತಿ ನಿಲಯಕ್ಕಾಗಿ 4.60 ಲಕ್ಷ ರೂಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಟೆಂಡರ್ ಪ್ರಕಿಯೆ ಮುಗಿದಿದ್ದು ಶೀಘ್ರ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಮಸ್ಕಿ ಕ್ಷೇತ್ರದ ಅಭಿವೃದ್ದಿಗೆ ಎಲ್ಲರು ಸಹಕರಿಸುವಂತೆ ಶಾಸಕ ಬಸನಗೌಡ ತುರ್ವಿಹಾಳ ಮನವಿ ಮಾಡಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಮುಖಂಡರಾದ ಸಿದ್ದಣ್ಣ ಹೂವಿನಬಾವಿ, ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಮಲ್ಲಯ್ಯ ಬಳ್ಳಾ, ಮಲ್ಲಣ್ಣ ನಾಗರಬೆಂಚಿ, ಕೃಷ್ಣಾ ಚಿಗರಿ, ಬಸನಗೌಡ ಮುದಬಾಳ, ಬಸಪ್ಪ ಜಂಗಮರಹಳ್ಳಿ, ರಾಜೇಶ್ವರಿ ಬಿಜಿ ನಾಯಕ ಸೇರಿದಂತೆ ಅನೇಕರು ಇದ್ದರು.

Don`t copy text!