ಪ್ರಭುಸ್ವಾಮಿ ಅಲ್ಲಯ್ಯಾ ಅರಳಿಮಟ್ಟಿ

ಪ್ರಭುಸ್ವಾಮಿ ಅಲ್ಲಯ್ಯಾ ಅರಳಿಮಟ್ಟಿ

ಈಗ ನಾಲ್ಕು ವರ್ಷಗಳ ಹಿಂದೆ ತಮ್ಮ 97ನೇ ವಯಸ್ಸಿನಲ್ಲಿ ಲಿಂಗೈಕ್ಯವಾದವರು… ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು…

ಸ್ವಾತಂತ್ರ್ಯ ನಂತರ ಅವರ ಸರಿಕರೆಲ್ಲ ಸ್ವಾತಂತ್ರ್ಯ ಹೋರಾಟಗಾರರೆಂಬ ಬಿರುದಿನೊಂದಿಗೆ ಅನೇಕ ಸರ್ಕಾರಿ ಸವಲತ್ತುಗಳನ್ನು ಪಡೆದರು.. ಅದು ಅವರಿಗೆ ಸಲ್ಲಬೇಕಿದ್ದ ಹಕ್ಕು ಮತ್ತು ಗೌರವವೂ ಆಗಿತ್ತು. ಯಾವತ್ತೂ ಗೌರವವೆ…. ಆದರೆ ಪ್ರಭುಸ್ವಾಮಿ ಅರಳಿಮಟ್ಟಿ ಅವರು ಮಾತ್ರ ಯಾವುದೇ ಸವಲತ್ತುಗಳನ್ನು ಪಡೆಯಲು ನಿರಾಕರಿಸಿದರು…

ನಮ್ಮ ಉದ್ದೇಶ ಸ್ವಾತಂತ್ರ್ಯ ಪಡೆಯುವದಿತ್ತು. ಪಡೆದಾಯಿತು. ಇನ್ನು ನಮಗೆ ಬೇಕಾದ ಹಾಗೆ ದೇಶದ ಯಾವುದೇ ಜಾಗದಲ್ಲಿ ಬಯಸಿದ ಬದುಕು ಕಟ್ಟಿಕೊಳ್ಳೊಣ. ಎಂದು ಬಾಗಿಲವರೆಗೆ ಬಂದ ಸವಲತ್ತುಗಳನ್ನು ನಯವಾಗಿ ನಿರಾಕರಿಸಿದ್ದರು… ಅವರ ಆಪ್ತ ಗೆಳೆಯ ಸೋಮಲಿಂಗಪ್ಪಾ ಮಳಗಲಿಯವರೂ ಗೆಳೆಯನಿಗೆ ಸವಲತ್ತುಗಳನ್ನು ಪಡೆಯಲು ಅನೇಕ ಸಲ ಹೇಳಿದರಾದರೂ ಪ್ರಭುಸ್ವಾಮಿ ಅರಳಿಮಟ್ಟಿ ಅವರು ನಗುತ್ತಲೆ ನಿರಾಕರಿಸಿ.

ಶ್ರಮದ ಜೀವನ ನಡೆಸಿ ಸಂತ್ರುಪ್ತವಾಗಿದ್ದು ಹಾಗೆ ನಿರ್ಗಮಿಸಿದವರು.. ಅವರ ಸೊಸೆ ಎನಿಸಿಕೊಳ್ಳಲು ನನಗೆ ಹೆಮ್ಮೆ
. ಇಂದು ಇಂಥವರನ್ನು ನೆನೆಯುವದು ನಮ್ಮ ಕರ್ತವ್ಯ.

-ಸರ್ವಮಂಗಳ ಅರಳಿಮಟ್ಟೆ, ಬೆಳಗಾವಿ

Don`t copy text!