e-ಸುದ್ದಿ, ಮಸ್ಕಿ
ನನ್ನ ಗೆಲುವಿನನಲ್ಲಿ ಭೋವಿ (ವಡ್ಡರ್) ಸಮಾಜದ ಪಾತ್ರ ಪ್ರಮುಖವಾಗಿದ್ದು ಈ ಸಮಾಜ ತೊರಿಸಿದ ಪ್ರೀತಿ ವಿಶ್ವಾಸವನ್ನು ನಾನು ಮರೆಯುವುದಿಲ್ಲ ಎಂದು ನೂತನ ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸೋಮವಾರ ಭೋವಿ (ವಡ್ಡರ್) ಸಮಾಜದವರರಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಶಾಸಕ ಬಸನಗೌಡ ತುರ್ವಿಹಾಳ ಸಮಾಜದವರ ಬೇಡಿಕೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ಬಸನಗೌಡ ತುರ್ವಿಹಾಳ ಮಸ್ಕಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ನಡೆಸುವ ಮೂನ್ಸೂಚನೆ ನೀಡಿದ್ದಾರೆ.
ಭೋವಿ ವಡ್ಡರ್ ಸಮಾಜದವರು ಬಸನಗೌಡ ತುರ್ವಿಹಾಳ ಅವರನ್ನು ಕೈ ಬಿಡಬೇಡಿ. ಮುಂದಿನ ಬಾರಿ ಗೆಲ್ಲಿಸುವ ವಿಶ್ವಾಸ ಈ ಸಮಾಜದ್ದಾಗಿದೆ. ಬಸನಗೌಡ ತುರ್ವಿಹಾಳ ಕೂಡ ಭೋವಿ ಸಮಾಜದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದಾರೆ ಎಂದರು.
ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಮಾತನಾಡಿ ಬಸನಗೌಡ ತುರ್ವಿಹಾಳ ಅವರ ಚುನಾವಣೆಯಲ್ಲಿ ಕೆಲ ಗ್ರಾಮಗಳಲ್ಲಿ ಸಾರ್ವಜನಿಕರ ಬೇಡಿಕೆ ಸ್ಪಂದಿಸುವುದಾಗಿ ಮಾತು ಕೊಡಲಾಗಿದೆ ಅದರಂತೆ ಬಸನಗೌಡ ತುರ್ವಿಹಾಳ ಸಹಕಾರ ನೀಡುವಂತೆ ಸೂಚಿಸಿದರು.
ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಮಾತನಾಡಿದರು. ಬೋವಿ ವಡ್ಡರ್ ಸಮಾಜದ ಯುವ ಮುಖಂಡ ರವಿ ಚಿಗರಿ ಭೋವಿ ಸಮಾಜಕ್ಕೆ 50 ಲಕ್ಷ ರೂ.ಗಳಲ್ಲಿ ಸಮುದಾಯ ಭವನ, ಮುಂಬರುವ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ನಮ್ಮ ಸಮಾಜದ ಅರ್ಹರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಶ್ರೀಶೈಲಪ್ಪ ಬ್ಯಾಳಿ, ಹನುಮಂತಪ್ಪ ಮುದ್ದಾಪುರ, ಮಹಾಂತೇಶ ಮುದಗಲ್, ಮಹಾಂತೇಶ ಜಾಲವಾಡಗಿ, ಶೇಖರ ಜಾಲಿ , ದುರಗಪ್ಪ ಚಿಗರಿ ಇದ್ದರು