ಬೂತ್ ಮಟ್ಟದಲ್ಲಿ ಪಕ್ಷ ಪುನರ್ ಸಂಘಟಿಸಲು ತಿರ್ಮಾನ

ಬಿಜೆಪಿ ಕೋರ್ ಕಮಿಟಿ-ಪದಾಧಿಕಾರಿಗಳ ಸಭೆ
ಮಸ್ಕಿ: ಬೂತ್ ಮಟ್ಟದಲ್ಲಿ ಪಕ್ಷ ಪುನರ್ ಸಂಘಟಿಸಲು ತಿರ್ಮಾನ

e-ಸುದ್ದಿ ಮಸ್ಕಿ

ಮಸ್ಕಿ: ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪರಭಾವಗೊಂಡಿದ್ದ ಬಿಜೆಪಿ ಇದೀಗ ಬೂತ್ ಮಟ್ಟದಲ್ಲಿ ಪಕ್ಷವನ್ನು ಪುನರ್ ಸಂಘಟನೆಗೆ ಮುಂದಾಗಿದೆ.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಮಂಡಲ ಪಕ್ಷದ ಕೋರ್ ಕಮಿಟಿ ಸಭೆ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಕಮಿಟಿ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ನಿರ್ಣಯ ಕೈಗೊಂಡರು.
ಸಭೆಯಲ್ಲಿ ಮಾತನಾಡಿದ ಪಕ್ಷದ ಮಂಡಲ  ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಉಪ ಚುನಾವಣೆಯಲ್ಲಿ ನಾವು ಗೆಲ್ಲಬೇಕಾಗಿತ್ತು. ಆದರೆ. ನಮಗೆ ಪರಭಾವವಾಗಿದೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಹಾಗೂ ಮಸ್ಕಿ ಪುರಸಭೆ ಹಾಗೂ ಬಳಗಾನೂರು ತುರ್ವಿಹಾಳ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುನಃ ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು.
ಇದಕ್ಕಾಗಿ ನಿಷ್ಕ್ರಿಯಗೊಂಡ ಭೂತ ಸಮಿತಿಗಳನ್ನು ಪುನರ್ ಸಂಘಟಿಸಲಾಗುವುದು. ಬೂತ್ ಮಟ್ಟದಲ್ಲಿಯೇ ಸಭೆ ನಡೆಸಿದ ಅದರ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಪಕ್ಷದ ಕಾರ್ಯಕರ್ತರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು, ಬೂತ್ ಕಮಿಟಿ, ಪೇಜ್ ಪ್ರಮುಖ ಹಾಗೂ ಪಂಚರತ್ನ ಸಮಿತಿಗಳ ಪದಾಧಿಕಾರಿಗಳು ಶಕ್ತಿಮೀರಿ ಕೆಲಸ ಮಾಡಬೇಕು ಎಂದರು.
ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ದೇಶಪಾಂಡೆ, ಜಿಲ್ಲಾ ಕಾರ್ಯದರ್ಶಿ ಶಾರದಾ ರಾಠೋಡ, ಎಸ್ಸಿ ಮೊರ್ಚ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಉಮಲೂಟಿ, ವಿಶ್ವನಾಥ ರೆಡ್ಡಿ ಅಮಿನಗಡ, ಮಲ್ಲಪ್ಪ ಅಂಕುಶದೊಡ್ಡಿ, ಮಂಡಲ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಯಾದವ್, ಎಸ್ಟಿ ಮೊರ್ಚದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಿ. ವೆಂಕಟೇಶ ನಾಯಕ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಹಾಗೂ ಪಕ್ಷದ ವಿವಿಧ ಮೊರ್ಚಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 

Don`t copy text!